ಹಾವೇರಿ: ರಾಜ್ಯ ಸರ್ಕಾರ ನೇಕಾರರಿಗೆ ಸಾಲ ಮನ್ನಾ ಭಾಗ್ಯ ಘೋಷಿಸಿದ್ದು, ಸಹಕಾರ ಸಂಘಗಳಲ್ಲಿ ನೇಕಾರಿಕೆಗಾಗಿ ಪಡೆದ ನೇಕಾರರ 50 ಸಾವಿರ ರುಪಾಯಿ ವರೆಗಿನ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ಜವಳಿ ಸಚಿವ ರುದ್ರಪ್ಪ ಲಮಾಣಿ ಅವರು ಸೋಮವಾರ ಹೇಳಿದ್ದಾರೆ. ಘೋಷಣೆ ಮಾಡಿದರು.
ಇಂದು ಹಾವೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಲಮಾಣಿ ಅವರು, ನೇಕಾರರ ಒಟ್ಟು 9000 ನೇಕಾರರ 55.17 ಕೋಟಿ ರುಪಾಯಿ ಸಾಲ ಮತ್ತು ಬಡ್ಡಿಯನ್ನು ಮನ್ನಾ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಿದ ಮಾದರಿಯಲ್ಲಿಯೇ ಈ ಸಾಲವನ್ನು ಮನ್ನಾ ಮಾಡಲಾಗುತ್ತಿದ್ದು, ಈ ವಿಚಾರವನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ತಿಳಿಸಿದ್ದಾರೆ. ಜವಳಿ ಸಚಿವರಾದ್ದರಿಂದ ನೀವೇ ಈ ಘೊಷಣೆ ಮಾಡಿ ಎಂದು ಹೇಳಿದ್ದರು. ಆದ್ದರಿಂದ, ಜವಳಿ ಸಚಿವನನಾಗಿ ನಾನೇ ಸಾಲ ಮನ್ನಾ ಭಾಗ್ಯ ಘೋಷಣೆ ಮಾಡಿದ್ದೇನೆ ಎಂದು ರುದ್ರಪ್ಪ ಲಮಾಣಿ ಅವರು ವಿವರಣೆ ನಿಡಿದರು.
ಇದೇ ವೇಳೆ ಮಾನವ ಚಾಲಿತ ನೇಕಾರಿಕೆ ನಡೆಯುತ್ತಿರುವಲ್ಲಿ ಅರ್ಥ ಎಚ್.ಪಿ.ಯ ಯಂತ್ರಗಳನ್ನು ಅಳವಡಿಸಿ ನೇಯ್ಗೆಗೆ ಅನುಕೂಲ ಕಲ್ಪಿಸಲು ಸರ್ಕಾರ ಆಲೋಚಿಸಿದೆ. ಇದಕ್ಕಾಗಿ ಯಂತ್ರ ಖರೀದಿಗೆ ಸಹಾಯಧನ ಒದಗಿಸುವ ಬಗ್ಗೆ ಚಿಂತನೆ ನಡೆಸಿದೆ ಎಂದು ಅವರು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics