ಸಿಎಂ ಎದುರು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ
ಬೆಂಗಳೂರು: ಕನಕದಾಸ ಜಯಂತಿಯಂದು ಸಿಎಂ ಸಿದ್ದರಾಮಯ್ಯ ಭಾಷಣ ಮಾಡುವಾಗ ವ್ಯಕ್ತಿಯೊಬ್ಬ ಎದ್ದು ನಿಂತು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವಿಧಾನಸೌಧದಲ್ಲಿ ನಡೆದಿದೆ.
ಮೈಸೂರು ಮೂಲದ ಪರಶುರಾಮ್ ಎಂಬ 55 ವರ್ಷದ ಕೆಪಿಎಸ್ಸಿ ಅಭ್ಯರ್ಥಿಯೋರ್ವ ತನಗೆ ನೇಮಕಾತಿ ಆದೇಶ ಕೊಡಲಿಲ್ಲ, ಇದರಿಂದ ನನಗೆ ಅನ್ಯಾಯವಾಗಿದೆ ಎಂದು ಕೂಗಾಡುತ್ತಾ ಮುಖ್ಯಮಂತ್ರಿ ಎದುರೇ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ, ಕೂಡಲೇ ಆವನನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಯಿತು.
ತಾನು ಕೆಪಿಎಸ್ ಸಿ 1993 ನೇ ಬ್ಯಾಚಿನ ಅಭ್ಯರ್ಥಿಯಾಗಿದ್ದು, ತನಗೆ ನೇಮಕಾತಿ ಆದೇಶ ಕೊಡದ ಕಾರಣ ಅನ್ಯಾಯವಾಗಿದೆ, ತನ್ನ ಉತ್ತರ ಪತ್ರಿಕೆಯನ್ನು ಕೆಪಿಎಸ್ಸಿ ಬದಲು ಮಾಡಿದೆ ಎಂದು ಆರೋಪಿಸಿದ್ದಾನೆ. ನಂತರ ಅಲ್ಲಿಗೆ ಬಂದ ಪೊಲೀಸ್ ಸಿಬ್ಬಂದಿ ಆತನನ್ನು ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಿಂದ ಹೊರಗೆ ಕರೆದುಕೊಂಡು ಬಂದಿದ್ದಾರೆ. ಮೈಸೂರು ಮೂಲದ ಆತ ಬೆಳಗ್ಗೆ 8 ಗಂಟೆಗೆ ಕಾರ್ಯಕ್ರಮಕ್ಕೆ ಕೀಟನಾಶಕದ ಬಾಟಲಿಯೊಂದಿಗೆ ಆಗಮಿಸಿದ್ದ.