ಸಾಂದರ್ಭಿಕ ಚಿತ್ರ 
ರಾಜ್ಯ

ಚಿಕ್ಕಮಗಳೂರಿನಲ್ಲಿ ಕಾನೂನುಬಾಹಿರ ಹೋಂ-ಸ್ಟೇ ಗಳದ್ದೇ ಕಾರುಬಾರು: ವರದಿ

ಕರ್ನಾಟಕ ಹೋಂ ಸ್ಟೇ ನಿಯಮ ಮತ್ತು ನಿಬಂಧನೆ 2014-19 ರ ಅನುಸಾರ ಚಿಕ್ಕಮಗಳೂರು ಜಿಲ್ಲೆಯ ಹೋಂ ಸ್ಟೇ ಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿಯಂತ್ರಿಸಲು ವನ್ಯಜೀವಿ ಕಾರ್ಯಕರ್ತರು..

ಚಿಕ್ಕಮಗಳೂರು: ಕರ್ನಾಟಕ ಹೋಂ ಸ್ಟೇ ನಿಯಮ ಮತ್ತು ನಿಬಂಧನೆ 2014-19 ರ ಅನುಸಾರ ಚಿಕ್ಕಮಗಳೂರು ಜಿಲ್ಲೆಯ ಹೋಂ ಸ್ಟೇ ಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿಯಂತ್ರಿಸಲು ವನ್ಯಜೀವಿ ಕಾರ್ಯಕರ್ತರು ರಾಜ್ಯ ಸರಕಾರಕ್ಕೆ ಕರೆ ನೀಡಿದ್ದಾರೆ. ಜಿಲ್ಲೆಯಲ್ಲಿ 169 ಅಕ್ರಮ ಹೋಂ ಸ್ಟೇ ಗಳು ಇದ್ದು ಇವುಗಳಿಂದ ಸ್ಥಳೀಯರು ಮತ್ತು ವನ್ಯಜೀವಿಗಳಿಗೆತೊಂದರೆಯಾಗಿದೆ   ಎನ್ನಲಾಗಿದೆ.
ಇದಲ್ಲದೆ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಹಲವು ಹೋಂ ಸ್ಟೇ ಗಳು ಪರವಾನಗಿಗಳಿಲ್ಲದೆ ಕಾರ್ಯ ನಿರ್ವಹಿಸುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ. ಕಳೆದ ವರ್ಷದಲ್ಲಿ ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಸುಮಾರು 700 ರಿಂದ 800 ಹೋಂ ಸ್ಟೇ ಗಳು ಸರ್ಕಾರದಿಂದೆಅ ಅಧಿಕೃತ ದಾಕಲಾತಿ ಪಡೆದಿವೆ. ಅಕ್ರಮ ಹೋಂ ಸ್ಟೇ ಮೇಲೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಖರ್ಗೆ ತಿಳಿಸಿದರು.
ಹೋಂ ಸ್ಟೇ ಗಳು ಅತಿಥಿ ಗಳು ಮತ್ತು ಪ್ರವಾಸಿಗರಿಗೆ ಮೀಸಲಾಗಿವೆ. 182 ಹೋಂ ಸ್ಟೇ ಗಳನ್ನು ಸಮೀಕ್ಷೆಗೆ ಒಳಪಡಿಸಿದ್ದು, 1,820 ಜನರಿಗೆ ಕಾನೂನುಬದ್ಧವಾಗಿ ಅವಕಾಶ ಕಲ್ಪಿಸಲಾಗಿದೆ ಎಂದು ಕಾರ್ಯಕರ್ತರು ಹೇಳಿದ್ದಾರೆ. ಆದಾಗ್ಯೂ, ಈ ಹೋಂ ಸ್ಟೇ ಗಳಲ್ಲಿ ಸುಮಾರು 5,000 ಕ್ಕಿಂತ ಹೆಚ್ಚು ಜನರು ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
10 ಜನರಿಗೆ ಐದು ಕೊಠಡಿಗಳು ಮತ್ತು 10 ಹಾಸಿಗೆಗಳುಳ್ಳ ಮನೆಯೊಂದರಲ್ಲಿ ವಾಸಿಸಲು ಅನುಮತಿ ಇದೆ ಆದರೂ , ಮನೆಯೊಂದರಲ್ಲಿ 27 ಜನರು ವಾಸಿಸುತ್ತಿದ್ದದ್ದನ್ನು ನಾವು ಕಂಡಿದ್ದೇವೆ.  ಭದ್ರಾ ವನ್ಯಜೀವಿ ಸಂರಕ್ಷಣಾ ಟ್ರಸ್ಟ್ ನ ಡಿ ವಿ ಗಿರೀಶ್ ಹೇಳುವಂತೆ, "ಜಿಲ್ಲಾಧಿಕಾರಿಗಳು ಸರಿಯಾದ ಪರಿಶೀಲನೆಯ ನಂತರ ಇಂ<ತಹಾ ಹೋಂ ಸ್ಟೇ ಗಳಿಗೆ ಅನುಮತಿ ನೀದಬೇಕು. ಚಿಕ್ಕಮಗಳೂರು ಬಳಿಯ ತೊಗ್ರಿಹಣಕಲ್ ಹಳ್ಳಿಯಲ್ಲಿ ಒಂದು ಹೋಂ ಸ್ಟೇ 44 ಕೊಠಡಿಗಳನ್ನು ಹೊಂದಿದೆ ಅದರಲ್ಲಿ ಒಂದು ಕೊಠಡಿಯಾದರೆ ಉಳಿದವೆಲ್ಲ ಗುಡಾರಗಳಂತಿವೆ"
ವನ್ಯಜೀವಿ ಕಾರ್ಯಕರ್ತ ಜಿ ವೀರೇಶ್ ಅವರು ಮಾತನಾಡಿ "80 ಕ್ಕಿಂತಲೂ ಹೆಚ್ಚಿನ ಜನರಿದ್ದ ಹೋಂ ಸ್ಟೇ ಗಳನ್ನು ನಾವು ನೋಡಿದ್ದೇವೆ. ಎರಡು ಹೋಂಸ್ಟೇ ಗಳಲ್ಲಿ 100 ಜನರಿದ್ದರು! 41 ಕ್ಕೂ ಹೆಚ್ಚು ಹೋಂ ಸ್ಟೇ ಗಳು ಬೃಹತ್  ಕಟ್ಟಡಗಳು, ಕುಟೀರಗಳು ಮತ್ತು ಕೊಠಡಿಗಳಂತಹ ಸೌಕರ್ಯವನ್ನು ಹೊಂದಿವೆ.ಅನೇಕ ಹೋಂ ಸ್ಟೇ ಗಳಉ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿವೆ. ಉದಾಹರಣೆಗೆ ಅರಣ್ಯನಾಶ ಚಟುವಟಿಕೆಗಳು, ಬೇಟೆ, ವನ್ಯಜೀವಿ ಮಾಂಸ ವ್ಯಾಪಾರ, ಮೀನುಗಾರಿಕೆ ಮತ್ತು ನಿಷೇಧಿತ ಮಾರ್ಗಗಳಲ್ಲಿ ಟ್ರೆಕ್ಕಿಂಗ್. "
ಸಚಿವ ಪ್ರಿಯಾಂಕ್ ಖರ್ಗೆ ಪ್ರವಾಸೋದ್ಯಮ ಇಲಾಖೆಯನ್ನು ಸಮರ್ಥಿಸಿಕೊಳ್ಳುತ್ತಾ, "ನೋಂದಣಿ ಮತ್ತು ರೇಟಿಂಗ್ ಗಾಗಿ ಕಳೆದ ವರ್ಷ ಹಲವಾರು ಬಾರಿ ಗಡುವು ವಿಸ್ತರಿಸಲಾಗಿದೆ ಮತ್ತು ನಾವು ಅವರಿಗೆ ಒಂದು ಅಥವಾ ಎರಡು ತಿಂಗಳ ಹೆಚ್ಚಿನ ಕಾಲಾವಕಾಶ ನಿಡುತ್ತೇವೆ. ಆ ಬಳಿಕ ಶಿಸ್ತು ಕ್ರಮ ಕೈಗೊಳ್ಳಬೇಕು. ಪ್ರತಿ ಹೋಂ ಸ್ಟೇ ಅನ್ನು ನೋಂದಾಯಿಸುವಾಗ ಸಾರಿಯಾಗಿ ಪರಿಶೀಲಿಸಲು ನಾವು ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧೀಕ್ಷಕರಿಗೆ ಹೇಳಿದ್ದೇವೆ"
"ನಾನು ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಹೋಂ ಸ್ಟೇ ಅಸೋಸಿಯೇಷನ್ ಅಧಿಕಾರಿಗಳನ್ನು ಅನ್ನು ಭೇಟಿ ಮಾಡಿದ್ದೇನೆ ಮತ್ತು ಅವರೊಂದಿಗೆ ಸಭೆಗಳನ್ನು ನಡೆಸಿದ್ದೇನೆ. ನಿಗದಿತ ಏಜೆನ್ಸಿಗಳಲ್ಲಿಯೇ ತಮ್ಮ ಹೋಂಸ್ಟೇ ಅನ್ನು ನೊಂದಾಯಿಸಿಕೊಳ್ಳಲು ನಾನು ಅವರಿಗೆ ಹೇಳಿದ್ದೇನೆ.ಖರ್ಗೆ ತಿಳಿಸಿದರು.
ಕಳೆದ ಎರಡು ತಿಂಗಳಲ್ಲಿ ಕಾರ್ಯಕರ್ತರು ನಡೆಸಿದ ಸಮೀಕ್ಷೆಯಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಮಾರು 450 ಹೋಂ ಸ್ಟೇ ಗಳು ಇವೆ ಎಂದು ತಿಳಿದು ಬಂದಿದೆ. ಇವುಗಳಲ್ಲಿ, 281 ಹೋಂ ಸ್ಟೇ ಗಳು ಪ್ರವಾಸೋದ್ಯಮ ಇಲಾಖೆಯೊಂದಿಗೆ ನೊಂದಾಯಿತವಾಗಿವೆ. ಉಳಿದ 169 ಯಾವುದೇ ಇದಕ್ಕಾಗಿ ಅರ್ಜಿಯನ್ನು ಸಲ್ಲಿಸಲಿಲ್ಲ ಆದರೆ ಇನ್ನೂ ಚಾಲನೆಯಲ್ಲಿದ್ದವು. ಕೇವಲ 12 ಹೋಂಸ್ಟೇ ಗಳು ಮಾತ್ರ ನಿಯಮಗಳನ್ನು ಅನುಸರಿಸುತ್ತಿವೆ ಎಂದು ವರದಿ ಬಹಿರಂಗಪಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ

ಆಹಾರ ಸುರಕ್ಷತೆ: ಹೋಟೆಲ್‌ಗಳ ಮೇಲೆ ಕರ್ನಾಟಕ ಆರೋಗ್ಯ ಇಲಾಖೆ ದಿಢೀರ್ ದಾಳಿ, ತಪಾಸಣೆಗೆ 30 ವಿಶೇಷ ತಂಡ ರಚನೆ, Video

ಸಂಸತ್ತಿನಲ್ಲಿ ತೀವ್ರ ಗದ್ದಲ: ಅಮಿತ್ ಶಾ ಹೇಳಿಕೆಗೆ ವಿಪಕ್ಷಗಳ ಪಟ್ಟು, ಆಗಸ್ಟ್ 10ರವರೆಗೆ ಲೋಕಸಭೆ-ರಾಜ್ಯಸಭೆ ಕಲಾಪ ಮುಂದೂಡಿಕೆ..!

Video: ಕೌಲಾಲಂಪುರ-ಕೊಚ್ಚಿ ವಿಮಾನದಲ್ಲಿ ಹೈಡ್ರಾಮಾ: ಆಗಸದಲ್ಲೇ ತುರ್ತು ನಿರ್ಗಮನ ದ್ವಾರ ತೆರೆಯಲು ಯತ್ನಿಸಿದ ಪ್ರಯಾಣಿಕ! ಆತಂಕ ಸೃಷ್ಟಿ!

ಸುಳ್ಳು ಸುದ್ದಿ ಬಿತ್ತರ ಆರೋಪ: NDTV, India Todayಗೆ ಉದಯನಿಧಿ ಶಾಕ್, 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ನೋಟಿಸ್..!