ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಮೈಸೂರು ರಸ್ತೆಯಲ್ಲಿ ಅಶ್ರುವಾಯು ಶೆಲ್ ಸಿಡಿತ, ಕೆಲಹೊತ್ತು ಸಂಚಾರ ಅಸ್ತವ್ಯಸ್ತ

ನಗರದ ಸೇನಾ ಮೀಸಲು ಮೈದಾನದಲ್ಲಿ ಅವಧಿ ಮುಗಿದ ಅಶ್ರುವಾಯು ಶೆಲ್ ಗಳು ಸಿಡಿದು ....

ಬೆಂಗಳೂರು: ನಗರದ ಸೇನಾ ಮೀಸಲು ಮೈದಾನದಲ್ಲಿ ಅವಧಿ ಮುಗಿದ ಅಶ್ರುವಾಯು ಶೆಲ್ ಗಳು ಸಿಡಿದು ರಸ್ತೆಗೆ ಹರಿದು ಮೈಸೂರು ರಸ್ತೆಯಲ್ಲಿ ಪ್ರಯಾಣಿಕರು ಇಂದು ಬೆಳಗ್ಗೆ ತೊಂದರೆ ಅನುಭವಿಸುವಂತಾಯಿತು. ಇದರಿಂದ ಸೇನಾ ಮೀಸಲು ಮೈದಾನ ಮತ್ತು ಸಿರ್ಸಿ ಸರ್ಕಲ್ ಎದುರಿನ ರಸ್ತೆಯಲ್ಲಿ ಅವ್ಯವಸ್ಥೆ ಮತ್ತು ಉದ್ವಿಗ್ನ ಪರಿಸ್ಥಿತಿ ಉಂಟಾಯಿತು.
ಇಂದು ಬೆಳಗ್ಗೆ ಸುಮಾರು 8.30ರ ಹೊತ್ತಿಗೆ ಅಗ್ನಿಶಾಮಕ ಮತ್ತು ಸುರಕ್ಷ ಸೇವೆ ಸಿಬ್ಬಂದಿ ಹಾಗೂ ಕೇಂದ್ರ ಸೇನಾ ಮೀಸಲು ಪಡೆಯ ಸಿಬ್ಬಂದಿ ಕೆಲವು ಅವಧಿ ಮುಗಿದ ಅಶ್ರುವಾಯು ಶೆಲ್ ಗಳನ್ನು ನಾಶಪಡಿಸುತ್ತಿದ್ದರು. ಒಂದೇ ಸಲಕ್ಕೆ 12 ಶೆಲ್ ಗಳನ್ನು ನಾಶಪಡಿಸಲಾಯಿತು. ಇದರಿಂದ ಹೊರಬರುತ್ತಿದ್ದ ಗ್ಯಾಸ್ ಮೈಸೂರು ರಸ್ತೆಯನ್ನು ಆವರಿಸಿತು. ಇದರಿಂದ ಆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರಿಗೆ ತೀವ್ರ ತೊಂದರೆಯುಂಟಾಯಿತು. ತಕ್ಷಣವೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಎಚ್ಚರಿಸಲಾಯಿತು. ಅಲ್ಲಿಗೆ ಆಗಮಿಸಿದ ಸಿಬ್ಬಂದಿ ಹತ್ತಿರದ ಫ್ಯಾಕ್ಟರಿಯಿಂದ ಸೋರಿಕೆಯಾದ ಹೊಗೆಯಾಗಿರಬಹುದು ಎಂದು ಆರಂಭದಲ್ಲಿ ಶಂಕಿಸಿದರು.
ಈ ಘಟನೆಯಿಂದ ಇಂದು ಬೆಳಗ್ಗೆ ಮೈಸೂರು ರಸ್ತೆಯಲ್ಲಿ ಸುಮಾರು 30 ನಿಮಿಷಗಳ ಕಾಲ ಸಂಚಾರ ದಟ್ಟಣೆಯುಂಟಾಯಿತು. ನಮಗೆ ಇಲ್ಲಿಯ ತರಹ ಅಶ್ರುವಾಯು ಶೆಲ್ ಗಳನ್ನು ಸಿಡಿಸಲು ಮುಕ್ತ ಪ್ರದೇಶ ಸಿಗುವುದಿಲ್ಲ. ಹಾಗಾಗಿ ಇಲ್ಲಿ ಸೇನಾ ಪಡೆಯ ಮುಖ್ಯಸ್ಥರ ಮೇಲ್ವಿಚಾರಣೆ ಯಲ್ಲಿ ಮಾಡಿದೆವು ಎನ್ನುತ್ತಾರೆ.
ಕೆಲ ಹೊತ್ತಿನ ನಂತರ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT