ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ 
ರಾಜ್ಯ

ಲಿಂಗಾಯತರು ಹಿಂದೂಗಳಾಗಿರಲಿಲ್ಲ ಎನ್ನುವ ಜಾಮದಾರ್ ಹೇಳಿಕೆ ಸರಿಯಲ್ಲ: ಪೇಜಾವರ ಶ್ರೀ

"ಲಿಂಗಾಯತರು ಇಷ್ಟರ ವರೆಗೂ ಹಿಂದೂಗಳಾಗಿರಲಿಲ್ಲ ಎಂದು ಹೇಳಿರುವ ನಿವೃತ್ತ ಐಎಎಸ್‌ ಅಧಿಕಾರಿ ಎಸ್.ಎಂ ಜಾಮದಾರ್ ಹೇಳಿಕೆ ಸರಿಯಲ್ಲ. ಹಿಂದೆ ನಡೆದಿದ್ದ ಬಹುತೇಕ ಹಿಂದೂ ಸಮಾವೇಶ,

ಉಡುಪಿ: "ಲಿಂಗಾಯತರು ಇಷ್ಟರ ವರೆಗೂ ಹಿಂದೂಗಳಾಗಿರಲಿಲ್ಲ ಎಂದು  ಹೇಳಿರುವ ನಿವೃತ್ತ ಐಎಎಸ್‌ ಅಧಿಕಾರಿ ಎಸ್.ಎಂ ಜಾಮದಾರ್ ಹೇಳಿಕೆ ಸರಿಯಲ್ಲ. ಹಿಂದೆ ನಡೆದಿದ್ದ ಬಹುತೇಕ ಹಿಂದೂ ಸಮಾವೇಶ, ವಿಶ್ವ ಹಿಂದೂ ಪರಿಷತ್ ಕಾರ್ಯಕ್ರಮದಲ್ಲಿ ಲಿಂಗಾಯಿತ ಮಠಾಧೀಶರೂ ಪಾಲ್ಗೊಂಡಿದ್ದಾರೆ." ಎಂದು ಉಡುಪಿ ಪರ್ಯಾಯ ಪೇಜಾವರ ಶ್ರೀ ವಿಶ್ವೇಶತೀರ್ಥರು ಹೇಳಿದ್ದಾರೆ.
ಇಂದು ಪತ್ರಕರ್ತರೊದನೆ ಮಾತನಾಡಿದ ಶ್ರೀಗಳು "1968ರಲ್ಲಿ ಉಡುಪಿಯಲ್ಲಿ ನಡೆದಿದ್ದ ವಿಶ್ವಹಿಂದೂ ಪರಿಷತ್ ಪ್ರಾಂತೀಯ ಸಮಾವೇಶದಲ್ಲಿ ಸಿದ್ದಗಂಗಾ ಶ್ರೀಗಳು, ಅಂದಿನ ಸುತ್ತೂರು ಸಂಸ್ಥಾನದ ಗುರುಗಳು ಭಾಗವಹಿಸಿದ್ದರು. ಹಿಂದೂ ಪರ ಹೋರಾಟಗಳಲ್ಲಿ ಎಲ್ಲರೂ ಒಂದಾಗೋನ ಎಂದಿದ್ದ ಜನರೇ ಇಂದು ಹೊಸ ಧರ್ಮ ಬೇಕು ಬೇದವೆನ್ನುವ ಚರ್ಚೆ ಪ್ರಾರಂಭಿಸಿದ್ದಾರೆ. ಇದು ಬೇಸರ ವಿಷಯ" ಎಂದರು.
"ಲಿಂಗಾಯತರು ಹಿಂದೂ ಧರ್ಮವನ್ನು ತೊರೆಯದಿರಿ ಎಂದು ನಾನು ಹೇಳಿದ್ದೆ. ನನಗೆ ಯಾರ ಭಯ ಇಲ್ಲ. ಯಾರ ಮೇಲೆಯೂ ವಿರೋಧವಿಲ್ಲ. ಲಿಂಗಾಯಿತರೂ ನಮ್ಮವರು ಎನ್ನುವುದು ನನ್ನ ಕಾಳಜಿಯಾಗಿದೆ. ಇದರಲ್ಲಿ ವೈಯಕ್ತಿಕ ಸ್ವಾರ್ಥವಿಲ್ಲ" ಶ್ರೀಗಳು ತಿಳಿಸಿದರು.
"ಹಿಂದೂ ಧರ್ಮದಲ್ಲಿ ಹಲವಾರು ಪಂಥಗಳಿವೆ. ಬಗೆ ಬಗೆಯ ಆಚರಣೆಗಳಿವೆ, ಆದರೆ ಎಲ್ಲರೂ ಹಿಂದೂ ಧರ್ಮದಲ್ಲಿ ಇದ್ದಾರೆ "ಎಂದು ಹೇಳಿದರು.
"ಮುಂದಿನ  ಜ.18ರ ನಂತರ ಲಿಂಗಾಯಿತ ಧರ್ಮದ ಕುರಿತು ವಿಧಾನ ಸೌಧದಲ್ಲಿ ಚರ್ಚೆ ಆಗುವುದಾದರೆ ನಾನೂ ಅದರಲ್ಲಿ ಪಾಲ್ಗೊಳ್ಳುತ್ತೇನೆ. ಅದಕ್ಕೂ ಮುನ್ನ  ಚರ್ಚೆ ಬಯಸಿದವರು ಉಡುಪಿ ಮಠಕ್ಕೆ ಬರಬಹುದು. " ಶ್ರೀಗಳು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT