ರಾಜ್ಯ

ಮಂಗಳೂರು ಏರ್ ಪೋರ್ಟ್ ನಲ್ಲಿ ಹುಸಿ ಬಾಂಬ್ ಭೀತಿ

Raghavendra Adiga
ಮಂಗಳೂರು: ಮಂಗಳೂರಿನಿಂದ ದುಬೈಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಓರ್ವ ಪ್ರಯಾಣಿಕರ ಬ್ಯಾಗ್‌ ನಲ್ಲಿ ಶಂಕಿತ ಸೆಲ್‌ ಬಾಂಬ್‌ ಪತ್ತೆಯಾಗಿದ್ದು, ವಿಮಾನ ತಡವಾಗಿ ತೆರಳಿದ ಘಟನೆ ನಿನ್ನೆ ರಾತ್ರಿ ನಡೆದಿದೆ.
ಮಂಗಳೂರು ಹೊರವಲಯದ ಕಣ್ಣೂರು ಚೆಕ್‌ಪೋಸ್ಟ್‌ ನಿವಾಸಿ ಮೊಹಮ್ಮದ್‌ ಮನ್ಸೂರ್‌ ದುಬೈಗೆ ತೆರಳುತ್ತಿದ್ದ. ವಿಮಾನ ನಿಲ್ದಾನದಲ್ಲಿ ತಪಾಸಣೆ ನಡೆಸುವ ಸಂದರ್ಭ ಅಲರ್ಟ್‌ ಮೆಸೇಜ್‌ ಬಂದಿದ್ದು ಸ್ಫೋಟಕ ಅಥವಾ ಡ್ರಗ್ಸ್‌ ಇದೆ ಎನ್ನುವ ಸಂದೇಹದ ಹಿನ್ನೆಲೆಯಲ್ಲಿ ಆತನ ಪ್ರಯಾಣವನ್ನು ತಡೆಹಿಡಿಯಲಾಯಿತು. 
ನಿಲ್ದಾಣದ ಭದ್ರತಾ ಸಿಬಂದಿ ಆತನನ್ನು ವಶಕ್ಕೆ ಪಡೆದು ತೀವ್ರ ತಪಾಸಣೆ ನಡೆಸಿದ ಸಂದರ್ಭ ಆತನ ಬಳಿ ಪವರ್‌ ಬ್ಯಾಂಕ್‌ ಇರುವುದು ಪತ್ತೆಯಾಗಿದೆ. 
ಲಗೇಜ್ ನಲ್ಲಿ ಸ್ಫೋಟಕ ವಸ್ತು ಅಥವಾ ಡ್ರಗ್ಸ್‌ ಇರಬಹುದೇ ಎನ್ನುವ ಹಿನ್ನೆಲೆಯಲ್ಲಿ ಆತನನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗಿದೆ. ಬಾಂಬ್‌ ನಿಷ್ಕ್ರಿಯ ದಳ, ಶ್ವಾನ ದಳ ಸ್ಥಳಕ್ಕಾಗಮಿಸಿದ್ದು, ಪರಿಶೀಲನೆ ನಡೆಸಿದವು. ಈ ವೇಳೆ  ಆತನ ಬ್ಯಾಗ್‌ನಲ್ಲಿ ಸ್ವ ನಿರ್ಮಿತ ಮೊಬೈಲ್‌ ಪವರ್‌ ಬ್ಯಾಂಕ್‌ ಪತ್ತೆಯಾಗಿದೆ. ಈ ಪವರ್‌ ಬ್ಯಾಂಕ್‌ನ ಒಳಗಡೆ ಸಕ್ರ್ಯೂಟ್‌ ಇದ್ದು, ಜತೆಗೆ ಮಣ್ಣಿನ ಮಾದರಿಯ ವಸ್ತುವೊಂದು ಪತ್ತೆಯಾಗಿದೆ. 
ಸುಮಾರು ಒಂದು ಗಂಟೆಯ ತರುವಾಯ ದುಬೈ ವಿಮಾನ ಟೇಕ್ ಆಫ್ ಆಗಿದ್ದು ಆರೋಪಿಯನ್ನು ವಶಕ್ಕೆ ಪಡೆದ ಪೋಲೀಸರು ತನಿಖೆ ಕೈಗೊಂದಿದ್ದಾರೆ.
SCROLL FOR NEXT