ರಾಜ್ಯ

ಶೀಘ್ರದಲ್ಲೇ ಬೆಂಗಳೂರಿನ ರಸ್ತೆಗಿಳಿಯಲಿವೆ ವಿದ್ಯುತ್ ಚಾಲಿತ ಬಸ್: ಸಚಿವ ರೇವಣ್ಣ

Lingaraj Badiger
ಬೆಳಗಾವಿ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯ ವಿವಿಧ ಡಿಪೋಗಳಲ್ಲಿ ಚಾರ್ಜಿಂಗ್ ಪಾಯಿಂಟ್ ಗಳನ್ನು ಸ್ಥಾಪಿಸುವ ಕಾರ್ಯ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ವಿದ್ಯುತ್ ಚಾಲಿತ ಬಸ್ ಗಳು  ಸಿಲಿಕಾನ್ ಸಿಟಿಯ ರಸ್ತೆಗಿಳಿಯಲಿವೆ ಎಂದು ಸಾರಿಗೆ ಸಚಿವ ಎಚ್ ಎಂ ರೇವಣ್ಣ ಅವರು ಬುಧವಾರ ವಿಧಾನಸಭೆಗೆ ತಿಳಿಸಿದ್ದಾರೆ. 
ಕಾಂಗ್ರೆಸ್ ಶಾಸಕ ಎನ್ ಎಚ್ ಹ್ಯಾರಿಸ್ ಅವರ ಪ್ರಶ್ನೆಗೆ ಉತ್ತರಿಸದ ಸಚಿವ ರೇವಣ್ಣ, ಕೇಂದ್ರ ಸರ್ಕಾರದ ವಿದ್ಯುತ್ ವಾಹನ ಅಳವಡಿಕೆ ಮತ್ತು ಉತ್ಪಾದನೆ ಯೋಜನೆಯಡಿ ವಿದ್ಯುತ್ ಬಸ್ ಗಳನ್ನು ಖರೀದಿಸಲಾಗುತ್ತಿದ್ದು, ಈ ಕುರಿತು ಇತ್ತೀಚಿಗೆ ನಡೆದ ಅಖಿಲ ಭಾರತ ಸಾರಿಗೆ ಸಚಿವರ ಸಭೆಯಲ್ಲಿ ಚರ್ಚಿಸಲಾಗಿತ್ತು ಎಂದು ಉತ್ತರಿಸಿದರು.
ಬಿಎಂಟಿಸಿ ದೇಶದಲ್ಲೇ ಮೊದಲ ಬಾರಿಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ವಿದ್ಯುತ್ ಚಾಲಿತ ಬಸ್ ಗಳನ್ನು ಬಳಕೆಗೆ ತರಲ ನಿರ್ಧರಿಸಿದ್ದು, ಈ ಮೂಲಕ ನಗರ ಸಾರಿಗೆಗೆ ಎಲೆಕ್ಟ್ರಿಕ್‌ ಬಸ್‌ಗಳನ್ನು ಬಳಸಲಿರುವ ದೇಶದ ಮೊದಲ ನಗರ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಲಿದೆ.
SCROLL FOR NEXT