ಬೆಳಗಾವಿ ಅಧಿವೇಶನ: ಮೊದಲ ದಿನವೇ ಖಾಲಿ ಕುರ್ಚಿಗಳ ದರ್ಶನ, ಶಾಸಕರ ಗೈರಿಗೆ ಕೋಳಿವಾಡ ಬೇಸರ 
ರಾಜ್ಯ

ಬೆಳಗಾವಿ ಅಧಿವೇಶನ: ಮೊದಲ ದಿನವೇ ಖಾಲಿ ಕುರ್ಚಿಗಳ ದರ್ಶನ, ಶಾಸಕರ ಗೈರಿಗೆ ಕೋಳಿವಾಡ ಬೇಸರ

ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಮೊದಲ ದಿನ ಶಾಸಕರ ಹಾಜರಾತಿ ಅತ್ಯಂತ ವಿರಳವಾಗಿತ್ತು.

ಬೆಳಗಾವಿ: ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಮೊದಲ ದಿನ ಶಾಸಕರ ಹಾಜರಾತಿ ಅತ್ಯಂತ ವಿರಳವಾಗಿತ್ತು. ಮೊದಲ ದಿನದ ಅಧಿವೇಶನ ಪ್ರಾರಂಭವಾದಾಗ ಒಟ್ಟು ಶಾಸಕರ ಪೈಕಿ ಶೇ .10 ರಷ್ಟು ಕೇವಲ 22 ಶಾಸಕರು ಮಾತ್ರ ಉಪಸ್ಥಿತರಿದ್ದರು. ದಿನದ ಅಂತ್ಯದ ವೇಳೆಗೆ 224 ಶಾಸಕರ ಪೈಕಿ 80 ಮಂದಿ ಅಷ್ಟೇ ಹಾಜರಿದ್ದರು.
ಆರಂಭದ ದಿನವೇ ಅಗತ್ಯ ಕೋರಂ ಇಲ್ಲದಿದ್ದರಿಂದ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಬೇಸರ ವ್ಯಕ್ತಪಡಿಸಿದರು. ಬೆಳಿಗ್ಗೆ 11ಗಂಟೆಗೆ ಸದನ ಪ್ರಾರಂಭವಾಗಬೇಕಾಗಿದ್ದಾಗ ಅಗತ್ಯ ಸಂಖ್ಯೆಯಲ್ಲಿ ಸದಸ್ಯರು ಇಲ್ಲದ ಕಾರಣ ಸದನವನ್ನು ಕೆಲ ಕಾಲ ಮುಂದೂಡಬೇಕಾಯಿತು.
"ಕೋರಂ ಇಲ್ಲದಿರುವುದರಿಂದ ನೋವಿನಿಂದ ಸದನವನ್ನು ಕೆಲ ಸಮಯ ಮುಂದೂಡುತ್ತಿದ್ದೇನೆ" ಎಂದ ಸಭಾಧ್ಯಕ್ಷ  ಕೋಳಿವಾಡ ಹೇಳಿದ್ದ ಸಮಯದಲ್ಲಿ ಪ್ರಮುಖ ಸಚಿವರುಗಳಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಕಂದಾಯ ಮಂತ್ರಿ ಕಾಗೋಡು ತಿಮ್ಮಪ್ಪ ಮಾತ್ರವೇ ಉಪಸ್ಥಿತರಿದ್ದರು.. ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಹಿರಿಯ ಕ್ಯಾಬಿನೆಟ್ ಮಂತ್ರಿಗಳು ಮತ್ತು ಇತರ ಪ್ರಮುಖ ನಾಯಕರು ಸಹ ನಂತರ ಸಭೆಗೆ ಆಗಮಿಸಿದ್ದರು..
224-ಸದಸ್ಯರ ಬಲದ ವಿಧಾನ ಸಭೆಯಲ್ಲಿ 80 ಸದಾಸ್ಯರು ಮಾತ್ರವೇ ಹಾಜರಾಗಿದ್ದರು. ಅವರುಗಳಲ್ಲಿ 6 ಜೆಡಿ (ಎಸ್) , 15 ಬಿಜೆಪಿ ಮತ್ತು 51 ಕಾಂಗ್ರೆಸ್ ಶಾಸಕರು ಸೇರಿದ್ದಾರು. ಶಾಸಕರಲ್ಲಿನ ಈ ಅಸಡ್ಡೆಯ ಮನೋಭಾವನೆ ವಿಧಾನ ಮಂಡಲ ಅಧಿವೇಶನದ ಕುರಿತಂತೆ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟಿಸಿದೆ. ಬೆಳಗಾವಿ ಅಧಿವೇಶನ ಕೇವಲ ವಾರ್ಷಿಕ ಕಾರ್ಯಕ್ರಮವೆ? ಎನ್ನುವಂತಹಾ ಪ್ರಶ್ನೆಯನ್ನು ಅದು ಎತ್ತಿದೆ.
ಸುವರ್ಣ ವಿಧಾನ ಸೌಧವನ್ನು 400 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆದರೆ ಇದನ್ನು ವರ್ಷದಲ್ಲಿ ಕೇವಲ ಒಂದು ವಾರವಷ್ಟೇ ಬಳಸಲಾಗುತ್ತದೆ. ಉಳಿದ 350 ದಿನಗಳು ಖಾಲಿ ಇರುತ್ತದೆ . ಬೆಳಗಾವಿಯಲ್ಲಿ ನಡೆಯುತ್ತಿರುವ 10 ದಿನಗಳ ಅಧಿವೇಶನಕ್ಕೆ 26 ಕೋಟಿ  ರೂ. ವೆಚ್ಚವಾಗಲಿದೆ. ಅಂದರೆ ಒಂದು  ದಿನಕ್ಕೆ 2.6 ಕೋಟಿ  ರೂ.ಖರ್ಚು ತಗುಲಲಿದೆ. ಇಷ್ಟೋಂದು ದುಬಾರಿ ಖರ್ಚು ವೆಚ್ಚಗಳಲ್ಲಿ ನಡೆವ ಅಧಿವೇಶನಕ್ಕೆ ಶಾಸಕರು ಹಾಜರಾಗದೆ ಇದ್ದಲ್ಲಿ ಜನಸಾಮಾನ್ಯರ ಸಮಸ್ಯೆ ಪರಿಹಾರವಾಗುವುದೆ? ತೆರಿಗೆದಾರರ ಹಣವನ್ನು ಪೋಲು ಮಾಡಿದಂತಾಗುವುದಿಲ್ಲವೆ ಎನ್ನುವುಉದು ಪ್ರತಿಯೊಬ್ಬ ನಾಗರಿಕನ ಪ್ರಶ್ನೆಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT