ರಾಜ್ಯ

ಪಾವಗಡ ಜನರ ಕುಡಿಯುವ ನೀರಿನ ಬವಣೆ ತಣಿಸಲಿದೆ ತುಂಗಾಭದ್ರ ಜಲಾಶಯ!

Shilpa D
ಬೆಂಗಳೂರು: ಪಾವಗಡ, ಚಳ್ಳಕೆರೆ, ಮೊಳಕಾಲ್ಮೂರು, ಕೂಡ್ಲಿಗಿ ಮತ್ತು ಹೊಸ ಪೇಟೆ ತಾಲೂಕುಗಳ ಜನರ ದೀರ್ಘಕಾಲದ ಕುಡಿಯುವ ನೀರಿನ ಬವಣೆಗೆ ಕೊನೆ ಹಾಡಲು 2,250 ಕೋಟಿ ರು ವೆಚ್ಚದ ಕಾಮಗಾರಿಗೆ ಶೀಘ್ರವೇ ಚಾಲನೆ ದೊರೆಯಲಿದೆ.
ಯೋಜನೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತತ್ವದಲ್ಲಿ ನಡೆದ ಸಭೆಯಲ್ಲಿ, ಯಾವುದೇ ರೀತಿಯ ವಿಳಂಬ ಮಾಡದೇ ಶೀಘ್ರವೇ ಕಾಮಗಾರಿಗೆ ಚಾಲನೆ ನೀಡುವ  ಸಲುವಾಗಿ ಕೆಲಸ ಶುರು ಮಾಡಬೇಕು ಎಂದು  ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಸಿಎಂ ಕರೆ ನೀಡಿದ್ದಾರೆ.
ಈ ಯೋಜನೆಯಿಂದಾಗಿ ಸುಮಾರು 10 ಲಕ್ಷ ಮಂದಿ ಶುದ್ದ ಕುಡಿಯುವ ನೀರಿನ ಪ್ರಯೋಜನ ಪಡೆಯಲಿದ್ದಾರೆ, ಈ ಗ್ರಾಮಗಳ ಸಾವಿರಾರು ಜನರು ಅಂತರ್ಜಲದ ಫ್ಲೋರಿನ್ ಯುಕ್ತ ನೀರು ಕುಡಿದು ಸಮಸ್ಯೆ ಎದುರಿಸುತ್ತಿದ್ದರು.
ತುಂಗಭದ್ರಾ ಜಲಾಶಯದಿಂದ 2 ಟಿಎಂಸಿ ನೀರನ್ನು ಇ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗುತ್ತದೆ. ತುಂಗ ಭದ್ರ ಅಣೆಕಟ್ಟಿನಿಂದ ಸುಮಾರು 230 ಕಿಲೋಮೀಟರ್ ದೂರದಲ್ಲಿರುವ ಪವಗಡ ತಾಲ್ಲೂಕಿಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ಪೈಪ್ ಲೈನ್ ಹಾಕಲಾಗುತ್ತದೆ. ಇದು ರಾಜ್ಯದ ಅತಿ ಉದ್ದವಾದ ಕುಡಿಯುವ ನೀರಿನ ಪೈಪ್ ಲೈನ್ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕುಡಿಯುವ ನೀರಿಗಾಗಿ ಪ್ರತಿಭಟನೆ ನಡೆಸುತ್ತಿರುವ ಜನರು ತಮ್ಮ ಧರಣಿಯನ್ನು ಹಿಂತೆಗೆದುಕೊಳ್ಳಬೇಕೆಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ, ಕೂಡಲೇ ಯೋಜನೆಗಾಗಿ ಟೆಂಡರ್ ಆಹ್ವಾನಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ. 
SCROLL FOR NEXT