ರಾಜ್ಯ

ಮಹಿಳೆಯರು, ಮಕ್ಕಳಿಗಾಗಿ 'ಇಂದಿರಾ ಸಾರಿಗೆ' ಸೇವೆ ಶೀಘ್ರ ಪ್ರಾರಂಭ: ಎಚ್.ಎಂ.ರೇವಣ್ಣ

Raghavendra Adiga
ಬೆಂಗಳೂರು: "ಇಂದಿರಾ ಗಾಂಧಿ ಜನ್ಮ ಶತಮಾನೋತ್ಸವ ಪ್ರಯುಕ್ತ ಮಹಿಳೆಯರು ಮತ್ತು ಮಕ್ಕಳಿಗಾಗಿ ಇಂದಿರಾ ಸಾರಿಗೆ ಪ್ರಾರಂಭಿಸಲಿದ್ದೇವೆ" ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಹೇಳಿದ್ದಾರೆ. 
"ಮಹಿಳೆಯರು ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಗರದ ಆಯ್ದ ಪ್ರದೇಶಗಳಿಗೆ ಇಂದಿರಾ ಸಾರಿಗೆ  ಸೇವೆ ಪ್ರಾರಂಭಿಸಲಾಗುವುದು ಇಂದಿರಾ ಗಾಂಧಿ ಜನ್ಮಶತಮೋತ್ಸವ ನ.19ರಂದು ನಡೆಯಲಿದ್ದು, ಈ ಸಂದರ್ಭದಲ್ಲೇ ಹೊಸ ಬಸ್‌ ಸೇವೆ ಆರಂಭಿಸಲು ಯೋಜನೆ ರೂಪಿಸಲಾಗಿದೆ ಬಿಎಂಟಿಸಿ ಅಡಿಯಲ್ಲಿಯೇ ಈ ನೂತನ ಸೇವೆ ಸಹ ಲಭ್ಯವಾಗಲಿದೆ."
ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಬಿಎಂಟಿಸಿ ಆಯೋಜಿಸಿದ್ದ 94ನೇ ಬಸ್ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾರಿಗೆ ಸಚಿವರು "ಮಹಿಳಾ ಪ್ರಯಾಣಿಕರ ಹಿತಾಸಕ್ತಿ, ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು ಈ ಕ್ರಮ ಕೈಗೊಳ್ಳುತ್ತಿದ್ದೇವೆ" ಎಂದಎರು.
"ಬೆಂಗಳೂರು ನಗರ ಸಾರಿಗೆ ವ್ಯವಸ್ಥೆ ಸುಧಾರಿಸುವ ಉದ್ದೇಶದಿಂದ ಹೊಸತಾಗಿ ಮೂರು ಸಾವಿರ ಬಸ್‌ ಗಳನ್ನು ರಸ್ತೆಗಿಳಿಸಲಾಗಿದೆ. ಹೈದರಾಬಾದ್ – ಕರ್ನಾಟಕ ಭಾಗದ ಸಾರಿಗೆ ವ್ಯವಸ್ಥೆ  ಸೇರಿದಂತೆ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ನಗರ ಸಾರಿಗೆ ವ್ಯವಸ್ಥೆ  ಉತ್ತಮಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಅವರು ಹೇಳಿದರು.
"ಬಿಎಂಟಿಸಿ ಸಂಸ್ಥೆ ರಾಷ್ಟ್ರಮಟ್ಟದಲ್ಲೇ ಅತ್ಯುತ್ತಮ ಸಂಸ್ಥೆಯಾಗಿದ್ದು 106 ಪ್ರಶಸ್ತಿ ಪಡೆದಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ" ಎಂದು ರೇವಣ್ಣ ನುಡಿದರು.
SCROLL FOR NEXT