ರಾಯಚೂರು: ಧಾರಾಕಾರ ಮಳೆಯಿಂದ ರಸ್ತೆ ಪೂರ್ಣವಾಗಿ ಜಲಾವೃತಗೊಂಡ ಹಿನ್ನೆಲೆಯಲ್ಲಿ ಕೆಎಸ್ ಆರ್ ಟಿ ಸಿ ಬಸ್ ನಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು ರಾತ್ರಿಯಿಡಿ ಬಸ್ ನಲ್ಲೆ ಕಾಲ ಕಳೆದಿದ್ದಾರೆ.
ಆಂಧ್ರದ ಆದೋನಿಯ ಪತ್ತಿಕೊಂಡ ಬಳಿ ಗುರುವಾರ, ಭಾರೀ ಮಳೆಯಿಂದ ಉಕ್ಕಿ ಹರಿಯುತ್ತಿದ್ದ ಹಳ್ಳದ ಸೇತುವೆ ಮೇಲಿನ ನೀರಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸಿಲುಕಿತ್ತು, ನೀರಿನ ಪ್ರಮಾಣ ಹೆಚ್ಚಿದ್ದರಿಂದ ಬಸ್ ಮುಂದೆ ಚಲಿಸಲು ಸಾಧ್ಯವಾಗಲಿಲ್ಲ, ಈ ವೇಳೆ ಚಾಲಕ ಕೆರೆಯ ಪಕ್ಕದಲ್ಲೆ ಬಸ್ ನಿಲ್ಲಿಸಿದ್ದಾನೆ,
ನೀರಿನ ಪ್ರಮಾಣ ಕಡಿಮೆಯಾದ ನಂತರ ಮತ್ತೊಂದು ಮಾರ್ಗದ ಮೂಲಕ ಚಾಲಕ ಮಂತ್ರಾಲಯ ತಲುಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಳಬಾಗಿಲು ವಿಭಾಗ ಬಸ್ ಇದಾಗಿದ್ದು, ಬೆಂಗಳೂರಿನಿಂದ ಮಂತ್ರಾಲಯಕ್ಕೆ ತೆರಳುತ್ತಿತ್ತು. ಅದರಲ್ಲಿದ್ದ 20 ಮಕ್ಕಳೂ ಸೇರಿ 50 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.