ಅಂತಿಮ ಸಂಸ್ಕಾರದ ವೇಳೆ ರೋಧಿಸುತ್ತಿರುವ ಕುಟುಂಬಸ್ಥರು 
ರಾಜ್ಯ

ವೀರ ಮರಣವನ್ನಪ್ಪಿದ ಯೋಧ ಮುಂಜುನಾಥ್ ಜಕ್ಕಣ್ಣವರ್'ಗೆ ಭಾವಪೂರ್ಣ ವಿದಾಯ

ನಕ್ಸಲ್ ದಾಳಿಯಲ್ಲಿ ವೀರಮರಣವನ್ನಪ್ಪಿದ ಧಾರವಾಡ ಜಿಲ್ಲೆಯ ಮನಗುಂಡಿ ಗ್ರಾಮದ ಯೋಧ ಮಂಜುನಾಥ್ ಶಿವಲಿಂಗಪ್ಪ ಜಕ್ಕಣ್ಣವರ್ ಅವರಿಗೆ ಮಂಗಳವಾರ ಸಕಲ ಗೌರವಗಳೊಂದಿಗೆ ಭಾವಪೂರ್ಣ ವಿದಾಯವನ್ನು ನೀಡಲಾಗಿದೆ...

ಧಾರವಾಡ: ನಕ್ಸಲ್ ದಾಳಿಯಲ್ಲಿ ವೀರಮರಣವನ್ನಪ್ಪಿದ ಧಾರವಾಡ ಜಿಲ್ಲೆಯ ಮನಗುಂಡಿ ಗ್ರಾಮದ ಯೋಧ ಮಂಜುನಾಥ್ ಶಿವಲಿಂಗಪ್ಪ ಜಕ್ಕಣ್ಣವರ್ ಅವರಿಗೆ ಮಂಗಳವಾರ ಸಕಲ ಗೌರವಗಳೊಂದಿಗೆ ಭಾವಪೂರ್ಣ ವಿದಾಯವನ್ನು ನೀಡಲಾಗಿದೆ.
ಛತ್ತೀಸ್ಗಢ-ಮಹಾರಾಷ್ಟ್ರ ಗಡಿಯ ಗಡಚಿರೊಳ್ಳಿಯಲ್ಲಿ ಭಾನುವಾರ ರಾತ್ರಿ ನಡೆದಿದ್ದ ನಕ್ಸಲ್ ಕೂಂಬಿಂಗ್ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಯೋಧ ಮಂಜುನಾಥ್ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಸ್ಥಳೀಯ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ ಹುತಾತ್ಮರಾಗಿದ್ದರು. 
ಬಳಿಕ ಯೋಧ ಮಂಜುನಾಥ್ ಅವರು ಪಾರ್ಥೀವ ಶರೀರವನ್ನು ಆರ್.ಎನ್.ಶೆಟ್ಟಿ ಸ್ಟೇಡಿಯಂಗೆ ಕರೆತರಲಾಗಿತ್ತು. ಸಾರ್ವಜನಿಕರ ದರ್ಶನದ ಬಳಿಕ ಸಕಲ ಸರ್ಕಾರಿ ಗೌರವಗಳೊಂದಿಗೆ ವೀರಯೋಧನಿಗೆ ಭಾವಪೂರ್ಣ ವಿದಾಯ ಹೇಳಲಾಯಿತು. 
ಅಂತಿಮ ವಿದಾಯದ ವೇಳೆ ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಮಂಜುನಾಥ್ ಅಮರ್ ರಹೇ ಎಂಬ ಘೋಷಣೆಗಳು ಮುಗಿಲುಮುಟ್ಟಿದ್ದವು. ಅಂತ್ಯ ಸಂಸ್ಕಾರದ ವೇಲೆ ಸಚಿವ ಸಂತೋಷ್ ಲಾಡ್ ಮತ್ತು ಧಾರವಾಡ ಸಂಸದ ಪ್ರಹ್ಲಾದಾ ಜೋಷಿಯವರು ಹಾಜರಿದ್ದರು. 
ಯೋಧನ ಕುಟುಂಬಕ್ಕೆ ರೂ.25 ಲಕ್ಷ ಪರಿಹಾರ
ಯೋಧ ಮಂಜುನಾಥ್ ಅವರನ್ನು ಕಳೆದುಕೊಂಡಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸಂತಾಪ ಸೂಚಿಸಿದ್ದು, ಮಂಜುನಾಥ್ ಅವರ ಕುಟುಂಬಕ್ಕೆ ರೂ. 25 ಲಕ್ಷ ಪರಿಹಾರವನ್ನು ಘೋಷಣೆ ಮಾಡಿದ್ದಾರೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Delhi CJP Protest: ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ ಸೇರಿ 150ಕ್ಕೂ ಹೆಚ್ಚು ಮಂದಿ ಪೊಲೀಸ್ ವಶ; Video

CEC ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ CJP ಪ್ರತಿಭಟನೆ: ದೆಹಲಿಯಲ್ಲಿ ಬಂಧನ ಪ್ರಕ್ರಿಯೆ ಆರಂಭ, ತೀವ್ರ ಭದ್ರತೆ; Video

‘ಕಾನೂನು ಸುವ್ಯವಸ್ಥೆಗೆ ಗಂಭೀರ ಅಪಾಯವಿದೆ’: ಸಿಜೆಪಿ ಪ್ರತಿಭಟನೆಗೆ ಕೆಲವೇ ಗಂಟೆ ಮೊದಲು ರಾಜ್ಯಗಳಿಗೆ ಪತ್ರ ಬರೆದು MHA ಹೇಳಿದ್ದೇನು?

ನವೆಂಬರ್‌ನಲ್ಲಿ ಕರ್ನಾಟಕ ಬಿಜೆಪಿಗೆ ಮೇಜರ್ ಸರ್ಜರಿ: ಬಿವೈ ವಿಜಯೇಂದ್ರ, ಆರ್ ಅಶೋಕಗೆ ಗೇಟ್ ಪಾಸ್?; ಹೊಸ ಮುಖಗಳಿಗೆ ಮಣೆ!

ಬಾಕಿ ಸಾಲ ವಸೂಲಿಗೆ 'ಗೃಹಲಕ್ಷ್ಮಿ' ಯೋಜನೆಯ ಹಣ ಕಡಿತಗೊಳಿಸದಂತೆ ಬ್ಯಾಂಕುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಸರ್ಕಾರ!