ಬಂಟ್ವಾಲ: ಮಿನಿ ವಿಧಾನ ಸೌಧ ಉದ್ಘಾಟನೆ 
ರಾಜ್ಯ

ಬಂಟ್ವಾಳ: ಮಿನಿ ವಿಧಾನ ಸೌಧ ಉದ್ಘಾಟನೆ, ಕಾರ್ಯಕರ್ತರ ತಳ್ಳಾಟಕ್ಕೆ ಮುರಿದ ಬಾಗಿಲು

ಬಂಟ್ವಾಳ ಮಿನಿ ವಿಧಾನ ಸೌಧ ಉದ್ಘಾಟನೆಯ ಇಂದು ನೆರವೇರಿದೆ. ಈ ಸಂದರ್ಭದಲ್ಲಿ ಕಾರ್ಯಕರ್ತರ ನೂಕುನುಗ್ಗಲು,ತಳ್ಳಾಟಗಳು ಸಂಭವಿಸಿದ್ದಲ್ಲದೆ.............

ಬಂಟ್ವಾಳ: ಬಂಟ್ವಾಳ ಮಿನಿ ವಿಧಾನ ಸೌಧ ಉದ್ಘಾಟನೆಯ ಇಂದು ನೆರವೇರಿದೆ. ಈ ಸಂದರ್ಭದಲ್ಲಿ ಕಾರ್ಯಕರ್ತರ ನೂಕುನುಗ್ಗಲು,ತಳ್ಳಾಟಗಳು ಸಂಭವಿಸಿದ್ದಲ್ಲದೆ ಮಿನಿ ವಿಧಾನಸೌಧದ ಬಾಗಿಲು ಮುರಿದಿದೆ.
ಈ ವೇಳೆ ಕಾರ್ಯಕರ್ತರು, ಸಾರ್ವಜನಿಕರನ್ನು ಚದುರಿಸಲು ಪೋಲೀಸರು ಲಘು ಲಠಿ ಪ್ರಹಾರ ನಡೆಸಬೇಕಾಯಿತು. ತಳಾಳಟ ನದೆದ ವೇಳೆ ಓರ್ವ ಫೋಟೋ ಗ್ರಾಫರ್ ಕೆಳಕ್ಕೆ ಬಿದ್ದರು.
ಮುಖ್ಯಮಂತ್ರಿ ಎದುರೇ ಭಿನ್ನಮತ ಸ್ಪೋಟ?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿಯೇ ಕರಾವಳಿ ಕಾಂಗ್ರೆಸಿಗರ ಭಿನ್ನಮತ ಸ್ಫೋಟಗೊಂಡಿದೆ.ಮಾಜಿ ಸಚಿವ, ಶಾಸಕ ಅಭಯಚಂದ್ರ ಜೈನ್‌ ಹಾಗೂ ಪರಿಷತ್‌ ಸದಸ್ಯ ಐವನ್‌ ಡಿಸೋಜಾ ನಡುವಿನ ಭಿನ್ನಾಭಿಪ್ರಾಯಗಳು ಬಯಲಿಗೆ ಬಂದಿವೆ. 
ಬಂಟ್ವಾಳದ ಮಿನಿ ವಿಧಾನ ಸೌಧ ಉದ್ಘಾಟನೆ ಸೇರಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರಿಗೆ ಆಗಮಿಸಿದ್ದ ವೇಳೆ ಮೂಡಬಿದಿರೆಯ ಶಾಸಕ ಭಯಚಂದ್ರ ಜೈನ್‌, ಐವನ್‌ ಡಿಸೋಜಾರನ್ನು ತಳ್ಳಿದ್ದಾರೆ ಎನ್ನಲಾಗಿದೆ.
ಮುಖ್ಯಮಂತ್ರಿಗಳ ಸ್ವಾಗತಕ್ಕೆ ಇಬ್ಬರೂ ನಾಯಕರು ಅಪಾರ ಸಂಖ್ಯೆಯ ಕಾರ್ಯಕರ್ತರನ್ನು, ಬೆಂಬಲಿಗರನ್ನು  ಕರೆತಂದಿದ್ದರು. ಮುಖ್ಯಮಂತ್ರಿಗಳು ವಿಮಾನ ನಿಲ್ದಾಣ ದಿಂದ ತೆರಳಲು ಕಾರು ಹತ್ತಬೇಕಾದರೆ ಮುತ್ತಿಗೆ ಹಾಕಿದ ಕಾರ್ಯಕರ್ತರನ್ನು ಚದುರಿಸಲು ಪೋಲೀಸರು ಹರ ಸಾಹಸ ನಡೆಸಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್