ಬ್ರಿಗೇಡ್ ರಸ್ತೆ 
ರಾಜ್ಯ

ಬ್ರಿಗೇಡ್ ರಸ್ತೆ: ವಾಹನ ನಿಲುಗಡೆಗೆ ಮಹಿಳೆಯರಿಗೆ ಶೇ.20 ಮೀಸಲು

ಭಾನುವಾರ ಬೆಳಿಗ್ಗೆ ಬ್ರಿಗೇಡ್ ರಸ್ತೆ ಗುಲಾಬಿ ರಂಗಿನೊಂದಿಗೆ ವರ್ಣರಂಜಿತವಾಗಿತ್ತು. ರಸ್ತೆಯಲ್ಲಿನ ಪಾರ್ಕಿಂಗ್ ಸೌಲಭ್ಯದಲ್ಲಿ ಇದೇ ಪ್ರಥಮ ಬಾರಿಗೆ ಮಹಿಳೆಯರಿಗೆ 20 ಪ್ರತಿಶತ ಮೀಸಲಾತಿ.....

ಬೆಂಗಳೂರು: ಭಾನುವಾರ ಬೆಳಿಗ್ಗೆ ಬ್ರಿಗೇಡ್ ರಸ್ತೆ ಗುಲಾಬಿ ರಂಗಿನೊಂದಿಗೆ ವರ್ಣರಂಜಿತವಾಗಿತ್ತು. ರಸ್ತೆಯಲ್ಲಿನ ಪಾರ್ಕಿಂಗ್ ಸೌಲಭ್ಯದಲ್ಲಿ ಇದೇ ಪ್ರಥಮ ಬಾರಿಗೆ ಮಹಿಳೆಯರಿಗೆ 20 ಪ್ರತಿಶತ ಮೀಸಲಾತಿ ನೀಡಲಾಗಿತ್ತು. ಮೇಯರ್ ಸಂಪತ್ ರಾಜ್ ಮತ್ತು  ಶಾಸಕ ಎನ್ ಎನ್ ಎ ಹ್ಯಾರೀಸ್ ಮಹಿಳೆಯರ  ಮೀಸಲು ವಾಹನ ಪಾರ್ಕಿಂಗ್ ವ್ಯವಸ್ಥೆಗೆ ಚಾಲನೆ ನಿಡಿದರು.
ಈ ಪ್ರಕಾರ, ರಸ್ತೆಯ ಹತ್ತು ಪಾರ್ಕಿಂಗ್ ತಾಣಗಳು (ಬಾಟಾ ಶೋ ರೂಂ ನಿಂದ ಪೂಮಾ ಶೋ ರೂಂ ವರೆಗೆ) ಮಹಿಳೆಯರಿಗೆ ಮೀಸಲಾಗಿರಲಿದೆ. " ಈಗಾಗಲೇ ಇರುವ  ಟೆಂದರ್ ಒಪ್ಪಂದದಂತೆ  ಶೇ. 20 ಮೀಸಲಾತಿಗಳನ್ನು ಜಾರಿ ಮಾಡಲಾಗಿದೆ. ಆರು ತಿಂಗಳುಗಳಲ್ಲಿ, ಎಲ್ಲಾ ದ್ವಿಚಕ್ರ ವಾಹನಗಳು ಮತ್ತು ಕಾರ್ ಪಾರ್ಕಿಂಗ್ ಸೌಲಭ್ಯಗಳಲ್ಲಿ ಮಹಿಳೆಯರಿಗೆ ವಿಶೇಷ ಮೀಸಲು ಕಲ್ಪಿಸಲಿದ್ದೇವೆ, " ಬಿಬಿಎಂಪಿ ಮೇಯರ್ ಸಂಪತ್ ರಾಜ್ ಹೇಳಿದರು. 
ಶೀಘ್ರದಲ್ಲೇ ಚರ್ಚ್ ಸ್ಟ್ರೀಟ್ ನಲ್ಲಿ ಪಾರ್ಕಿಂಗ್ ಸೌಲಭ್ಯವನ್ನು ಪ್ರಾರಂಭಿಸಲಾಗುವುದು. ಗಾಂಧಿನಗರದಲ್ಲಿ ಬಹುಮಹಡಿಯ ಪಾರ್ಕಿಂಗ್ ಸಂಕೀರ್ಣವು ಬರಲಿದ್ದು ಅದರಲ್ಲಿ ಮಹಿಳೆಯರಿಗೆ ಶೇ. 25 ಮೀಸಲು ಸೌಲಭ್ಯವಿರಲಿದೆ. ಈ ಜಾಗದಲ್ಲಿ 500 ಕಾರುಗಳು ಮತ್ತು 550 ದ್ವಿಚಕ್ರ ವಾಹನಕ್ಕೆ ಅವಕಾಶವಿರಲಿದೆ ಎಂದರು. "ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಲಲಾಗಿದೆ. ಬ್ರಿಗೇಡ್ ರಸ್ತೆ ಮತ್ತು ಎಮ್ ಜಿ ರಸ್ತೆಗಳಲ್ಲಿ ಶಾಪಿಂಗ್ ಮಾಡುವವರು ಪಾರ್ಕಿಂಗ್ ಗಾಗಿ ಸರಿಯಾದ ಜಾಗ ಸಿಗದೆ ಪರದಾಡುತ್ತಾರೆ.ಆಗ ಸಮೀಪದ ಕಿರಿದಾದ ರಸ್ತೆಗಳಲ್ಲಿ ವಾಹನಗಳನ್ನು ನಿಲ್ಲಿಸುತ್ತಾರೆ. ಅಂತಹಾ ಸನ್ನಿವೇಶಗಳಲ್ಲಿ ತಮ್ಮ ವಾಹನಗಳನ್ನು ಹಿಂಪಡೆಯಲು ಅವರು ರಾತ್ರಿಗಳಲ್ಲಿ ಎಚ್ಚರವಾಗಿರಬೇಕಾಗುತ್ತದೆ "ಎಂದು ಮೇಯರ್ ಹೇಳಿದರು.
"ಮಹಿಳೆಯರ ಸುರಕ್ಷತೆ ಹಾಗೂ ಅನುಕೂಲದ ದೃಷ್ಟಿಯಿಂದ ಈ ಕ್ರಮ ಸ್ವಾಗತಾರ್ಹ. ನಗರದ ಎಲ್ಲ ರಸ್ತೆಗಳ ವಾಹನ ನಿಲುಗಡೆ ಸ್ಥಳಗಳಲ್ಲಿ ಮಹಿಳೆಯರಿಗೆ ಮೀಸಲು ಕಲ್ಪಿಸಬೇಕು" ಎಂದು ಶಾಸಕ ಹ್ಯಾರಿಸ್ ಹೇಲಿದರು. "ಇಲ್ಲಿ ಕಾರು ನಿಲ್ಲಿಸಿದ ಮಹಿಳೆಯರು ಟಿಕೆಟ್‌ ಪಡೆಯಬೇಕು. ಆಗ ಅವರಿಗೆ ‘ಲೇಡಿ ಡ್ರೈವರ್‌’ ಎಂಬ ಗುಲಾಬಿ ಬಣ್ಣದ ಕಾರ್ಡ್‌ ನೀಡಲಾಗುತ್ತದೆ. ಅದನ್ನು ಕಾರುಗಳಲ್ಲಿ ಪ್ರದರ್ಶಿಸಬೇಕು" ಎಂದು ಬ್ರಿಗೇಡ್‌ ರಸ್ತೆ ಮಳಿಗೆಗಳ ಮಾಲೀಕರ ಸಂಘದ ಕಾರ್ಯದರ್ಶಿ ಸುಹೈಲ್‌ ಯೂಸುಫ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT