ಸೌಂದರ್ಯ ಲಹರಿ ಪಾರಾಯಣ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ 
ರಾಜ್ಯ

ವಿಶ್ವದ ಅನೇಕ ಸಮಸ್ಯೆಗಳಿಗೆ ನಮ್ಮ ಸಂಸ್ಕೃತಿಯಲ್ಲಿ ಉತ್ತರವಿದೆ: ಪ್ರಧಾನಿ ಮೋದಿ

ಆದಿ ಶಂಕರರು ರಚಿಸಿದ ಸೌಂದರ್ಯ ಲಹರಿಯನ್ನು ಸರಿಯಾಗಿ ಅರ್ಥಮಾಡಿಕೊಂಡರೆ ವಿವಿಧತೆಯಲ್ಲಿ ಏಕತೆ ಕಂಡುಕೊಳ್ಳಲು ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು: ಆದಿ ಶಂಕರರು ರಚಿಸಿದ ಸೌಂದರ್ಯ ಲಹರಿಯನ್ನು ಸರಿಯಾಗಿ ಅರ್ಥಮಾಡಿಕೊಂಡರೆ ವಿವಿಧತೆಯಲ್ಲಿ ಏಕತೆ ಕಂಡುಕೊಳ್ಳಲು ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. 
ಅರಮನೆ ಮೈದಾನದಲ್ಲಿ ವೇದಾಂತ ಭಾರತಿ, ಯಡತೊರೆ ಮಠದ ವತಿಯಿಂದ ಆಯೋಜಿಸಲಾಗಿದ್ದ ದಶಮಃ ಸೌಂದರ್ಯ ಲಹರಿ ಪರಾಯಣದ ಮಹಾಸಮರ್ಪಣೆಯಲ್ಲಿ ಭಾಗವಹಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ  
ಆದಿ ಶಂಕರಾಚಾರ್ಯರು ಭಾರತದ ಸಾಂಸ್ಕೃತಿಕ ಉದ್ಧಾರಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು, ಭವಿಷ್ಯದ ಪೀಳಿಗೆಯ ಒಳಿತಿಗಾಗಿ ಶಂಕರರು ಲಹರಿ ರಚಿಸಿದರು, ವಿಶ್ವವನ್ನೇ ಒಂದು ಕುಟುಂಬ ಎಂದು ಭಾವಿಸಿದ್ದ ಶಂಕರಾಚಾರ್ಯರಿಗೆ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನಲ್ಲಿ  ವಿಶ್ವಾಸವಿತ್ತು ಎಂದು ಹೇಳಿದ್ದಾರೆ. 
ಕಳೆದ ವಾರ ನಾನು ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ್ದೆ, ಅಲ್ಲಿಗೆ ಹೋದಾಗಲೆಲ್ಲಾ ನನಗೆ ಆದಿ ಶಂಕರರು ನೆನಪಾಗುತ್ತಾರೆ, ಈಗಿನ ಅತ್ಯಾಧುನಿಕ ಸೌಲಭ್ಯಗಳ ಹೊರತಾಗಿಯೂ ಕೇದಾರನಾಥವಿರುವ ಪ್ರದೇಶ ತಲುಪುವುದು ದುರ್ಗಮ, ಇನ್ನು ಸಹಸ್ರ ವರ್ಷಗಳ ಹಿಂದೆ ಯಾವುದೇ ಸೌಲಭ್ಯಗಳಿಲ್ಲದೇ, ಶಂಕರರು ಅಲ್ಲಿಗೆ ತೆರಳಿ ಸಾಧನೆ ಮಾಡಿದ್ದರ ಬಗ್ಗೆ ಅಚ್ಚರಿಯಾಗುತ್ತದೆ ಎಂದು ಮೋದಿ ಶಂಕರರಾಚಾರ್ಯರನ್ನು ಸ್ಮರಿಸಿದ್ದಾರೆ.   
ನವರಾತ್ರಿಯ ವ್ರತಾಚರಣೆಯಲ್ಲಿ ಸೌಂದರ್ಯ ಲಹರಿ 
ಇದೇ ವೇಳೆ ತಮಗೂ ಸೌಂದರ್ಯ ಲಹರಿಗೂ ಇರುವ ನಂಟಿನ ಬಗ್ಗೆಯೂ ಮೋದಿ ಹೇಳಿದ್ದು, ಅನೇಕ ವರ್ಷಗಳಿಂದ ತಾವು ಆಚರಿಸುತ್ತಿರುವ ನವರಾತ್ರಿ ವ್ರತದಲ್ಲಿ ತಾವು ಸೌಂದರ್ಯ ಲಹರಿ ಪಾರಾಯಣಕ್ಕೆ ವಿಶೇಷ ಸ್ಥಾನ ನೀಡಿರುವುದಾಗಿ ಹೇಳಿದ್ದು, ಮಂತ್ರೋಚ್ಛಾರಣೆಯಲ್ಲಿ ವಿಶೇಷ ಶಕ್ತಿ ಇದೆ, ನಾದ ಬ್ರಹ್ಮನ ಕಲ್ಪನೆಯನ್ನು ನಾವು ಸ್ವೀಕರಿಸಿದ್ದೇವೆ, ನಾದ ಬ್ರಹ್ಮನಲ್ಲಿರುವ ಶಕ್ತಿಯನ್ನು ಆಧುನಿಕ ವಿಜ್ಞಾನವೂ ಅಲ್ಲಗಳೆಯುವುದಿಲ್ಲ, ಸೌಂದರ್ಯ ಲಹರಿ ಪಾರಾಯಣ ಬೇಧಭಾವವಿಲ್ಲದೇ ಎಲ್ಲರೂ ಒಂದಾಗುವಂತೆ ಮಾಡುತ್ತದೆ. ಭಾರತವನ್ನು ಬರಿಗಾಲಲ್ಲಿ 3 ಬಾರಿ ಸುತ್ತಿ, 4 ಮಠಗಳನ್ನು ಸ್ಥಾಪಿಸಿದ ಶಂಕರಾಚಾರ್ಯರು ಭಗವಂತನನ್ನು ತಲುಪಲು ಅದ್ವೈತ ಮಾರ್ಗವನ್ನು ಪ್ರತಿಪಾದಿಸಿದ್ದರು. ಎಲ್ಲಿ ದ್ವೈತವಿರುವುದಿಲ್ಲವೋ ಅಲ್ಲಿ ಅದ್ವೈತವಿರುತ್ತದೆ, ಎಲ್ಲಿ ಅದ್ವೈತವಿದ್ದಲ್ಲಿ ಸಂಘರ್ಷ ವಿರುವುದಿಲ್ಲ ಎಂದು ಮೋದಿ ಹೇಳಿದ್ದಾರೆ. 
ಭಾರತದ ಆಧ್ಯಾತ್ಮಿಕ ಸಂಸ್ಕೃತಿ, ಶ್ರೀಮಂತಿಕೆಯನ್ನು ನಾಶ ಮಾಡಲು ಅನೇಕ ದಾಳಿಗಳು ನಡೆದಿವೆ, ಆದರೆ ನಮ್ಮ ಸಂಸ್ಕೃತಿಯನ್ನು ನಾಶ ಮಾಡಲು ಸಾಅಧ್ಯವಾಗಿಲ್ಲ. ಇಂದು ನಮ್ಮ ಪೀಳಿಗೆ ಪುಸ್ತಕಗಳಿಗಿಂಟ ಗ್ಯಾಡ್ಜೆಟ್ ಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ, ನಮ್ಮ ಪರಂಪರೆಯ ಸಾರ ಪುಸ್ತಕಗಳಲ್ಲಿ ಅಡಗಿದೆ ಫೋನ್ ಗಳಿಂದ್ ಅಪುಸ್ತಕಗಳ ಕಡೆಗೆ ತರಬೇಕು. ಭಾರತದ ಪ್ರಾಚೀನ ಸಂಸ್ಕೃತಿ ವಿಶ್ವಕ್ಕೆ ಮಾದರಿಯಾಗಿದ್ದು, ಯಾರೂ ಯಾರನ್ನೂ ದ್ವೇಶಿಸಬಾರದೆಂಬ ನಮ್ಮ ಸಂಸ್ಕೃತಿಯ ಸಾರವಾಗಿದ್ದು ವಿಶ್ವದಲ್ಲಿನ ಅನೇಕ ಸಮಸ್ಯೆಗಳಿಗೆ ನಮ್ಮ ಸಂಸ್ಕೃತಿಯಲ್ಲಿ ಉತ್ತರವಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ. 
ಸಹಸ್ರಾರು ಜನರೊಂದಿಗೆ ಸೌಂದರ್ಯ ಲಹರಿ ಪಠಿಸಿದ ಪ್ರಧಾನಿ ಮೋದಿ! 
ಅರಮನೆ ಮೈದಾನದಲ್ಲಿ ನಡೆದ ಸೌಂದರ್ಯ ಲಹರಿ ಪಾರಾಯಣೋತ್ಸವದ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಸಹಸ್ರಾರು ಜನರೊಂದಿಗೆ ತಾವೂ ಸಹ ಸೌಂದರ್ಯ ಲಹರಿ ಪಠಿಸಿದರು. ಬಳಿಕ ಮಾತನಾಡಿದ ಅವರು ಸೌಂದರ್ಯ ಲಹರಿ ಪಾರಯಾಣ ಮಾಡಿ ದಿವ್ಯ ಅನುಭೂತಿ ಉಂಟಾಯಿತು. ಸೌಂದರ್ಯ ಲಹರಿ ಪಾರಾಯಣ ಮಾಡುವುದರಿಂದ ಜ್ಞಾನ, ನೆಮ್ಮದಿ ವೃದ್ಧಿಸುತ್ತದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನ ನೀಡಿದ ಶಂಕರ ಭಾರತಿ ಸ್ವಾಮಿಗಳು ಹಾಗೂ ವೇದಾಂತ ಭಾರತಿ ಸಂಸ್ಥೆಗೆ ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Delhi CJP Protest: ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ ಸೇರಿ 150ಕ್ಕೂ ಹೆಚ್ಚು ಮಂದಿ ಪೊಲೀಸ್ ವಶ; Video

CEC ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ CJP ಪ್ರತಿಭಟನೆ: ದೆಹಲಿಯಲ್ಲಿ ಬಂಧನ ಪ್ರಕ್ರಿಯೆ ಆರಂಭ, ತೀವ್ರ ಭದ್ರತೆ; Video

‘ಕಾನೂನು ಸುವ್ಯವಸ್ಥೆಗೆ ಗಂಭೀರ ಅಪಾಯವಿದೆ’: ಸಿಜೆಪಿ ಪ್ರತಿಭಟನೆಗೆ ಕೆಲವೇ ಗಂಟೆ ಮೊದಲು ರಾಜ್ಯಗಳಿಗೆ ಪತ್ರ ಬರೆದು MHA ಹೇಳಿದ್ದೇನು?

ನವೆಂಬರ್‌ನಲ್ಲಿ ಕರ್ನಾಟಕ ಬಿಜೆಪಿಗೆ ಮೇಜರ್ ಸರ್ಜರಿ: ಬಿವೈ ವಿಜಯೇಂದ್ರ, ಆರ್ ಅಶೋಕಗೆ ಗೇಟ್ ಪಾಸ್?; ಹೊಸ ಮುಖಗಳಿಗೆ ಮಣೆ!

ಬಾಕಿ ಸಾಲ ವಸೂಲಿಗೆ 'ಗೃಹಲಕ್ಷ್ಮಿ' ಯೋಜನೆಯ ಹಣ ಕಡಿತಗೊಳಿಸದಂತೆ ಬ್ಯಾಂಕುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಸರ್ಕಾರ!