ರಾಜ್ಯ

38 ಮೆಟ್ರೊ ನಿಲ್ದಾಣಗಳಲ್ಲಿ 66 ಎಸ್ ಬಿಐ ಎಟಿಎಂಗಳು

Sumana Upadhyaya

ಬೆಂಗಳೂರು: ಮೆಟ್ರೊ ಸ್ಟೇಷನ್ ಗಳಲ್ಲಿ ಪ್ರಯಾಣಿಕರಿಗೆ ಅನುಕೂಲವಾಗಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 66 ಎಟಿಎಂಗಳನ್ನು ತೆರೆಯಲಿದೆ.

ಬೆಂಗಳೂರು ಮೆಟ್ರೊ ರೈಲು ನಿಗಮ ಈ ಸಂಬಂಧ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯೊ ಜೊತೆ ಒಪ್ಪಂದ ಮಾಡಿಕೊಂಡಿದೆ. ಮೊದಲ ಹಂತದಲ್ಲಿ 38 ಮೆಟ್ರೊ ಕೇಂದ್ರಗಳಲ್ಲಿ 66 ಎಟಿಎಂ ಯಂತ್ರಗಳನ್ನು ತೆರೆಯಲಿದೆ. ಪ್ರಸ್ತುತ ಪ್ರತಿ ಮೆಟ್ರೊ ಕೇಂದ್ರಗಳಲ್ಲಿ ತಲಾ ಒಂದೊಂದು ಎಟಿಎಂ ಯಂತ್ರಗಳಿವೆ.

ಎಟಿಎಂಗಳನ್ನು ನಿಯೋಜಿಸಲು ಹಿಂದೆ ಕರೆಯಲಾಗಿದ್ದ ಅನುಮತಿ ಒಪ್ಪಂದ ಮುಗಿದಿದ್ದರಿಂದ ಬಿಎಂಆರ್ ಸಿಎಲ್ ಮತ್ತೆ ಟೆಂಡರ್ ಕರೆದಿತ್ತು. ಈ ಬಾರಿ ಎಸ್ ಬಿಐ ಮೊದಲ ಹಂತದಲ್ಲಿ ಒಟ್ಟು 40 ಮೆಟ್ರೊ ನಿಲ್ದಾಣಗಳಲ್ಲಿ 38 ನಿಲ್ದಾಣಗಳಲ್ಲಿ ಎಟಿಎಂ ಯಂತ್ರಗಳನ್ನು ನಿಯೋಜಿಸಿ ಕಾರ್ಯನಿರ್ವಹಿಸಲು ಅನುಮತಿ ಪಡೆದುಕೊಂಡಿದೆ. ಈ ಮೂಲಕ ಹಲವು ಮೆಟ್ರೊ ನಿಲ್ದಾಣಗಳಲ್ಲಿ ಒಂದಕ್ಕಿಂತ ಹೆಚ್ಚು ಎಟಿಎಂ ಕೇಂದ್ರಗಳಿರುತ್ತವೆ ಎಂದು ಬಿಎಂಆರ್ ಸಿಎಲ್ ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್ ಮತ್ತು ಎಸ್ ಬಿಐ ಮುಖ್ಯ ಪ್ರಧಾನ ವ್ಯವಸ್ಥಾಪಕ ಎಸ್ ಎಂ ಫಾರೂಕ್ ಶಹಬ್ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಇನ್ನೊಂದು ತಿಂಗಳಲ್ಲಿ ಈ ಎಟಿಎಂ ಯಂತ್ರಗಳು ಕಾರ್ಯನಿರ್ವಹಿಸುವ ಸಾಧ್ಯತೆಯಿದೆ. ಯಂತ್ರಗಳನ್ನು ತರಸಿ ಮೆಟ್ರೊ ನಿಲ್ದಾಣಗಳಲ್ಲಿ ನಿಯೋಜಿಸಲಾಗುತ್ತಿದ್ದು ಇನ್ನೊಂದು ತಿಂಗಳಲ್ಲಿ ಕಾರ್ಯನಿರ್ವಹಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT