ರಾಜ್ಯ

ಬೆಂಗಳೂರು: ವಿಮಾನ ನಿಲ್ದಾಣದಲ್ಲಿ ಕನ್ನಡದಲ್ಲಿ ಮಾತನಾಡಿದ್ದಕ್ಕೆ ವ್ಯಕ್ತಿಗೆ ಕಿರುಕುಳ

Sumana Upadhyaya
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡದಲ್ಲಿ ಮಾತನಾಡಿದ್ದೇನೆ ಎಂಬ ಕಾರಣಕ್ಕೆ ಗೊಏರ್ ವಿಮಾನದ ಒಳಹೋಗಲು ಪ್ರವೇಶ ನಿರಾಕರಸಿ ಅಲ್ಲಿನ ಸಿಬ್ಬಂದಿ ತಮ್ಮನ್ನು ಕೀಳಾಗಿ ನಡೆಸಿಕೊಂಡರು ಎಂದರು ಪ್ರಯಾಣಿಕರೊಬ್ಬರು ನೀಡಿದ ದೂರಿಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಬಳಿ ವರದಿ ಕೇಳಿದೆ. ಅಲ್ಲದೆ ಸರ್ಕಾರದಿಂದ ಕೂಡ ಕನ್ನಡ ಅಭಿವೃದ್ಧಿ ಪ್ರಾಧಿಕಾರ ವಿವರ ಕೇಳಿದೆ.
ಬೆಂಗಳೂರು ಮೂಲದ ಉದ್ಯಮಿ ಬಾಲಾಜಿ ನಾರಾಯಣ್ ಮೂರ್ತಿ ಮೊನ್ನೆ ಸಾಯಂಕಾಲ 5.40ರ ಸುಮಾರಿಗೆ ಮುಂಬೈಗೆ ವಿಮಾನದಲ್ಲಿ ತೆರಳಲು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಮಳೆಯಿಂದಾಗಿ ಬರುವುದು ತಡವಾಗಿತ್ತು. ಇನ್ನೂ ಕೆಲ ಪ್ರಯಾಣಿಕರು ಕೂಡ ಬರುವುದು ತಡವಾಗಿತ್ತು. ಬೇರೆ ವಿಮಾನದಲ್ಲಿ ತೆರಳಲು ವ್ಯವಸ್ಥೆ ಮಾಡಲಾಗುವುದು ಎಂದು ವ್ಯವಸ್ಥಾಪಕರು ತಿಳಿಸಿದ್ದರು. ಆಗ ಬಾಲಾಜಿ ಮೂರ್ತಿ ಸಹ ಪ್ರಯಾಣಿಕರೊಬ್ಬರಲ್ಲಿ ಕನ್ನಡದಲ್ಲಿ ಮಾತನಾಡಲು ಆರಂಭಿಸಿದಾಗ ಗೊಏರ್ ಸಿಬ್ಬಂದಿ ಇಂಗ್ಲಿಷ್ ನಲ್ಲಿ ಮಾತನಾಡುವಂತೆ ಹೇಳಿದರು.
ನಂತರ ಬದಲಿ ವಿಮಾನ ಬಂದಾಗ ಮೂರ್ತಿಯವರಿಗೆ ವಿಮಾನವೇರಲು ಸಿಬ್ಬಂದಿ ಬಿಡಲಿಲ್ಲ. ಅದಕ್ಕೆ ತಾನು ಗೊಏರ್ ಸಂಸ್ಥೆಗೆ ಮೇಲ್ ಕಳುಹಿಸಿದರೆ ಗೊಏರ್ ದೂರು ಸ್ವೀಕರಿಸಲು ನಿರಾಕರಿಸಿದೆ. ನಂತರ ಸಿಸಿಟಿವಿ ಕ್ಯಾಮರಾ ತಪಾಸಣೆ ಮಾಡಿದಾಗ  ಸಿಬ್ಬಂದಿ ಮೂರ್ತಿಯವರ ಜೊತೆ ಅನುಚಿತವಾಗಿ ವರ್ತಿಸಿರುವುದು ಗೊತ್ತಾಗಿದೆ.
SCROLL FOR NEXT