ರಾಜ್ಯ

ಕೆಪಿಎಂಇ ಕಾಯ್ದೆ ವಿವಾದ: ಇಂದು ಉಭಯ ಸದನಗಳಲ್ಲಿ ಮಂಡನೆ

Manjula VN
ಬೆಂಗಳೂರು: ರಾಜ್ಯದಲ್ಲಿ ತೀವ್ರ ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿರುವ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕ ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲದ ಅಧಿವೇಶನದ ಕಲಾಪದಲ್ಲಿ ಸೋಮವಾರ ಮಂಡನೆಯಾಗಲಿದೆ ಎಂದು ಹೇಳಲಾಗುತ್ತಿದೆ. 
ಈ ಹಿಂದೆ ಕೆಪಿಎಂಇ ತಿದ್ದುಪಡಿ ಕಾಯ್ದೆಯನ್ನು ಮಂಡನೆ ಮಾಡಲು ಮುಂದಾಗಿದ್ದ ಸರ್ಕಾರದ ವಿರುದ್ಧ ಖಾಸಗಿ ವೈದ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ರಾಜ್ಯದಾದ್ಯಂತ ಖಾಸಗಿ ಆಸ್ಪತ್ರೆಗಳನ್ನು ಬಂದ್ ಮಾಡಿ ಪ್ರತಿಭಟನೆಗಳನ್ನು ನಡೆಸಿದ್ದವು. ಖಾಸಗಿ ವೈದ್ಯರ ಪ್ರತಿಭಟನೆಯಿಂದಾಗಿ ರಾಜ್ಯದ ಹಲವೆಡೆ ರೋಗಿಗಳು ಪರದಾಡುವಂತಾಗಿತ್ತು. ಸಕಾಲಕ್ಕೆ ಚಿಕಿತ್ಸೆ ದೊರಕದೆ ಹಲವು ರೋಗಿಗಳು ಸಾವನ್ನಪ್ಪಿದ್ದರು. 
ಬಳಿಕ ಕಳೆದ ಶುಕ್ರವಾರ ವೈದ್ಯರು ಹಾಗೂ ಸರ್ಕಾರದ ಜೊತೆಗೆ ನಡೆದ ಸುದೀರ್ಘ ಮಾತುಕತೆ ವೇಳೆ ಉದ್ದೇಶಿತ ಕರಡು ವಿಧೇಯಕದಲ್ಲಿ ಹಲವಾರು ಅಂಶಗಳನ್ನು ಕೈಬಿಡಬೇಕು ಇಲ್ಲವೇ, ಬದಲಾವಣೆ ಮಾಡಬೇಕೆಂಬ ಬೇಡಿಕೆಗೆ ಸರ್ಕಾರ ಒಪ್ಪಿಗೆ ನೀಡಿತ್ತು.
ಹೀಗಾಗಿ ಹಲವಾರು ಅಂಶಗಳ ಬದಲಾವಣೆ ಇಲ್ಲವೇ ಹೊಸದಾಗಿ ಸೇರ್ಪಡೆಯಾಗುವ ಅಂಶಗಳ ಬಗ್ಗೆ ಸರ್ಕಾರ ಕಾನೂನು ತಜ್ಞರ ಅಭಿಪ್ರಾಯ ಪಡೆದುಕೊಳ್ಳಲು ಮುಂದಾಗಿದ್ದು, ವಿಧೇಯಕದ ಕರಡಿಗೆ ಸಂಪುಟ ಒಪ್ಪಿಗೆ ನೀಡಿದ ನಂತರವೇ ವಿಧಾನಮಂಡಲದ ಅಧಿವೇಶನದಲ್ಲಿ ವಿಧೇಯಕ ಮಂಡನೆ ಮಾಡಬೇಕಾಗಿದೆ. 
SCROLL FOR NEXT