ರಾಜ್ಯ

ಮೂರು ದಿನಗಳ ಐತಿಹಾಸಿಕ ಹಂಪಿ ಉತ್ಸವಕ್ಕೆ ತೆರೆ

Manjula VN
ಹಂಪಿ: ಸಾಂಸ್ಕೃತಿ ಕಾರ್ಯಕ್ರಮಗಳು, ವಿದ್ಯುದೀಪಾಲಂಕಾರದಿಂದ ಲಕ್ಷಾಂತರ ಜನರ ಕಣ್ಮನ ಸೆಳೆದಿದ್ದ ಐತಿಹಾಸಿಕ ಹಂಪಿ ಉತ್ಸವಕ್ಕೆ ಭಾನುವಾರ ರಾತ್ರಿ ಸಂಭ್ರಮದ ತೆರೆ ಬಿದ್ದಿತು. 
ಮೂರು ದಿನಗಳ ನಡೆಸಲಾದ ಹಂಪಿ ಉತ್ಸವದ ಕೊನೆಯ ದಿನವಾಗ ಭಾನುವಾರ ಸಾಗರೋಪಾದಿಯಲ್ಲಿ ಜನರು ಹರಿದು ಬಂದಿದ್ದರು. ಸಾಂಸ್ಕೃತಿಕ ವೇದಿಕೆಗಳ ಮುಂದೆ ಜಮಾಯಿಸಿ ಜನೋತ್ಸವದ ವಾತಾವರಣ ಇಮ್ಮಡಿಗೊಳಿಸಿದರು. 
ಹಂಪಿಯ ವಿವಿಧೆಡೆಗಳಲ್ಲಿ ನಿರ್ಮಿಸಿದ್ದ 12 ವೇದಿಕೆಗಳಲ್ಲಿ ನಡೆದ ಕಾರ್ಯಕ್ರಮಗಳು ಭಾನುವಾರ ರಾತ್ರಿ ಭರ್ತಿಯಾಗಿದ್ದವು. 3 ದಿನಗಳಲ್ಲಿ ಸುಮಾರು 4 ಲಕ್ಷಕ್ಕೂ ಹೆಚ್ಚು ಜನರು ಉತ್ಸವದ ಸಂಭ್ರಮದಲ್ಲಿ ಭಾಗಿಯಾಗಿದ್ದರು. 
ಹಂಪಿ ಉತ್ಸವದ ಕಾರಣೀಕರ್ತರಾದ ಎಂ.ಪಿ ಪ್ರಕಾಶ್ ಅವರ ಸ್ಮರಣಾರ್ಥವಾಗಿ ನಿರ್ಮಿಸಲಾಗಿದ್ದ ವೇದಿಕೆಯಲ್ಲಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕಲಾವಿದರು ಪ್ರದರ್ಶನಗಳನ್ನು ನೀಡಿದ್ದರು. 

ಸಮಾರೋಪ ಭಾಷಣ ಮಾಡಿದ ಸಚಿವ ಸಂತೋಷ್ ಲಾಡ್ ಅವರು, ಹಂಪಿ ಉತ್ಸವ ಇಷ್ಟೊಂದು ಖ್ಯಾತಿ ಪಡೆದುಕೊಳ್ಳುತ್ತಿದೆ. ಅದಕ್ಕೆ ಪ್ರಮುಖ ಕಾರಣ ದಿವಂಗತ ಎಂ.ಪಿ. ಪ್ರಕಾಶ್ ಅವರು ಎಂದು ಸ್ಮರಿಸಿದರು. 

ವರ್ಷದಿಂದ ವರ್ಷಕ್ಕೆ ಉತ್ಸವ ಜನಾಕರ್ಷಣೀಯವಾಗುತ್ತಿದ್ದು, ಪ್ರಸಕ್ತ ವರ್ಷ 5 ಲಕ್ಷಕ್ಕೂ ಹೆಚ್ಚು ಮಂದಿ ಉತ್ಸವಕ್ಕೆ ಆಗಮಿಸಿದ್ದಾರೆ. ಕಳೆದ ವರ್ಷ ಜಿಲ್ಲಾ ಆಡಳಿತ ಮಂಡಳಿಯ ಅಧಿಕಾರಿಗಳು 365 ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಈ ಬಾರಿ 405 ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಹಂಪಿ ಉತ್ಸವಕ್ಕೆ ಬಹುತೇಕ ಯುವಕರೇ ಆಗಮಿಸಿದ್ದು ಪ್ರಮುಖವಾಗಿದೆ. ಭವಿಷ್ಯದಲ್ಲಿ ಮತ್ತಷ್ಟು ಯುವಕರನ್ನು ಆಕರ್ಷಿಸಲು ಕಾರ್ಯಗಳನ್ನು ನಡೆಸಲಾಗುತ್ತದೆ ಎಂದು ಹೇಳಿದ್ದಾರೆ. 
SCROLL FOR NEXT