ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ನಡುವಿನ ಭಿನ್ನಾಭಿಪ್ರಾಯ ಕಾಂಗ್ರೆಸ್ ಪಕ್ಷಕ್ಕೆ ತಲೆನೋವಾಗಿ ಪರಿಣಮಿಸಿದೆ. ಈ ಇಬ್ಬರ ನಡುವಿನ ಬೇಸರವನ್ನು ಬಗೆಹರಿಸಲು ಇದೀಗ ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ.
ಮಂತ್ರಿಮಂದಲ ವಿಸ್ತರಣೆ ಬಳಿಕ ಹೊಸ ಮಂತ್ರಿಗಳ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಗಮಿಸದೆ ಎರಡು ದಿನಗಳಿಂದಲೂ ಮನೆಯಲ್ಲೇ ಉಳಿದಿದ್ದ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ತಮ್ಮ ಜಾಗೂ ಮುಖ್ಯಮಂತ್ರಿಗಳ ನಡುವೆ ಯಾವ ಭಿನ್ನಾಭಿಪ್ರಾಯಗಳಿಲ್ಲ ಎಂದು ಹೇಳಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್ "ಜ್ವರದ ಕಾರಣದಿಂದ ನಾನು ಸಮಾರಂಭಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ. ನನ್ನ ಅನುಪಸ್ಥಿತಿಯನ್ನು ಮಾದ್ಯಮಗಳು ವ್ಯಥಾ ತಪ್ಪು ಗ್ರಹಿಕೆ ಹುಟ್ಟುವಂತೆ ಪ್ರಸಾರ ಮಾಡಿದ್ದವು. ನಮ್ಮ ನಡುವೆ ಯಾವ ಬಿರುಕೂ ಇಲ್ಲ" ಎಂದರು.
ಸಿದ್ದರಾಮಯ್ಯ ಮತ್ತು ಪರಮೇಶ್ವರ್ ನಡುವಿನ ಶೀತಲ ಸಮರದ ವರದಿಗಳನ್ನು ಕುರಿತು ಕೇಳಲಾದಬ್ ಪ್ರಶ್ನೆಗೆ "ನಮ್ಮ ನಡುವಿನ ಶೀತಲ ಸಮರ ಅಥವಾ ಬಿಸಿ ಯುದ್ಧ ಇಲ್ಲ" ಎಂದು ಹೇಳಿದರು.
ಪತ್ರಕರ್ತದ ಪ್ರಶ್ನೆಗೆ ಉತ್ತರೈಸಿದ ಪರಮೇಶ್ವರ್, "ಇದು ಒಂದು ಸಾಮಾನ್ಯ ವಿಷಯ. ಸಚಿವ ಸಂಪುಟಕ್ಕೆ ಸೇರುವವರ ಹೆಸರನ್ನು ನಾನು ಸೂಚಿಸಬಹುದು ಅಥವಾ ಅವರು (ಸಿಎಮ್) ಸೂಚಿಸಬಹುದು. ಚರ್ಚೆ ನಡೆಯುತ್ತದೆ. ಅಂತಿಮವಾಗಿ ಹಿರಿಯ ಮುಖಂಡರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಉಪಸ್ಥಿತಿಯಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗುತ್ತದೆ. ನಾವೆಲ್ಲರೂ ಅದನ್ನು ಒಪ್ಪಿಕೊಂಡಿದ್ದೇವೆ. ಇಲ್ಲಿ ಬಿಕ್ಕಟ್ಟಿನ ಪ್ರಶ್ನೆ ಇಲ್ಲ,"ಎಂದು ಕೇಳಿದರು.
ಈ ವರದಿಗಳ ಹಿಂದೆ ವಿರೋಧ ಪಕ್ಷದ ಕೈವಾಡವಿದೆ ಎಂದ ಪರಮೇಶ್ವರ್ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ಪರಮೇಶ್ವರ ಅವರ ಅನುಪಸ್ಥಿತಿಯಲ್ಲಿ ಉಂಟಾದ ಬಿಕ್ಕಟ್ಟಿನ ಪರಿಣಾಮ ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡ್ ಬಳಿ ಪರಮೇಶ್ವರ್ ವಿರುದ್ದ ಅಸಮಾಧಾನ ತೋಡಿಕೊಂಡಿದ್ದರು. ನಂತರ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ವ್ಯವಹಾರಗಳ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಅವರ ಮದ್ಯಪ್ರವೇಶದ ಕಾರಣ ಪರಮೇಶ್ವರ್ ಮಾಧ್ಯಮಗಳಿಗೆ ಹೇಳಿಕೆ ನೀಡಬೇಕಾಗಿ ಬಂದಿತು. ಎಂದು ಮಾದ್ಯಮ ವರದಿಗಳಲ್ಲಿ ಬಿತ್ತರವಾಗಿದೆ.
ಗೃಹ ಇಲಾಖೆ ಸಲಹೆಗಾರ ಕೆಂಪಯ್ಯನವರೊಡನೆ ವ್ಯವಹರಿಸುವಾಗ ಎಚ್ಚರದಿಂದಿರಿ ಎಂದು ಹೊಸ ಗೃಹ ಸಚಿವ ರಾಮಲಿಂಗ ರೆಡ್ಡಿಯನ್ನು ಪರಮೇಶ್ವರ್ ಎಚ್ಚರಿಸಿದ್ದಾರೆ ಎನ್ನುವ ವರದಿಗಳನ್ನು ಪರಮೇಶ್ವರ್ ಸ್ವತಃ ತಳ್ಳಿಹಾಕಿದರು. "ರಾಮಲಿಂಗ ರೆಡ್ಡಿ ಹಿರಿಯ ನಾಯಕ. ಅವರು ಅನುಭವಿ ಮುಖಂಡರಾಗಿರುವ ಕಾರಾಣ ನಾನು ಸಲಹೆ ನೀಡಬೇಕಾಗಿಲ್ಲ. " ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics