ರಾಜ್ಯ

ನಗರದ ಬಡ ಮತದಾರರ ಮೇಲೆ ಕಣ್ಣು: 1 ಲಕ್ಷ ಮಂದಿಗೆ ಫ್ಲ್ಯಾಟ್ ನೀಡುವ ಯೋಜನೆಗೆ ಸಂಪುಟ ಅಸ್ತು

Shilpa D
ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಡ ಮತದಾರರನ್ನು ಓಲೈಸಲು ಮುಂದಾಗಿರುವ ರಾಜ್ಯ ಸರ್ಕಾರ ನಗರದಲ್ಲಿರುವ ಬಡವರಿಗೆ 1 ಲಕ್ಷ ಫ್ಲ್ಯಾಟ್ ನೀಡುವ ಜನಪ್ರಿಯ ಯೋಜನೆ ಘೋಷಿಸಿದೆ.
ಒತ್ತುವರಿ ತೆರವು ಮಾಡಿ ಕಂದಾಯ ಇಲಾಖೆ ಸ್ವಾಧೀನಪಡಿಸಿಕೊಂಡಿರುವ ಸುಮಾರು 4,500 ಎಕರೆ ಜಮೀನಲ್ಲಿ  468 ಎಕರೆ ಬಳಸಿಕೊಂಡು ಮೂರು ಮಹಡಿಯ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಿ ಬಡವರಿಗೆ ಫ್ಲ್ಯಾಟ್ ಹಂಚಿಕೆ ಮಾಡಲಾಗುವುದು ಎಂದು ಸಂಪುಟ ಸಭೆ ಬಳಿಕ ಕಾನೂನು ಸಚಿವ ಟಿ.ಬಿ. ಜಯಚಂದ್ರ ತಿಳಿಸಿದ್ದಾರೆ.
6,000 ಕೋಟಿ ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ. ಹುಡ್ಕೊದಿಂದ ರು.500 ಕೋಟಿ ಸಾಲ, ಕೇಂದ್ರ ಸರ್ಕಾರದ ರು, 1,100 ಕೋಟಿ ಬಳಸಲಾಗುವುದು. ಉಳಿದ ಮೊತ್ತವನ್ನು ರಾಜ್ಯ ಭರಿಸಲಿದೆ. ಗೃಹ ಮಂಡಳಿ, ಕೊಳೆಗೇರಿ ನಿರ್ಮೂಲನಾ ಮಂಡಳಿ, ರಾಜೀವ್‌ ಗಾಂಧಿ ವಸತಿ ನಿಗಮಗಳು ಜಂಟಿಯಾಗಿ ಈ ಯೋಜನೆ ಅನುಷ್ಠಾನ ಮಾಡಲಿವೆ ಎಂದೂ ಅವರು ಹೇಳಿದರು.
ಸಿದ್ಧವಾಗಿರುವ ಬ್ಲಾಕ್ಸ್‌ ಬಳಸಿ ಕೇವಲ ಆರು ತಿಂಗಳಿನಲ್ಲಿ ಇಂತಹ ಮನೆಗಳನ್ನು ನಿರ್ಮಿಸಿಕೊಡಲು ಸರ್ಕಾರ ಚಿಂತನೆ ನಡೆಸಿದೆ. ಫ್ಲ್ಯಾಟ್ ಪಡೆಯುವವರು 1 ಲಕ್ಷ ರು ವಂತಿಗೆ ನೀಡಬೇಕಾಗುತ್ತದೆ, ಶೀಘ್ರವ ಮಾರ್ಗ ಸೂಚಿಗಳನ್ನು ಸಿದ್ದಪಡಿಸಿ ನಿರ್ಮಾಣ ಕಾರ್ಯ ಆರಂಭಿಸಲಾಗುವುದು, ಆರ್ಥಿಕವಾಗಿ ಬಲಹೀನರಾಗಿರುವ ಕನ್ನಡಿಗರಿಗೆ ಈ ಮನೆಗಳನ್ನು ಹಂಚಲಾಗುವುದು ಎಂದು ಹೇಳಿದ್ದಾರೆ.
SCROLL FOR NEXT