ಬೆಂಗಳೂರು: ಮೇ 2018 ರಲ್ಲಿ ರಾಜ್ಯ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ನಗರ ಬಡವರಿಗೆ ಸಬ್ಸಿಡಿ ಆಹಾರ ಸಿಗುವಂತಾಗಬೇಕು. ಈ ಕ್ಯಾಂಟೀನ್ ಗಾಗಿನ ಸಬ್ಸಿಡಿಯು ಸಂಪೂರ್ಣವಾಗಿ ರಾಜ್ಯದ ವೆಚ್ಚವಾಗಲಿದೆ. ಇದಕ್ಕಾಗಿ ದಿನಕ್ಕೆ 89 ಲಕ್ಷ ರೂ. ವೆಚ್ಚವಾಗುತ್ತಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿ ಸೇರಿ, ಸುಮಾರು 500 ಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್ ಅನ್ನು ರಾಜ್ಯದಲ್ಲಿ ಸ್ಥಾಪಿಸಲಾಗುವುದು. ಹೀಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್ ಯೋಜನೆ ವ್ಯಾಪ್ತಿ ವಿಸ್ತರಣೆ ಕುರಿತು ವಿಮರ್ಶಕರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಜೆಟ್ ನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ನಗರದ ಬಡವರಿಗಾಗಿ 198 ಸಬ್ಸಿಡಿ ಆಹಾರ ಕೇಂದ್ರಗಳನ್ನು ಕೆಲವು ತಿಂಗಳೊಳಗೆ ಸ್ಥಾಪಿಸಲಾಗುವುದು ಎಂದು ಘೋಷಿಸಿದ್ದರು. ಅದರಲ್ಲಿ 101 ಇಂದಿರಾ ಕ್ಯಾಂಟೀನ್ ಗಳು ಈಗಾಗಲೇ ಕಾರ್ಯ ನಿರ್ವಹಿಸುತ್ತಿದೆ, ಉಳಿದ 97 ಅನ್ನು ಅಕ್ಟೋಬರ್ 2 ರೊಳಗೆ ತೆರೆಯಲಾಗುವುದು ಎಂದು ಅವರು ಹೇಳಿದರು. ಈ ಕ್ಯಾಂಟೀನ್ ನಲ್ಲಿ ರೂ 5 ಕ್ಕೆಉಪಹಾರವನ್ನು , 10 ರೂ. ಗೆ ಊಟ ನೀಡಲಾಗುತ್ತಿದೆ.
ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್ ಅವರು ಹೇಳುವಂತೆ: "ಇಂದು, 1.4 ಲಕ್ಷ ಜನರಿಗೆ ದಿನವೂ ಆಹಾರ ಸಿಗುತ್ತಿದೆ. ಎಲ್ಲಾ 198 ಕ್ಯಾಂಟೀನ್ ಗಳೂ ಪ್ರಾರಂಭವಾದರೆ ಫಲಾನುಭವಿಗಳ ಸಂಖ್ಯೆ ಮೂರು ಲಕ್ಷಕ್ಕೆ ತಲುಪುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದಕ್ಕೆ ರಾಜ್ಯ ಸರ್ಕಾರ ನೀಡಿದ ಒಟ್ಟು ಸಬ್ಸಿಡಿ ದಿನಕ್ಕೆ 32 ಲಕ್ಷ ರೂ. ತಲುಪಿದೆ '' ಅಲ್ಲದೆ, ಇಂದಿರಾ ಕ್ಯಾಂಟೀನ್ ಗಾಗಿ ಅಡಿಗೆ ಮನೆಗಳು ಮತ್ತು ನ ಕ್ಯಾಂಟೀನ್ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ರೂ 100 ಕೋಟಿ ಖರ್ಚು ಮಾಡಿದೆ.
"ಕ್ಯಾಂಟೀನ್ ಬಿಡ್ಡರ್ ಗಳು ದಿನಕ್ಕೆ ಉಪಹಾರ, ಊಟ ಮತ್ತು ಭೋಜನಕ್ಕೆ ರೂ. 57 ಖರ್ಚು ಮಾಡುತ್ತಾರೆ. . ಗ್ರಾಹಕರು ಒಂದು ದಿನಕ್ಕೆ 25 ರೂ. (ರೂ 5 + ರೂ 10 + ರೂ 10) ನೀಡಿದರೆ ಉಳಿದ 32 ರೂ. ರಾಜ್ಯ ಸರ್ಕಾರ ಪಾವತಿಸುತ್ತಿದೆ. ಎಲ್ಲಾ 198 ಕ್ಯಾಂಟೀನ್ ಗಳೂ ಸೇರಿ ಆರಂಭದಲ್ಲಿ ದಿನಕ್ಕೆ 3 ಲಕ್ಷ ರೂ.ಖರ್ಚು ಬರುವುದೆಂದು ಎಂದು ಅಂದಾಜಿಸಲಾಗಿತ್ತು, ಆದರೆ ಈಗ 57 ಲಕ್ಷಕ್ಕೆ ಹೆಚ್ಚಳವಾಗಿದೆ. "
ಸಬ್ಸಿಡಿ ಮೊತ್ತವನ್ನು ಲೆಕ್ಕ ಹಾಕುವ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಇನ್ನೂ ನಿರತರಾಗಿದ್ದಾರೆ ಎಂದು ಪುರಸಭೆ ಮತ್ತು ಸ್ಥಳೀಯ ಸಂಸ್ಥೆಗಳ ರಾಜ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos