'ಕಾಡಿನ ಮನುಷ್ಯ' ಕೆಂಚಪ್ಪ ಗೌಡ 
ರಾಜ್ಯ

48 ವರ್ಷ ಕಾಡಿನಲ್ಲಿ ಜೀವನ ನಡೆಸಿದ್ದ 'ಕಾಡಿನ ಮನುಷ್ಯ' ಕೆಂಚಪ್ಪ ಗೌಡ ವಿಧಿವಶ

ಸುಮಾರು 42ಕ್ಕೂ ಹೆಚ್ಚು ವರ್ಷಗಳ ಕಾಲ ಪಶ್ಚಿಮಘಟ್ಟ ಸಾಲಿನ ಪೂಮಲೆ ಕಾಡಿನಲ್ಲೇ ವಾಸಿಸುವ ಮೂಲಕ 'ಕಾಡಿನ ಮನುಷ್ಯ' ಎಂದೇ ಗುರ್ತಿಸಿಕೊಂಡಿದ್ದ ಕೆಂಚಪ್ಪ ಗೌಡ (72) ಅವರು ಶುಕ್ರವಾರ...

ಮಂಗಳೂರು: ಸುಮಾರು 42ಕ್ಕೂ ಹೆಚ್ಚು ವರ್ಷಗಳ ಕಾಲ ಪಶ್ಚಿಮಘಟ್ಟ ಸಾಲಿನ ಪೂಮಲೆ ಕಾಡಿನಲ್ಲೇ ವಾಸಿಸುವ ಮೂಲಕ 'ಕಾಡಿನ ಮನುಷ್ಯ' ಎಂದೇ ಗುರ್ತಿಸಿಕೊಂಡಿದ್ದ ಕೆಂಚಪ್ಪ ಗೌಡ (72) ಅವರು ಶುಕ್ರವಾರ ಅನಾರೋಗ್ಯದಿಂದಾಗಿ ವಿಧಿವಶರಾಗಿದ್ದಾರೆ.
ಮರ್ಕಂಜ ಗ್ರಾಮದ ಕೆದಿಕ್ಕಾನದಲ್ಲಿ ತಮ್ಮ ಸಹೋದರನ ಮನೆಯಲ್ಲಿ ಕೆಂಚಪ್ಪ ಗೌಡ ಅವರು ನಿಧನ ಹೊಂದಿದ್ದಾರೆಂದುತಿಳಿದುಬಂದಿದೆ. 
ಚಿಕ್ಕಂದಿನಿಂದಲೂ ಮೌನಿಯಾಗಿದ್ದ ಕೆಂಚಪ್ಪ ಅವರು ತಮ್ಮ 23ನೇ ವಯಸ್ಸಿನಲ್ಲಿಯೇ ಮನೆ ಬಿಟ್ಟು 7 ಕಿ.ಮೀ ದೂರದ ಬಾಳೆಡಿ ರಕ್ಷಿತಾರಣ್ಯಕ್ಕೆ ತೆರಳಿದ್ದರು. ಕಳೆದ 42 ವರ್ಷಗಳಿಂದ ಪೂಮಲೆ ಕಾಡಿನಲ್ಲೇ ಜೋಪಡಿ ನಿರ್ಮಿಸಿಕೊಂಡು ವಾಸಿಸುತ್ತಿದ್ದ ಅವರು, ಯಾರೇ ಬಳಿಗೆ ಹೋದರೂ ಮಾತನಾಡುತ್ತಿರಲಿಲ್ಲ. 
ಬಿದಿರಿನ ಮಂಚ, ಅಡಕೆ ಹಾಳೆ ಅವರ ಹಾಸಿಗೆಯಾಗಿತ್ತು. ಕಾಡಿನ ಗೆಡ್ಡೆಗೆಣಸು, ಹಣ್ಣುಗಳು ಅವರ ಆಹಾರವಾಗಿದ್ದವು. ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಎ.ಬಿ. ಇಬ್ರಾಹಿಂ ಅವರು ಆಸಕ್ತಿವಹಿಸಿ ಕೆಂಚಪ್ಪ ಗೌಡ ಅವರನ್ನು ಮನೆಗೆ ಕರೆತರುವ ಪ್ರಯತ್ನ ನಡೆಸಿದ್ದರು. ಕಳೆದೊಂದು ವರ್ಷದಿಂದ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು. 
ಸುಳ್ಯಾದಲ್ಲಿ ಮತ್ತೊಬ್ಬ ಕಾಡಿನ ಮನುಷ್ಯ
ಸುಳ್ಯಾ ತಾಲೂಕಿನ ಅರಂತೊಡು ಗ್ರಾಮದಲ್ಲಿ ಕಾಡಿನ ಮನುಷ್ಯರಿದ್ದು, ಕಳೆದ 12 ವರ್ಷಗಳಿಂದ ಚಂದ್ರಶೇಖರ್ ಗೌಡ ಅವರು ಕಾಡಿನಲ್ಲಿ ಜೀವನ ನಡೆಸುತ್ತಿದ್ದಾರೆ. 

ಚಂದ್ರಶೇಖರ್ ಅವರು ವೃತ್ತಿಯಲ್ಲಿ ಕಾರು ಚಾಲಕರಾಗಿದ್ದು, ಕೋಅಪರೇಟಿವ್ ಸೊಸೈಟಿಯಲ್ಲಿ ಸಾಲವನ್ನು ಪಡೆದುಕೊಂಡಿದ್ದರು. ಸಾಲವನ್ನು ತೀರಿಸಲು ಸಾಧ್ಯವಾಗದೆ ತೀವ್ರವಾಗಿ ನೊಂದು ಚಂದ್ರಶೇಖರ್ ಅವರು ಕಾಡಿನಲ್ಲಿ ವಾಸ ಮಾಡಲು ಆರಂಭಿಸಿದ್ದರು. ಬಳಿಕ ಈ ಬಗ್ಗೆ ಮಾಹಿತಿ ತಿಳಿದಿದ್ದ ಉಪಆಯುಕ್ತ ಎ.ಬಿ. ಇಬ್ರಾಹಿಂ ಅವರು ವರ್ಷಗಳ ಹಿಂದೆ ತಮ್ಮ ಕಚೇರಿಗೆ ಚಂದ್ರಶೇಖರ್ ಅವರನ್ನು ಕರೆದುಕೊಂಡು ಹೋಗಿ, ಅಕ್ರಮ ಸಕ್ರಮ ಯೋಜನೆಯಡಿಯಲ್ಲಿ 1 ಎಕರೆ ಭೂಮಿ ಕೊಡಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಅಧಿಕಾರಿಗಳ ಮಾತನ್ನು ಕೇಳದ ಚಂದ್ರಶೇಖರ್ ಅವರು ಈಗಲೂ ಕಾಡಿನಲ್ಲಿಯೇ ಜೀವನ ನಡೆಸುತ್ತಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT