ರಾಜ್ಯ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ 2017-18ರ ಅವಧಿಯಲ್ಲಿ 100 ಕೆಜಿ ಚಿನ್ನ ವಶ

Nagaraja AB

ಬೆಂಗಳೂರು :  ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2017-18 ರ ಅವಧಿಯಲ್ಲಿ ದಾಖಲೆ ಪ್ರಮಾಣದಲ್ಲಿ 30.48 ಕೋಟಿ ರೂ. ಮೌಲ್ಯದ 100 ಕೆಜಿ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.2016-17ರ ಅವಧಿಯಲ್ಲಿ 9. 97 ಕೋಟಿ ಮೌಲ್ಯದ 34. 495 ಕೆಜಿ ಚಿನ್ನ ವಶಪಡಿಸಿಕೊಳ್ಳಲಾಗಿತ್ತು. ಈ ಬಾರಿ ಶೇ. 200 ರಷ್ಟು ಹೆಚ್ಚಾಗಿದೆ.

ಹಣ್ಣಿನ ಜ್ಯೂಸ್ , ಮಿಕ್ಸರ್ ನಲ್ಲಿ ಗೋಲ್ಡ್ ಬಿಸ್ಕತ್, ಮಹಿಳೆಯರ ಕೊದಲಿನ ಕ್ಲಿಪ್ ನಲ್ಲಿ  ಚಿನ್ನದ ತುಣುಕುಗಳು, ತಾಮ್ರ ಲೇಪಿತ ಚಿನ್ನಾಭರಣ ಸೇರಿದಂತೆ ವಿವಿಧ ಮಾದರಿಯಲ್ಲಿ ಚಿನ್ನದ ಕಳ್ಳಸಾಗಣೆಯನ್ನು ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಭಾರೀ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಸುಕ್ಕುಗಟ್ಟಿದ್ದ ಬಾಕ್ಸ್ ಗಳಲ್ಲಿ ಪ್ರಯಾಣಿಕರು ದುಬೈನಿಂದ ತಂದಿದ್ದ ಸುಮಾರು 1 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ . ಕೊರಿಯರ್ ಮೂಲಕ ಬಂದಿದ್ದ 33. 5 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರಕರಣ ಸಂಬಂಧ ಜೋರ್ಡಾನ್,  ಶ್ರೀಲಂಕಾ ಪ್ರಜೆಗಳು ಸೇರಿದಂತೆ  34 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಶ್ರೀಲಂಕಾ ಮತ್ತು ದಕ್ಷಿಣ ಪೂರ್ವ ಏಷ್ಯಾ ರಾಷ್ಟ್ರಗಳ ಕಡೆಯಿಂದಲೇ ಹೆಚ್ಚಿನ ಸಂಖ್ಯೆಯ ಕಳ್ಳಸಾಗಣೆಯ ಪ್ರಕರಣಗಳು ಕಂಡುಬರುತ್ತಿವೆ ಎಂದು ಕಸ್ಟಮ್ಸ್ ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.

SCROLL FOR NEXT