ಕಾರವಾರ: ಕಾರವಾರ ಸಮೀಪದ ನಾಗರಮಡಿ ಜಲಪಾತದಲ್ಲಿ ಈಜಲು ಹೋಗಿ ಐವರು ಪ್ರವಾಸಿಗರು ನೀರು ಪಾಲಾಗಿದ್ದಾರೆ.
ಮೃತರು ಗೋವಾದ ಮಡಗಾಂವ್ ಸಮೀಪದ ರಾಯ್ ನಿವಾಸಿಗಳು ಎಂದು ತಿಳಿದು ಬಂದಿದೆ
ಮೃತರಲ್ಲಿ ನಾಲ್ವರು ಮಹಿಳೆಯರು, ಓರ್ವ ಪುರುಷ ಸೇರಿದ್ದಾರೆ.
ಇದುವರೆಗಿನ ಕಾರ್ಯಾಚರಣೆಯಲ್ಲಿ ಒಬ್ಬ ಮಹಿಳೆಯ ಶವ ಹೊರತೆಗೆಯಲಾಗಿದ್ದು ಇನ್ನೂ ನಾಲ್ವರ ದೇಹಕ್ಕಾಗಿ ಹುಡುಕಾಟ ನಡೆದಿದೆ.
ಕಾರವಾರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ..