ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಗ್ಯಾಸ್ ಸಿಲಿಂಡರ್ ಸ್ಪೋಟ, ಒಂದೇ ಕುಟುಂಬದ ನಾಲ್ವರಿಗೆ ಗಾಯ, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು

ಎಲ್ಪಿಜಿ ಸೋರಿಕೆಯಿಂದ ಸ್ಪೋಟ ಸಂಭವಿಸಿ ಕುಟುಂಬದ ನಾಲ್ವರು ತೀವ್ರವಾಗಿ ಗಾಯಗೊಂದ ಘಟನೆ ಬಂಗಳೂರಿನ ಹೆಬ್ಬಗೋಡಿ ತಿರುಪಾಳ್ಯದಲ್ಲಿ ಸಂಭವಿಸಿದೆ.

ಬೆಂಗಳುರು: ಎಲ್ಪಿಜಿ ಸೋರಿಕೆಯಿಂದ ಸ್ಪೋಟ ಸಂಭವಿಸಿ ಕುಟುಂಬದ ನಾಲ್ವರು ತೀವ್ರವಾಗಿ ಗಾಯಗೊಂದ ಘಟನೆ ಬಂಗಳೂರಿನ ಹೆಬ್ಬಗೋಡಿ ತಿರುಪಾಳ್ಯದಲ್ಲಿ ಸಂಭವಿಸಿದೆ. ಗಾಯಗೊಂಡವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರ ಸ್ಥಿತಿ ಗಂಭೀರವಾಗಿದೆ ಂದು ತಿಳಿದು ಬಂದಿದೆ. 
ಗಾಯಗೊಂದವರನ್ನು ವಿಕಾಸ್ ಪ್ರಧಾನ್, ಆತನ ಪತ್ನಿ ಕರ್ಣಾ, ಆತನ ಸೋದರರಾದ ದೇವನ್ ಮತ್ತು ಚವಾಣ್ ಎಂದು ಗುರುತಿಸಲಾಗಿದ್ದು ಅಸ್ಸಾಂ ನಿಂದ ನಗರಕ್ಕೆ ಬಂದು ನೆಲೆಲ್ಸಿದ್ದರು ಎನ್ನಲಾಗಿದೆ. ದಂಪತಿಗಳು ನಗರದ ಗಾಜಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು.
ಬೆಳಗ್ಗೆ 6.50 ಕ್ಕೆ ಈ ದುರ್ಘಟನೆ ಸಂಭವಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗಾಯಗೊಂಡವರಲ್ಲಿ ಒಬ್ಬರು ಬೆಳಗ್ಗೆ ಎದ್ದು ಚಹಾ ಮಾಡುವ ಸಲುವಾಗಿ ಗ್ಯಾಸ್ ಆನ್ ಮಾಡಿದ್ದಾರೆ.ಗ್ಯಾಸ್ ನ ರೆಗ್ಯುಲೇಟರ್ ಸರಿಯಾಗಿರದ ಕಾರಣ ಅದನ್ನು ಬದಲಿಸುವ ಅಗತ್ಯವಿದ್ದಿತ್ತು. ಆದರೆ ಕುಟುಂಬದ ಸದಸ್ಯರು ಅದನ್ನು ನಿರ್ಲಕ್ಷಿಸಿದ್ದರು ಎಂದು ಹೆಬ್ಬಗೋಡಿ ಠಾಣೆ ಪೋಲೀಸರು ಹೇಳಿದ್ದಾರೆ. 
ಎರಡು ವರ್ಷಗಳ ಹಿಂದೆ ನಾಲ್ಕು ಅಂತಸ್ತಿನ ಕಟ್ಟಡದ ಎರಡನೆಯ ಮಹಡಿಯಲ್ಲಿ ದಂಪತಿ ಮನೆ ಬಾಡಿಗೆಗೆ ತೆಗೆದುಕೊಂಡಿದ್ದರು ಎಂದು ಕಟ್ಟಡದ ಮಾಲೀಕ ಶ್ರೀನಿವಾಸ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. ಪಿಯು ಶಿಕ್ಷಣ ಪೂರೈಸಿದ್ದ ದೇವನ್ ಹಾಗೂ ಚವಾಣ್ ಕಳೆದೆಂಟು ದಿನದ ಹಿಂದಷ್ಟೇ ನಗರಕ್ಕೆ ಆಗಮಿಸಿದ್ದರು ಎಂದು ಪೋಲೀಸರು ಮಾಹಿತಿ ನೀಡಿದರು. ಘಟನೆ ಸಂಬಂಧ ಹೆಬ್ಬಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾಂತಾರಾ ಅಪಹಾಸ್ಯ ಪ್ರಕರಣ: 'ಸೂಪರ್ ಸ್ಟಾರ್ ಆದ್ರೇನು.. ನಾಲಿಗೆ ಮೇಲೆ ಹಿಡಿತ ಇರ್ಬೇಕು..': ನಟ ರಣವೀರ್ ಸಿಂಗ್ ಹೈಕೋರ್ಟ್ ಚಾಟಿ!

ಸರ್ಕಾರಿ ಉದ್ಯೋಗ ಭರ್ತಿ ಆಗ್ತಿಲ್ಲ, ಅದಕ್ಕೆ ನಿರುದ್ಯೋಗಿಗಳಿಗೆ 3 ಸಾವಿರ ಕೊಡ್ತೀರೋದು: ಡಿಕೆ ಶಿವಕುಮಾರ್

ಶಿವಮೊಗ್ಗದಲ್ಲಿ ಶಾಲಾ ಬಾಲಕನ ಹತ್ಯೆ, 7 ಅಪ್ರಾಪ್ತರ ಬಂಧನ, 15 ಲಕ್ಷ ಪರಿಹಾರ ಘೋಷಣೆ

ಕೇಂದ್ರದಿಂದ 14 ವರ್ಷದ ಎಲ್ಲಾ ಬಾಲಕಿಯರಿಗೆ HPV ಲಸಿಕೆ ಅಭಿಯಾನ

ಅಂಡಮಾನ್‌: ಏಳು ಜನರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಸಮುದ್ರದಲ್ಲಿ ಪತನ; ಎಲ್ಲರ ರಕ್ಷಣೆ

SCROLL FOR NEXT