ಮೆರವಣಿಗೆಗೆ ಸಿದ್ಧವಾಗುತ್ತಿರು ಸ್ಥಬ್ಧಚಿತ್ರಗಳು 
ರಾಜ್ಯ

ಮೈಸೂರು ದಸರಾ 2017: ಜಂಬೂ ಸವಾರಿಯಲ್ಲಿ ಗಮನ ಸೆಳೆಯಲು ಸ್ತಬ್ಧ ಚಿತ್ರಗಳು ಸಿದ್ಧ

ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿಗೆ ಸಿದ್ಧತೆ ಪೂರ್ಣಗೊಂಡಿರುವ ಬೆನ್ನಲ್ಲೇ ಜಂಬೂಸವಾರಿಯ ಮತ್ತೊಂದು ಆಕರ್ಷಣೆ ಸ್ಥಬ್ಧ ಚಿತ್ರಗಳ ಮೆರವಣಿಗೆಗೂ ಸಕಲ ಸಿದ್ಧತೆಗಳೂ ಪೂರ್ಣಗೊಂಡಿವೆ.

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿಗೆ ಸಿದ್ಧತೆ ಪೂರ್ಣಗೊಂಡಿರುವ ಬೆನ್ನಲ್ಲೇ ಜಂಬೂಸವಾರಿಯ ಮತ್ತೊಂದು ಆಕರ್ಷಣೆ ಸ್ಥಬ್ಧ ಚಿತ್ರಗಳ ಮೆರವಣಿಗೆಗೂ ಸಕಲ ಸಿದ್ಧತೆಗಳೂ ಪೂರ್ಣಗೊಂಡಿವೆ.
ನಾಡಿನ ವಿವಿಧ ಕಲಾ ತಂಡಗಳು ಹಾಗೂ ವಿವಿಧ ಸಾಂಸ್ಕ್ರತಿಕ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲ್ಲಿದ್ದು, ಮೆರವಣಿಗೆಯಲ್ಲಿ ಜನರ ಮನಸೂರೆಗೊಳಿಸುವ ಸ್ತಬ್ಧ ಚಿತ್ರಗಳೂ ಕೂಡ ಪಾಲ್ಗೊಳ್ಳಲ್ಲಿವೆ. ಜಂಬೂ ಸವಾರಿ ಅಂಬಾರಿ  ಆನೆಗಳ ಜತೆ ಹೆಜ್ಜೆ ಹಾಕಲು ಸ್ಥಬ್ಧಚಿತ್ರಗಳು ತಯಾರಾಗಿದ್ದು, ವಿವಿಧ ಜಿಲ್ಲೆಗಳ ಸುಮಾರು 40 ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ.

ಪ್ರಮುಖವಾಗಿ ಸರ್ಕಾರದ ಜನಪ್ರಿಯ ಯೋಜನೆಗಳನ್ನು ಬಿಂಬಿಸುವ ಸ್ಥಬ್ಧ ಚಿತ್ರಗಳು, ಜಿಲ್ಲೆಗಳ ಸಾಂಸ್ಕ್ರತಿಕತೆಯನ್ನು ಬಿಂಬಿಸುವ ಸ್ಥಬ್ಧಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿವೆ. ಈ ಪೈಕಿ ಸಿಎಂ ಸಿದ್ದರಾಮಯ್ಯ ಸರ್ಕಾರದ  ಜನಪ್ರಿಯ ಯೋಜನೆಗಳಾದ ಇಂದಿರಾ ಕ್ಯಾಂಟೀನ್ ಯೋಜನೆಯ ಜನಸಾಮಾನ್ಯರ ಆಹಾರ ತಾಣ ಸ್ಧಬ್ಧಚಿತ್ರ, ನುಡಿದಂತೆ ನಡೆಯುತ್ತಿರುವ ಜನಪರ ಸರ್ಕಾರ ಎಂಬ ಸ್ಥಬ್ಧಚಿತ್ರ, ಜೀವಜಲ ಸಂರಕ್ಷಣೆ, ಆರೋಗ್ಯವೇ ಭಾಗ್ಯ, ಸ್ವಚ್ಛ  ಭಾರತ್ ಮಿಷನ್ ಯಶೋಗಾಥೆ, ಶುದ್ಧೀಕರಿಸಿದ ನೀರು ಮರುಬಳಕೆ, ನೀರಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ ಸೇರಿದಂತೆ ವಿವಿಧ ಜಿಲ್ಲೆಗಳ ಸಾಂಸ್ಕೃತಿಕ ಹಾಗೂ ಐತಿಹಾಸಿಕತೆಯನ್ನು ಬಿಂಬಿಸುವ ಚತುರ್ಮುಖ ಬಸದಿ, ಜಾಗತಿಕ ಜೈನ  ಕ್ಷೇತ್ರ ಶ್ರವಣಬೆಳಗೊಳ ಸಿರಿ, ಆನೆಗೊಂದಿ ಅರಮನೆ, ಜಾನಪದ ಸಿರಿ, ಶ್ರೀರಂಗನಾಥಸ್ವಾಮಿ ದೇವಸ್ಥಾನ, ತುಮಕೂರಿನ ಯಡಿಯೂರು ಸಿದ್ದಲಿಂಗೇಶ್ವರ, ಚಿಕ್ಕಮಗಳೂರಿನ ದೇವೀರಮ್ಮನ ಬೆಟ್ಟ, ಮದಕರಿನಾಯಕ ದುರ್ಗದ  ಗತವೈಭವ, ಭೂತನಾಥ ದೇವಾಲಯ, ಮಡಿವಾಳ ಮಾಚಿದೇವರ ಹೊಂಡ, ನವರಂಗ ದರ್ವಾಜ್ ಮುದಗಲ್ ಕೋಟೆ ಸೇರಿದಂತೆ ಒಟ್ಟು 40 ಸ್ಥಬ್ಧಚಿತ್ರಗಳು ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಲೀಟರ್‌ಗೆ 8 ರೂ. ಏರಿಕೆಗೆ ಸಂಪುಟ ಸಮ್ಮತಿ!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!