ಸಾಂದರ್ಭಿಕ ಚಿತ್ರ 
ರಾಜ್ಯ

ಕೋಲಾರ ಬಳಿ ಭೀಕರ ಅಪಘಾತ: ನೆರವಿಗೆ ಬರುವ ಬದಲು ವಿಡಿಯೋ ಮಾಡುವತ್ತ ಜನರು ಮಗ್ನ!

ಬಂಗಾರಪೇಟೆ-ಕೆಜಿಎಫ್ ಮುಖ್ಯ ರಸ್ತೆಯಲ್ಲಿ ಹೆಚ್ ಜಿಆರ್ ರೆಸಾರ್ಟ್ ಹತ್ತಿರ ವೇಗವಾಗಿ ಬರುತ್ತಿದ್ದ ....

ಕೋಲಾರ: ಬಂಗಾರಪೇಟೆ-ಕೆಜಿಎಫ್ ಮುಖ್ಯ ರಸ್ತೆಯಲ್ಲಿ ಹೆಚ್ ಜಿಆರ್ ರೆಸಾರ್ಟ್ ಹತ್ತಿರ ವೇಗವಾಗಿ ಬರುತ್ತಿದ್ದ ಕಾರು ಬೈಕ್ ಗೆ ಡಿಕ್ಕಿ ಹೊಡೆದ ಕಾರಣ ರಕ್ತದ ಮಡುವಿನಲ್ಲಿ ಬಿದ್ದ ದ್ವಿಚಕ್ರ ವಾಹನ ಸವಾರನ್ನು ಆಸ್ಪತ್ರೆಗೆ ದಾಖಲಿಸುವ ಬದಲು ನೋಡುಗರು ಕರುಣೆಯಿಲ್ಲದೆ 
ವಿಡಿಯೊ ತೆಗೆಯುವುದರಲ್ಲಿ ನಿರತರಾಗಿದ್ದ ಘಟನೆ ನಿನ್ನೆ ನಸುಕಿನ ಜಾವ ನಡೆದಿದೆ.
ಕೋಲಾರದ ದಾಸರ ಹೊಸಹಳ್ಳಿಯ 20 ವರ್ಷದ ಜಾರ್ಜ್ ಎಂಬ ಯುವಕ ಮೃತಪಟ್ಟವನಾಗಿದ್ದಾರೆ. ಹಿಂಬದಿ ಸವಾರ ಶ್ರೀಕಾಂತ್ ಎಂಬುವವರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಇದೀಗ ಆಸ್ಪತ್ರೆಯಲ್ಲಿದ್ದಾರೆ. ಅಪರಿಚಿತ ಕಾರು ಕೆಜಿಎಫ್ ಕಡೆಗೆ ತೆರಳುತ್ತಿದ್ದು ಬಂಗಾರಪೇಟೆಯಲ್ಲಿ ನಿನ್ನೆ ನಸುಕಿನ ಜಾವ 4.30ರ ಸುಮಾರಿಗೆ ಬೈಕ್ ಗೆ ಡಿಕ್ಕಿ ಹೊಡೆಯಿತು.
ಅಪಘಾತವಾದ ನಂತರ ಕಾರು ಮತ್ತು ಹಲವು ದ್ವಿಚಕ್ರ ವಾಹನ ಸವಾರರು ಸ್ಥಳದಲ್ಲಿ ನಿಂತು ನೋಡಿದ್ದಾರೆಯೇ ಹೊರತು ಯಾರು ಕೂಡ ಗಂಭೀರ ಗಾಯಗೊಂಡ ಯುವಕರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮನಸ್ಸು ತೋರಲಿಲ್ಲ. 
ಸ್ಥಳಕ್ಕೆ ಆಂಬ್ಯುಲೆನ್ಸ್ ಬರುವುದು ತಡವಾಗಿತ್ತು. ಅಷ್ಟು ಹೊತ್ತು ನೋಡುಗರಲ್ಲಿ ಕೆಲವರು ಯುವಕರಿಬ್ಬರು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿ ವಿಡಿಯೊ ಮಾಡುತ್ತಿದ್ದರು. ಒಬ್ಬರು ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಂಬ್ಯುಲೆನ್ಸ್ ತಲುಪುವ ಹೊತ್ತಿಗೆ ಒಬ್ಬನ ಪ್ರಾಣಪಕ್ಷಿ ಹಾರಿಹೋಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು: ಅಭಿಜೀತ್ ದೀಪ್ಕೆ

ರಾಜ್ಯದ ಬಾಕಿ ಹಣದ ಬಗ್ಗೆ ನಿರ್ಮಲಾ ಸೀತಾರಾಮನ್ ಜೊತೆ ಚರ್ಚೆ: GST ಮಂಡಳಿ ಸಭೆ ಬಳಿಕ CM ಡಿಕೆ.ಶಿವಕುಮಾರ್ ಹರ್ಷ

ಉತ್ತರ ಭಾರತ ವ್ಯಕ್ತಿಯಿಂದ ಡಿಕೆಶಿ ಸಿಲುಕಿಸಲು ಯತ್ನ: ಸಚಿವ ಸತೀಶ್ ಜಾರಕಿಹೊಳಿ