ರಾಜ್ಯ

ಕಲಬುರಗಿ: ಭೀಮಾ ನದಿ ತೀರದಲ್ಲಿ ಪ್ರವಾಹದ ಎಚ್ಚರಿಕೆ

Shilpa D
ಕಲಬುರಗಿ: ಮಹಾರಾಷ್ಟ್ರದ ಉಜನಿ ಜಲಾಶಯ ಸುತ್ತಮುತ್ತ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಭೀಮಾನದಿ ದಡದಲ್ಲಿರುವ ಅಫ್ಜಲಪುರ ಮತ್ತು ಜೇವರ್ಗಿ ತಾಲೂಕುಗಳ ಗ್ರಾಮದ ಜನತೆಗೆ ಪ್ರವಾಹದ ಎಚ್ಚರಿಕೆ ನೀಡಲಾಗಿದೆ.
ಉಜನಿ ಜಲಾಶಯದಿಂದ 5 ಸಾವಿರ ಕ್ಯೂಸೆಕ್ಸ್ ನೀರು ಬಿಟ್ಟಿರುವ ಕಾರಣ, ಹಾಗೂ ಅದೇ ಪ್ರಮಾಣದ ನೀರು ಭೀಮಾ ನದಿಯಿಂದ ಸೊಣ್ಣ ಜಲಾಶಯಕ್ಕೆ ಹರಿಸಿರುವ ಕಾರಣ ಒಳಹರಿವು ಹೆಚ್ಚಿದೆ ಎಂದು ಸೊಣ್ಣ ನೀರಾವರಿ ಯೋಜನೆ ಕಾರ್ಯಕಾರಿ ಎಂಜಿನೀಯರ್ ಹೇಳಿದ್ದಾರೆ.
ಸದ್ಯ, ಸೊಣ್ಣ ಜಲಾಶಯದಲ್ಲಿ 405.75 ಅಡಿ ನೀರು ಸಂಗ್ರಹವಾಗಿದೆ, ಆದರೆ ಜಲಾಶಯ 406.40 ಅಡಿ ಎತ್ತರವಿದೆ. 
ಹೀಗಾಗಿ ಭೀಮಾ ನದಿ ತೀರದಲ್ಲಿರುವ ಜೇವರ್ಗಿ ಮತ್ತು ಅಫ್ಜಲಪುರ ತಾಲೂಕಿನ ಸುತ್ತಮುತ್ತಲ ಗ್ರಾಮಗಳ ಜನರಿಗೆ ಸ್ವಿಮ್ಮಿಂಗ್ ಮತ್ತು ಬಟ್ಟೆ  ಜಾನುವಾರು ತೊಳೆಯಲು ತೆರಳದಂತೆ ಸೂಚಿಸಲಾಗಿದೆ.
SCROLL FOR NEXT