ರಾಜ್ಯ

ಮಂಗಳೂರಿನ ಸರ್ಫರ್ ತನ್ವಿಗೆ ಅಂತರಾಷ್ಟ್ರೀಯ ಪ್ರಶಸ್ತಿಯ ಗರಿ

Raghavendra Adiga
ಮಂಗಳೂರು: ದೇಶದ ಖ್ಯಾತ ಸರ್ಫರ್ ಹಾಗೂ ಸ್ಟ್ಯಾಂಡ್ ಅಪ್ ಪೆಡ್ಲರ್ ಮಂಗಳೂರಿನ ತನ್ವಿ ಜಗದೀಶ್ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಬಾಜನರಾಗಿದ್ದಾರೆ.
ಅಮೆರಿಕದ ಕ್ಯಾಲಿಫೋರ್ನಿಯಾ ಸ್ಯಾನ್ ಡಿಯಾಗೊ ಸರ್ಫ್ ಕನೆಕ್ಟ್ ಸಂಘಟನೆ ಕ್ರೀಡಾ ಸಾಧಕರಿಗೆ ನೀಡುವ ಗ್ರೋಮ್ ಆಫ್ ದಿ ಇಯರ್ ಪ್ರಶಸ್ತಿಗೆ ತನ್ವಿ ಜಗದೀಶ್ ಆಯ್ಕೆಯಾಗಿದ್ದಾರೆ.
ಈ ಮುಖೇನ ತನ್ವಿ ಜಗದೀಶ್ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಸ್ಟ್ಯಾಂಡ್ ಅಪ್ ಪೆಡ್ಲರ್ ಎನಿಸಿದ್ದಾರೆ.
ಪ್ರಶಸ್ತಿ ಕುರಿತು ಮಾತನಾಡಿದ ತನ್ವಿ "ಈ ಪ್ರಶಸ್ತಿಯನ್ನು ಪಡೆದುಕೊಳ್ಳಲು ನಾನು ತುಂಬಾ ಸಂಭ್ರಮಿಸುತ್ತೇನೆ. ಇದರಿಂದ ನನ್ನಂತಹಾ ಯುವತಿಯರು ಸರ್ಫಿಂಗ್ ಕ್ರೀದಾ ಕ್ಷೇತ್ರದಲ್ಲೆ ಭಾಗವಹಿಸಿ ಸಾಧನೆ ಮಾಡಲು ಸ್ಪೂರ್ತಿ ಲಭಿಸಲಿದೆ" ಎಂದರು.
ಮಂಗಳೂರು ಹೊರವಲಯದ ಸಸಿಹಿತ್ಲು ಬಳಿ ಕೊಳಚಿ ಕಂಬಳ ನಿವಾಸಿ ತನ್ವಿ ಜಗದೀಶ್ ಮುಂದಿನ ತಿಂಗಳು ಅಮೆರಿಕಕ್ಕೆ ತೆರಳಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ . 
ಕಳೆದ ಏಪ್ರಿಲ್ ನಲ್ಲಿ ಅಮೆರಿಕದ ನಾರ್ತ್ ಕರೋಲಿನಾದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಸರ್ಫಿಂಗ್ ಸ್ಪರ್ಧೆಯಲ್ಲಿ ತನ್ವಿ ಭಾರತವನ್ನು ಪ್ರತಿನಿಧಿಸಿದ್ದರು . ಈ ಸ್ಪರ್ಧೆಯಲ್ಲಿ ತನ್ವಿ ಜಗದೀಶ್ ತೃತೀಯ ಸ್ಥಾನ ಪಡೆದಿದ್ದರು.
ಮೂಲ್ಕಿ ಮಂತ್ರ ಸರ್ಫಿಂಗ್ ಕ್ಲಬ್ ನ ಸದಸ್ಯೆ ಆಗಿರುವ ತನ್ವಿ ಚಿಕ್ಕಂದಿನಿಂದಲೇ ಸರ್ಫಿಂಗ್ ನಲ್ಲಿ ಆಸಕ್ತಿ ಹೊಂದಿದ್ದರು. ಕೊಳಚಿ ಕಂಬಳದ ತನ್ನ ಅಜ್ಜನ ಮನೆಯ ಪಕ್ಕ ದಲ್ಲಿರುವ ಮಂತ್ರ ಸರ್ಫಿಂಗ್ ಕ್ಲಬ್ ನಲ್ಲಿ ತರಬೇತಿ ಪಡೆದ ಬಳಿಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಹಲವು ಪಂದ್ಯಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗೆದ್ದಿದ್ದಾರೆ.
SCROLL FOR NEXT