ರಾಜ್ಯ

ಬೆಂಗಳೂರಿನ ರಸ್ತೆಗಳಲ್ಲಿ ಈಗಿರುವುದು ಕೇವಲ 25 ಗುಂಡಿಗಳು: ಬಿಬಿಎಂಪಿ ಅಂಕಿಅಂಶ

Sumana Upadhyaya
ಬೆಂಗಳೂರು: ನಗರದ ಸುತ್ತಮುತ್ತ ಇರುವ ಹೊಂಡ-ಗುಂಡಿಗಳ ಸಂಖ್ಯೆ ಕೇವಲ 25. ಈ ಸಂಖ್ಯೆ ನೋಡಿದರೆ ಅನೇಕರ ಹುಬ್ಬೇರಬಹುದು. ನಗರದ ಹಲವು ಭಾಗಗಳಲ್ಲಿ ಹೊಂಡ ಗುಂಡಿಗಳ ಮಧ್ಯೆಯೇ ಪ್ರಯಾಣಿಕರು ಸಂಚರಿಸಲು ಹರಸಾಹಸ ಪಡುತ್ತಿದ್ದರೆ, ಇತ್ತ ಮಹಾನಗರ ಪಾಲಿಕೆ ವಲಯ ಎಂಜಿನಿಯರ್ ಗಳು ನೀಡಿದ ಅಂಕಿಅಂಶಗಳ ಆಧಾರದ ಮೇಲೆ ಈ ಆಘಾತಕಾರಿ ಸಂಖ್ಯೆಯನ್ನು ಬಹಿರಂಗಪಡಿಸಿದ್ದಾರೆ. ಕೇವಲ ತಿಂಗಳ ಹಿಂದೆ ನಗರದ ರಸ್ತೆಗಳಲ್ಲಿ ಇದ್ದ ಹೊಂಡ ಗುಂಡಿಗಳ  ಸಂಖ್ಯೆ 20,000.
ಇದೀಗ ಹೊಸ 25 ಹೊಂಡ ಗುಂಡಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಕಂಡುಬಂದಿವೆ. ಅದನ್ನು ರಸ್ತೆ ಮೂಲ ಸೌಕರ್ಯ ಇಲಾಖೆ ನಿರ್ವಹಿಸುತ್ತಿದೆ. ಮಹಾನಗರ ಪಾಲಿಕೆಯ ಅಂಕಿಅಂಶ ಪ್ರಕಾರ, ಮುಖ್ಯ ಎಂಜಿನಿಯರ್ ಗಳ 8 ವಲಯಗಳು ಇದೀಗ ಹೊಂಡ ಗುಂಡಿಗಳಿಂದ ಮುಕ್ತವಾಗಿವೆ. ಇದಕ್ಕೂ ಮುನ್ನ ಮುಖ್ಯ ಎಂಜಿನಿಯರ್ ಗಳಿಗೆ ಆದೇಶ ನೀಡಿದ್ದ ಮುಖ್ಯಮಂತ್ರಿ, ನಗರದ ಸುತ್ತಮುತ್ತ ರಸ್ತೆಗಳಲ್ಲಿ ಹೊಂಡ ಗುಂಡಿಗಳು ಕಂಡುಬಂದರೆ ಮುಖ್ಯ ಎಂಜಿನಿಯರ್ ಗಳನ್ನು ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಹೇಳಿದ್ದರು.
ಬೆಳಗಾವಿ ಅಧಿವೇಶನದಲ್ಲಿ ಮೊನ್ನೆ 20ರ ವೇಳೆಗೆ 25 ಹೊಂಡ ಗುಂಡಿಗಳಿದ್ದು ಅವುಗಳನ್ನು ಮುಚ್ಚಬೇಕಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದರು. ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಸಿಕ್ಕಿರುವ ಅಂಕಿಅಂಶ ಪ್ರಕಾರ, ಪಾಲಿಕೆ ಸರಹದ್ದಿನೊಳಗೆ ಯಾವುದೇ ರಸ್ತೆಯಲ್ಲಿ ಗುಂಡಿಗಳಿಲ್ಲ. ಆದರೆ ಎಕ್ಸ್ ಪ್ರೆಸ್ ಪತ್ರಿಕೆ ನಡೆಸಿದ ರಿಯಾಲಿಟಿ ಚೆಕ್ ನಲ್ಲಿ ಪಾಲಿಕೆಯ ಸರಹದ್ದಿನಲ್ಲಿ ಶಾಂತಿನಗರ, ಹೆಣ್ಣೂರು ರಸ್ತೆ, ಬಳ್ಳಾರಿ ರಸ್ತೆ, ನಾರಾಯಣಪುರ, ಮಾಗಡಿ ರಸ್ತೆ ಮತ್ತು ರಾಜಕುಮಾರ್ ರಸ್ತೆಯ ಹಲವು ಕಡೆಗಳಲ್ಲಿ ಗುಂಡಿಗಳಿವೆ ಎಂಬುದು ತಿಳಿದುಬಂದಿದೆ.
ಈ ಬಗ್ಗೆ ಬಿಬಿಎಂಪಿ ವಿಶೇಷ ಆಯುಕ್ತ ವಿಜಯ್ ಶಂಕರ್, ಈ ಅಂಕಿಅಂಶಗಳನ್ನು ಮುಖ್ಯ ಎಂಜಿನಿಯರ್ ಗಳು ಎಂಜಿನಿಯರ್ ಗಳಿಗೆ ನೀಡುತ್ತಾರೆ.
SCROLL FOR NEXT