ಈರುಳ್ಳಿ ಬೆಲೆಯಲ್ಲಿ ದಿಢೀರ್ ಕುಸಿತ: ಗದಗ ರೈತರಲ್ಲಿ ಆತಂಕ
ಗದಗ: ಗದಗ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಯಲ್ಲಿ ಈರುಳ್ಳಿ ಬೆಲೆ ದಿಢೀರ್ ಕುಸಿತ ಕಂಡಿದ್ದರಿಂದ ರೈತರು ಕಂಗಾಲಾಗಿದ್ದಾರೆ. ಬೆಲೆ ಕುಸಿತಕ್ಕೆ ಕೃಷಿ ಉತ್ಪನ್ನ ಮಾರುಕಟ್ಟೆಯ ಮದ್ಯವರ್ತಿಗಳೇ ಕಾರಣ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿನ್ನೆ ಸಂಜೆ ನಾಸಿಕ್ ನಿಂದ ಸುಮಾರು ಐದು ಟನ್ ಗಳಷ್ಟು ಈರುಳ್ಳಿ ಆಮದು ಮಾಡಿಕೊಳ್ಳಲಾಗಿತ್ತು, ಇದರ ಕಾರಣದಿಂದಲೇ ಬೆಲೆಗಳಲ್ಲಿ ಹಠಾತ್ ಕಡಿತ ದಾಖಲಾಗಿದೆ.
ಬುಧವಾರದ ವರೆಗೆ ಗದಗ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಪ್ರತಿ ಕ್ವಿಂಟಾಲ್ ಗೆ 4,500 ರೂ. ಇತ್ತು. ಆದರೆ ಶುಕ್ರವಾರ ಕ್ವಿಂತಾಲ್ ಗೆ 800 ರೂ. ಆಗಿದೆ. ದಿನದ ಹಿಂದೆ ಈರುಳ್ಳಿ ಕೆಜಿ ಗೆ 60-80 ರೂ. ಇದ್ದ ಈರುಳ್ಳಿಗೆ ಈಗ ಕೇವಲ 8 ರೂ. ಆಗಿದೆ. ಆದರೆ ಇದೇ ವೇಳೆ ಇತರೆ ನಗರಗಳಲ್ಲಿ ಈರುಳ್ಳಿ ಬೆಲೆ ಕೆಜಿ ಒಂದಕ್ಕೆ ರೂ 50 ಕ್ಕಿಂತ ಹೆಚ್ಚಾಗುತ್ತಿದೆ.
ಇದೇ ಕಾರಣಕ್ಕೆ ರೈತರು ಎಪಿಎಂಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆಗ ಮಾರುಕಟ್ಟೆ ಅಧಿಕಾರಿಗಳು ಕನಿಷ್ಟ ಬೆಂಬಲ ಬೆಲೆಯಾಗಿ ಕ್ವಿಂಟಾಲ್ ಗೆ 2,500 ರೂ. ನಿಡಲು ಮುಂದಾದರು. ಆದರೆ ರೈತರು ಈ ನಿರ್ಧಾರವನ್ನು ತಿರಸ್ಕರಿಸಿದ್ದರು. ರೈತರು ಕನಿಷ್ಟ ಬೆಂಬಲ ಬೆಲೆಯಾಗಿ ಕ್ವಿಂಟಾಲ್ ಗೆ 4000 ರೂ. ನೀಡಬೇಕೆಂದು ಆಗ್ರಹಿಸಿದ್ದಾರೆ. ಮದ್ಯವರ್ತಿಗಳು ಈರುಳ್ಳಿಯ ಕೃತಕ ಕೊರತೆಯನ್ನು ಸೃಷ್ಟಿಸಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics