ಜಲಮಂಡಳಿ ನೀರು ಸೋರಿಕೆ ಪರೀಕ್ಷಿಸಲು ತೋಡಿದ ಗುಂಡಿಗೆ ಬಿದ್ದು ಮೃತಪಟ್ಟ ವಯೋವೃದ್ಧ
ಹುಬ್ಬಳ್ಳಿ: ಎಂದಿನಂತೆ ನಿನ್ನೆ ಬೆಳಗ್ಗೆ ಕೂಡ ದಿನನಿತ್ಯದ ಕೆಲಸಕ್ಕೆ ಮನೆಯಿಂದ ಹೊರಟಿದ್ದ 73 ವರ್ಷದ ವೃದ್ಧ ಶರತ್ ಚಂದ್ರ ಗುಂಜಾಲ್ ಅವರಿಗೆ ಸಾವು ಕಾದಿದೆ ಎಂಬ ಸೂಚನೆ ಕೂಡ ಸಿಕ್ಕಿರಲಿಲ್ಲ. ಹಾಲು ಮಾರಾಟ ಮಾಡುತ್ತಿದ್ದ ಗುಂಜಾಲ್ ಹಾಲು ಸಂಗ್ರಹಿಸಿ ಅದನ್ನು ಮನೆಮನೆಗೆ ಹಾಕಲೆಂದು ಹೊರಟಿದ್ದರು.
ನಿನ್ನೆ ಬೆಳಗ್ಗೆ 7 ಗಂಟೆ ಸುಮಾರಿಗೆ ಗುಂಜಾಲ್ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ರಸ್ತೆಯ ಪಕ್ಕದಲ್ಲಿದ್ದ 6 ಅಡಿ ಆಳದ ಗುಂಡಿಗೆ ಬಿದ್ದರು. ಹುಬ್ಬಳ್ಳಿಯ ತಡಿಪತ್ರಿ ಓಣಿಯಲ್ಲಿ ನೀರು ಸೋರಿಕೆಗೆ ಗುಂಡಿ ತೋಡಲಾಗಿತ್ತು. ರಸ್ತೆಯ ಎರಡೂ ಕಡೆಯಿಂದ ಗುಂಡಿ ಮುಕ್ತವಾಗಿದ್ದು ಒಂದು ಬದಿ ಮಾತ್ರ ತಡೆ ಹಾಕಲಾಗಿತ್ತು. ಅಲ್ಲಿ ಗುಂಡಿಯಿರುವುದು ಗುಂಜಾಲ್ ಅವರಿಗೆ ಗೊತ್ತಾಗದೆ ಬಿದ್ದರು. ಮೊನ್ನೆ ಸಂಜೆಯಷ್ಟೇ ಗುಂಡಿಯನ್ನು ತೋಡಲಾಗಿತ್ತು.
ಪೈಪ್ ನಲ್ಲಿ ನೀರು ಸೋರಿಕೆಯಾಗುತ್ತಿದ್ದುದನ್ನು ಸರಿಪಡಿಸಲು ಗುಂಡಿ ತೋಡಲಾಗಿತ್ತು ಎಂದು ಕರ್ನಾಟಕ ನಗರ ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು ಹೇಳುತ್ತಾರೆ. ನೀರು ಸೋರಿಕೆಯಾಗುವುದರಿಂದ ತಮ್ಮ ಮನೆಯ ಪಾರ್ಕಿಂಗ್ ಪ್ರದೇಶಕ್ಕೆ ನೀರು ಬರುತ್ತಿದೆ ಎಂದು ಪಕ್ಕದ ನಿವಾಸಿಗಳಿಂದ ದೂರು ಬಂದ ಹಿನ್ನೆಲೆಯಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಲಾಯಿತು. ಖಾಸಗಿ ಗುತ್ತಿಗೆದಾರರಿಗೆ ದುರಸ್ತಿ ಕೆಲಸ ನೀಡಲಾಗಿತ್ತು.
ಅವರು ಮೊನ್ನೆ ಗುಂಡಿ ತೋಡಿ ನೀರು ಸೋರಿಕೆಯಾಗುತ್ತಿದೆಯೇ ಎಂದು ನೋಡಲು ಹಾಗೆಯೇ ತೆರೆದು ಹೋಗಿದ್ದರು. ನಿನ್ನೆ ಗುಂಡಿಯನ್ನು ಕೆಲಸಗಾರರು ಮುಚ್ಚುವುದರಲ್ಲಿದ್ದು, ಅಷ್ಟರಲ್ಲಿ ಈ ದುರ್ಘಟನೆ ನಡೆದುಹೋಗಿದೆ ಎಂದು ಹೇಳಿದರು.
ಗುಂಡಿ ತೋಡಿದ ನಂತರ ಎಚ್ಚರಿಕೆಯ ಸೂಚನೆ, ತಡೆಗೋಡೆ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಗುತ್ತಿಗೆದಾರರ ಕೆಲಸವಾಗಿದೆ ಎನ್ನುತ್ತಾರೆ
ಹುಬ್ಬಳ್ಳಿ ಪೂರ್ವ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಹುಬ್ಬಳ್ಳಿ ನಗರ ಮೇಯರ್ ಡಿ.ಕೆ.ಚವಹನ್ ಸ್ಥಳಕ್ಕೆ ಭೇಟಿ ನೀಡಿ ತಡೆಗೋಡೆ ಅಥವಾ ಎಚ್ಚರಿಕೆ ಫಲಕ ಹಾಕದ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ದುರ್ಘಟನೆ ನಂತರ ಹೆಚ್ಚುವರಿ ತಡೆಗೋಡೆಯನ್ನು ನಿಯೋಜಿಸಲಾಯಿತು. ಎಲ್ಲಾ ನಿರ್ಮಾಣ ಸ್ಥಳಗಳಲ್ಲಿ ತಡೆಗೋಡೆಗಳನ್ನು ನಿಯೋಜಿಸಲಾಗುವುದು ಎಂದು ಹೇಳಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos