ಮೈಸೂರು: ಪತಿಯ ಕಿರುಕುಳದಿಂದ ಬೇಸತ್ತ ಮಹಿಳೆಯೊಬ್ಬರು ಮಗನ ಜೊತೆ ನಾಪತ್ತೆಯಾಗಿರೋ ಘಟನೆ ಭಾನುವಾರ ಮೈಸೂರಿನಲ್ಲಿ ನಡೆದಿದೆ.
ನಾಪತ್ತೆಯಾದ ಮಹಿಳೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೂಟಗಳ್ಳಿಯ ನಿವಾಸಿ ಲಿಖಿತ (24) ಎಂದು ಗುರುತಿಸಲಾಗಿದ್ದು, ಮಗ ಧ್ರುವ(2)ನೊಂದಿಗೆ ನಾಪತ್ತೆಯಾಗಿದ್ದಾರೆ.
ಲಿಖಿತ ನಾಪತ್ತೆಯಾಗೋದಕ್ಕೂ ಮೊದಲು ತನ್ನ ತಾಯಿ ಪಂಕಜಾ ಅವರಿಗೆ ವೀಡಿಯೋ ಕಾಲ್ ಮಾಡಿ ಅದರಲ್ಲಿ, ತಾನು ನಾಪತ್ತೆ ಆಗುತ್ತಿರುವುದಾಗಿ ಹೇಳಿದ್ದಾರೆ. ಅಲ್ಲದೇ ತನ್ನ ಗಂಡ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿದ್ದಾರೆ. ಬಳಿಕ ಹೂಟಗಳ್ಳಿಯಲ್ಲಿರುವ ಗಂಡ ಮಂಜುನಾಥ್ ಮನೆಯಿಂದ ಲಿಖಿತ ಮಗುವಿನ ಸಮೇತ ನಾಪತ್ತೆಯಾಗಿದ್ದಾರೆ.
ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.