ರಾಜ್ಯ

ಲ್ಯಾಪ್'ಟಾಪ್'ಗೆ ಬೆಂಕಿ: ಇಂಡಿಗೋ ವಿಮಾನದಲ್ಲಿ ಕೆಲಕಾಲ ಆಂತಕ

Manjula VN
ಬೆಂಗಳೂರು: ಕೇರಳದ ತಿರುವನಂತಪುರದಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಲ್ಯಾಪ್ ಟಾಪ್ ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ವಿಮಾನದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. 
ವೈಯಕ್ತಿಕ ಎಲೆಕ್ಟ್ರಾನಿಕ್ ಸಾಧನಗಳಾದ ಲ್ಯಾಪ್ ಟಾಪ್ ಸೇರಿದಂತೆ ಇತರೆ ವಸ್ತುಗಳನ್ನು ವಿಮಾನ ಪ್ರಯಾಣಿಕರು ತಮ್ಮ ಜೊತೆಗೆ ಕೊಂಡೊಯ್ಯುವುದನ್ನು ನಿಷೇಧಿಸಲು ನಾಗರಿಕ ವಿಮಾನಯಾನ ಇಲಾಖೆ ಚಿಂತನೆ ನಡೆಸುತ್ತಿದೆ ಎಂಬ ವರದಿಗಳ ಬೆನ್ನಲ್ಲೇ ಈ ಘಟನೆ ನಡೆದಿದೆ. 
ನ.11 ರಂದು ತಿರುವನಂತಪುರ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ 6ಇ-445 ಸಂಖ್ಯೆಯೇ ಇಂಡಿಗೋ ವಿಮಾನದಲ್ಲಿ ಬ್ಯಾಗ್ ನೊಳಗೆ ವಸ್ತುವೊಂದು ಸುಡುತ್ತಿರುವ ವಾಸನೆ ಕಂಡು ಬಂದಿತ್ತು. ಈ ವೇಳೆ ಕಾರ್ಯಪ್ರವೃತ್ತರಾದ ವಿಮಾನದ ಸಿಬ್ಬಂದಿಗಳು 24 ಆರ್'ಹೆಚ್ ಸೀಟಿನಲ್ಲಿ ಕುಳಿತಿದ್ದ ಪ್ರಯಾಣಿಕರನ್ನು ಪಕ್ಕಕ್ಕೆ ಸರಿಸಿ ಬ್ಯಾಗ್ ನೊಳಗೆ ಬೆಂಕಿಗೆ ತುತ್ತಾಗುತ್ತಿದ್ದ ಲ್ಯಾಪ್ ಟಾಪ್ ಅನ್ನು ಹೊರತೆಗೆದು ನೀರಿನ ಪಾತ್ರೆಗೆ ಹಾಕಿದ್ದಾರೆ. 
ಅದೃಷ್ಟವಶಾತ್ ಯಾವುದೇ ಅನಾಹುತಗಳಾಗಿಲ್ಲ. ಈ ವೇಳೆಯೂ ಆಂತಕಕ್ಕೊಳಗಾಗದ ಪೈಲಟ್, ವಿಮಾನವನ್ನು ಸುರಕ್ಷಿತವಾಗಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಿಸಿದ್ದಾರೆ. ತಾನೇ ಸ್ವಯಂಪ್ರೇರಿತವಾಗಿ ಈ ವಿಚಾರವನ್ನು ವಿಮಾನಯಾನ ನಿರ್ದೇಶನಾಲಯದ ಗಮನಕ್ಕೆ ತಂದಿರುವುದಾಗಿ ಇಂಡಿಗೋ ವಕ್ತಾರ ಹೇಳಿದ್ದಾರೆ. 
SCROLL FOR NEXT