ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ನಗರ ಪ್ರದಕ್ಷಿಣೆಗೆ ಕಳಪೆ ಸ್ಥಿತಿಯಲ್ಲಿದ್ದ ಬಸ್ ಗಳನ್ನು ಕಳಿಸಿದ್ದ ಬಿಎಂಟಿಸಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಪ್ರಕರಣವನ್ನು ಸಾರಿಗೆ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಿಎಂಟಿಸಿ ಅಧ್ಯಕ್ಷ ಎಂ ನಾಗರಾಜು ಹೇಳಿದ್ದಾರೆ.
ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಈಗಾಗಲೇ ಬಿಎಂಟಿಸಿ ಎಂಡಿ ಸೂಚನೆ ನೀಡಿದ್ದಾರೆ. ಸೆ.13 ರಂದು ಸಿಎಂ ನಗರ ಪ್ರದಕ್ಷಿಣೆ ಕೈಗೊಂಡಾಗ ಸೂಕ್ತ ಎಸಿ ವ್ಯವಸ್ಥೆ ಇಲ್ಲದ ಬಸ್ ನ್ನು ಕಳಿಸಲಾಗಿತ್ತು. ಈ ಪ್ರಕರಣವನ್ನು ಸಾರಿಗೆ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಬಸ್ ಗಳು ಸರಿಯಾದ ಸ್ಥಿತಿಯಲ್ಲಿದೆಯೇ ಎಂಬುದನ್ನು ದೃಢಪಡಿಸಿಕೊಳ್ಳದೇ ಕಳಿಸಿದ್ದ ಶಾಂತಿನಗರ ವರ್ಕ್ ಶಾಪ್ ನ ಮ್ಯಾನೇಜರ್ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಬಿಎಂಟಿಸಿ ಎಂಡಿ ಸೂಚನೆ ನೀಡಿದ್ದಾರೆ.