ರೆಬೋ ಮೋನಿಕಾ ಜಾನ್ 
ರಾಜ್ಯ

ಬೆಂಗಳೂರು: ಮಲಯಾಳಂ ನಟಿಗೆ ಕಿರುಕುಳ, ಯುವಕನ ಬಂಧನ

ಖ್ಯಾತ ನಟಿಗೆ ಒಬ್ಬರಿಗೆ ಕಿರುಕುಳ ನೀಡುತ್ತಿದ್ದ ಬೆಂಗಳೂರಿನ ಯುವಕನನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಫ್ರಾಂಕ್ಲಿನ್ ವ್ಹಿಸಿಲ್ ಎಂದು ಗುರುತಿಸಲಾಗಿದ್ದು,......

ಬೆಂಗಳೂರು: ಖ್ಯಾತ ನಟಿಗೆ ಒಬ್ಬರಿಗೆ ಕಿರುಕುಳ ನೀಡುತ್ತಿದ್ದ ಬೆಂಗಳೂರಿನ ಯುವಕನನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಫ್ರಾಂಕ್ಲಿನ್ ವ್ಹಿಸಿಲ್ ಎಂದು ಗುರುತಿಸಲಾಗಿದ್ದು, ಮಲಯಾಳಂ ಚಿತ್ರರಂಗದ ಉದಯೋನ್ಮುಖ ನಟಿ ರೆಬೋ ಮೋನಿಕಾ ಜಾನ್ ಗೆ ತನ್ನನ್ನು ಪ್ರೀತಿಸುವಂತೆ, ಮದುವೆಯಾಗುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ.
ಬಸವನಗುಡಿಯ ಖಾಸಗಿ ಸಂಸ್ಥೆಯ ಉದ್ಯೋಗಿ ಆಗಿರುವ ಫ್ರಾಂಕ್ಲಿನ್ ಎಲೆಕ್ಟ್ರಾನಿಕ್ ಸಿಟಿ ನಿವಾಸಿಯಾಗಿದ್ದಾನೆ ಕಳೆದ ಒಂದು ವರ್ಷದಿಂದ ನಟಿಯ ಹಿಂದೆ ಬಿದ್ದಿದ್ದ ಈತನ ವಿರುದ್ಧ ನಟಿ ಪೋಲೀಸರಿಗೆ ದೂರಿತ್ತಿದ್ದಾರೆ. ದೂರಿನ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 
ಮಲಯಾಳಂನ 'ಜೋಕೊಬಿಂಟೆ ಸ್ವರ್ಗರಾಜ್ಯಂ'ಚಿತ್ರದಲ್ಲಿ ನಟಿಸಿದ್ದ ರೆಬೋ ಮೋನಿಕಾ ಜಾನ್ ಬೆಂಗಳುರಿನ ಕೋರಮಂಗಲ ನಿವಾಸಿಯಾಗಿದ್ದಾರೆ. ಭಾನುವಾರದಂದು ಮಡಿವಾಳದ ಚರ್ಚ್ ಗೆ ಪ್ರಾರ್ಥನೆಗಾಗಿ ತೆರಳುವ ನಟಿಯನ್ನು ಫ್ರಾಂಕ್ಲಿನ್ ಪರಿಚಯ ಮಾಡಿಕೊಂಡಿದ್ದಾನೆ. ಆಕೆಯ ಫೋನ್ ನಂಬರ್ ಪಡೆದ ಈತ ಸದಾ ಆಕೆಯನ್ನು ತನ್ನನ್ನಏ ಮದುವೆಯಾಗುವಂತೆ ಕಾಡತೊಡಗಿದ್ದನು.
ಈ ಕುರಿತು ನಟಿ ಮೋನಿಕಾ ಜಾನ್, ಅದೊಮ್ಮೆ ಎಚ್ಚರಿಕೆಯನ್ನು ನೀಡಿದ್ದರು. ಆದರೆ ಫ್ರಾಂಕ್ಲಿನ್ ಆ ಎಚ್ಚರಿಕೆಯನ್ನು ಕಡೆಗಣಿಸಿದ್ದಲ್ಲದೆ ಅಶ್ಲೀಲ ಸಂದೇಶಗಳನ್ನು ಕಳಿಸುವುದು, ಕರೆ ಮಾಡಿ ತೊಂದರೆ ಕೊಡುವುದನ್ನು ಮುಂದುವರಿಸಿದ್ದ. ಅಂತಿಮವಾಗಿ ನಟಿ ಪೋಲೀಸರಿಗೆ ದೂರು ಕೊಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜ್ಞಾನೇಶ್ ಕುಮಾರ್ ವಿರುದ್ಧ ದೆಹಲಿ, ಮುಂಬೈನಲ್ಲಿ ಬೃಹತ್ ಪ್ರತಿಭಟನೆ; 700 ಮಂದಿ ವಶಕ್ಕೆ

FlyDubai ಘಟನೆ ಹಿಂದೆ ಯಾವುದೇ ಶಕ್ತಿಯ ಕೈವಾಡವಿದ್ದರೂ ಡೋಂಟ್ ಕೇರ್; 'ಭಾರಿ ಬೆಲೆ' ತೆರಬೇಕಾಗುತ್ತೆ- ಇಸ್ರೇಲ್ ಪ್ರಧಾನಿ ನೆತನ್ಯಾಹು ಎಚ್ಚರಿಕೆ

ಬಿಹಾರ ಪ್ರವಾಹ: ವಾಯುಪಡೆಯ ಹೆಲಿಕಾಪ್ಟರ್‌ನಿಂದ ಪರಿಹಾರ ಸಾಮಗ್ರಿಯ ಪ್ಯಾಕೆಟ್ ಬಿದ್ದು ವೃದ್ಧ ಸಾವು!

Asian Games 2026: 44 ವರ್ಷಗಳ ಬರ ನೀಗಿಸಿದ ಮಹಿಳಾ ಪಡೆ; ಚೀನಾ ಮಣಿಸಿ ಚಿನ್ನ ಗೆದ್ದ ಭಾರತ!

CJP ಪ್ರತಿಭಟನೆಗೆ ಕೈಜೋಡಿಸಿದ ನಸೀರುದ್ದೀನ್ ಶಾ; ನಟನನ್ನು ಅಪ್ಪಿಕೊಂಡು ಕಣ್ಣೀರಿಟ್ಟ ಅಭಿಜೀತ್ ದೀಪ್ಕೆ; Video!