ಹಿರಿಯ ಪತ್ರಕರ್ತೆ ಹಾಗೂ ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ 
ರಾಜ್ಯ

ಗೌರಿ ಹತ್ಯೆ ತನಿಖೆ ಚುರುಕು: ಕರಪತ್ರ ಅಂಟಿಸಿ ಹಂತಕರ ಮಾಹಿತಿಗಾಗಿ ಪೊಲೀಸರ ಮನವಿ

ಹಿರಿಯ ಪತ್ರಕರ್ತೆ ಹಾಗೂ ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಚುರುಕುಗೊಳಿಸಿರುವ ಅಧಿಕಾರಿಗಳು, ರಾಜರಾಜೇಶ್ವರಿ ನಗರದಲ್ಲಿ ಕರಪತ್ರಗಳನ್ನು ಅಂಟಿಸಿ ಹಂತಕರ ಬಗ್ಗೆ ಮಾಹಿತಿ ನೀಡುವಂತೆ...

ಬೆಂಗಳೂರು: ಹಿರಿಯ ಪತ್ರಕರ್ತೆ ಹಾಗೂ ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಚುರುಕುಗೊಳಿಸಿರುವ ಅಧಿಕಾರಿಗಳು, ರಾಜರಾಜೇಶ್ವರಿ ನಗರದಲ್ಲಿ ಕರಪತ್ರಗಳನ್ನು ಅಂಟಿಸಿ ಹಂತಕರ ಬಗ್ಗೆ ಮಾಹಿತಿ ನೀಡುವಂತೆ ಸ್ಥಳೀಯರ ಬಳಿ ಮನವಿ ಮಾಡಿಕೊಂಡಿದ್ದಾರೆ. 
ರಾಜರಾಜೇಶ್ವರಿ ನಗರದಲ್ಲಿನ ತಮ್ಮ ಸ್ವಗೃಹದಲ್ಲಿಯೇ ಗೌರಿ ಲಂಕೇಶ್ ಅವರ ಹತ್ಯೆಯಾಗಿತ್ತು. ಇದಾದ ಬಳಿಕ ಆಪಾರ್ಟ್ ಮೆಂಟ್ ಗಳಲ್ಲಿದ್ದವರು, ಬಾಡಿಗೆ ಮನೆಯಲ್ಲಿದ್ದವರು, ಹೋಟೆಲ್, ಪಿಜಿ, ಹಾಸ್ಟೆಲ್, ರೆಸಾರ್ಟ್ ಗಳಲ್ಲಿದ್ದ ಸಾಕಷ್ಟು ಮಂದಿ ಸ್ಥಳವನ್ನು ತೊರೆದಿದ್ದರು. 
ಇದೀಗ ತನಿಖೆಯನ್ನು ಚುರುಕುಗೊಳಿಸಿರುವ ಅಧಿಕಾರಿಗಳು ರಾಜರಾಜೇಶ್ವರಿ ನಗರ ಪೊಲೀಸ್ ಇನ್ಸ್ ಪೆಕ್ಟರ್ ಸಹಿ ಮಾಡಿರುವ 4,000 ಕರಪತ್ರಗಳನ್ನು ಸ್ಥಳಗಳಲ್ಲಿ ಅಂಟಿಸಿದ್ದು, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಮಾಹಿತಿಗಳು ಸಿಕ್ಕರೂ ಮಾಹಿತಿ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. 
ಈಗಾಗಲೇ 22,000 ಕರಪತ್ರಗಳನ್ನು ಮುದ್ರಿಸಲಾಗಿದ್ದು, ಇದರಲ್ಲಿ 4,000 ಕರಪತ್ರಗಳನ್ನು ಅಂಟಿಸಲಾಗಿದೆ. ಕರಪತ್ರದಲ್ಲಿ ಪೊಲೀಸರ ಇಮೇಲ್ ವಿಳಾಸ ಹಾಗೂ ಮೊಬೈಲ್ ಸಂಖ್ಯೆಗಳನ್ನು ನೀಡಲಾಗಿದ್ದು, ಹಂತಕರ ಕುರಿತಂತೆ ಯಾವುದೇ ರೀತಿಯ ಮಾಹಿತಿ ಸಿಕ್ಕರೂ ಕೂಡಲೇ ಪೊಲೀಸರಿಗೆ ತಿಳಿಸುವಂತೆ ಮನವಿ ಮಾಡಿದ್ದಾರೆ. 
ಇನ್ನು ಗೌರಿ ಹತ್ಯೆಯಾದ ಬಳಿಕ ವಿವಾದಾತ್ಮಕ ಹೇಳಿಕೆಗಳನನು ನೀಡಿದ್ದ 11ಕ್ಕೂ ಹೆಚ್ಚು ಜನರಿಗೆ ವಿಶೇಷ ತನಿಖಾ ದಳದ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದಾರೆಂದು ಮೂಲಗಳು ತಿಳಿಸಿವೆ. 
ಹತ್ಯೆಯಾಗುವುದಕ್ಕೂ ಮುನ್ನ ಗೌರಿಯವರು ಜ್ಯೋತಿಷಿಯೊಬ್ಬರ ವಿರುದ್ಧ ಲೇಖನವೊಂದನ್ನು ಬರೆದಿದ್ದರು. ಈ ಸಂಬಂಧ ಎಸ್ಐಟಿ ಅಧಿಕಾರಿಗಳು ಆರ್'ಟಿ ನಗರದಲ್ಲಿರುವ ಜ್ಯೋತಿಷಿಯೊಬ್ಬರನ್ನು ವಿಚಾರಣೆ ನಡೆಸಿದ್ದಾರೆಂದು ತಿಳಿದುಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್