ರಾಜ್ಯ

ರಾಜ್ಯದ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಸಿ: ಕೇಂದ್ರಕ್ಕೆ ಸಿಎಂ ಸಿದ್ಧರಾಮಯ್ಯ ಮನವಿ

Shilpa D
ಬೆಂಗಳೂರು:  ಒಪ್ಪಂದದ ಪ್ರಕಾರ ರಾಜ್ಯದ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಸುವಂತೆ ಕೇಂದ್ರ ಇಂಧನ ಸಚಿವ ಆರ್ ಕೆ ಸಿಂಗ್ ಅವರಿಗೆ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ದೆಹಲಿಯಲ್ಲಿ ಇಂಧನ ಸಚಿವ ಡಿ.ಕೆ ಶಿವಕುಮಾರ್ ಅವರೊಂದಿಗೆ ಆರ್.ಕೆ ಸಿಂಗ್ ಅವರನ್ನು ಭೇಟಿ ಮಾಡಿದ ಸಿಎಂ ಮನವಿ ಸಲ್ಲಿಸಿದ್ದಾರೆ. ಬಳ್ಳಾರಿ, ರಾಯಚೂರಿನಲ್ಲಿರುವ ಎರಡು ಸ್ಥಾವರಗಳು ದಿನಕ್ಕೆ 570 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸುತ್ತವೆ, ಎರಡೂ ಸ್ಥಾವರಗಳು ಕಲ್ಲಿದ್ದಲು ಕೊರತೆ ಮತ್ತು ಅನಿಲ ಕೊರತೆ ಎದುರಿಸುತ್ತಿದ್ದು, ವಿಷಮ ಪರಿಸ್ಥಿತಿ ತಲುಪಿದೆ ಎಂದು ಹೇಳಿದ್ದಾರೆ.
ಈ ವರ್ಷದ ಎಪ್ರಿಲ್ ಮತ್ತು ಸೆಪ್ಟಂಬರ್ ನಡುವಿನ ಒಪ್ಪಂದದ ಪ್ರಕಾರ ಸಿಂಗರೆನಿ ಕಲ್ಲಿದ್ದಲು ಗಣಿ, ಮಹಾನದಿ ಕಲ್ಲಿದ್ದಲುಗಣಿ ಮತ್ತು ವೆಸ್ಟರ್ನ್ ಕಲ್ಲಿದ್ದಲು ಗಣಿ ಲಿಮಿಟೆಡ್ ಗಳಿಂದ ಅಗತ್ಯವಿರುವ ಕಲ್ಲಿದ್ದಲು ಪೂರೈಕೆಯಾಗಿಲ್ಲ ಎಂದು ಹೇಳಿರುವ ಸಿಎಂ ರಾಜ್ಯ ಸರ್ಕಾರದ ನೇತೃತ್ವದಲ್ಲಿ ನಡೆಯುತ್ತಿರುವ ವಿದ್ಯುತ್ ಸ್ಥಾವರಗಳಿಗೆ ಅಗತ್ಯ ಕಲ್ಲಿದ್ದಲು ಪೂರೈಸುವಂತೆ ಆಗ್ರಹಿಸಿದ್ದಾರೆ.
SCROLL FOR NEXT