ರಾಜ್ಯ

ವಿಧಾನಸಭೆ ಚುನಾವಣೆ: ಮಂಗಳೂರಿನಲ್ಲಿ ಶೌಚಾಲಯ ಬಳಕೆಗೆ ಅಡ್ಡಿಯಾದ ನೀತಿ ಸಂಹಿತೆ

Sumana Upadhyaya

ಮಂಗಳೂರು: ಇಲ್ಲಿನ ಮಹಾನಗರ ಪಾಲಿಕೆಯ ಕಟ್ಟಡದಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಶೌಚಾಲಯ ನಿರ್ಮಾಣದ ಕಾರ್ಯ ಮುಗಿಯುತ್ತಾ ಬಂದಿರುವುದರಿಂದ ಕುಲೂರು ಮೇಲ್ಸೇತುವೆ ಹತ್ತಿರ ಸಂಚಾರ ದಟ್ಟಣೆ ಕಡಿಮೆಯಾಗಬಹುದು ಎಂದು ಸಂಚಾರಿ ಪೊಲೀಸರು ಮತ್ತು ಸುತ್ತಮುತ್ತಲಿನ ಸಣ್ಣ ಅಂಗಡಿ ಮಾಲಿಕರು ಸಮಾಧಾನ ನಿಟ್ಟುಸಿರು ಬಿಡುತ್ತಿದ್ದಾರೆ.

ಇಷ್ಟು ದಿನ ಅಲ್ಲಿ ಜನರು ಬಯಲಿನಲ್ಲಿ ಶೌಚಾಲಯ ಮಾಡುತ್ತಿದ್ದರು. ಮಂಗಳೂರು ಮಹಾನಗರ ಪಾಲಿಕೆ ಶೌಚಾಲಯ ನಿರ್ಮಿಸುವ ಗೊಡವೆಗೆ ಇಷ್ಟು ದಿನ ಹೋಗಿರಲಿಲ್ಲ. ಆದರೆ ಇದೀಗ ಕೆಲವು ವಾರಗಳ ಹಿಂದೆ ಮಹಾನಗರ ಪಾಲಿಕೆ ಕಟ್ಟಡದೊಳಗೆ ಶೌಚಾಲಯ ನಿರ್ಮಾಣ ಕಾರ್ಯ ಮುಗಿದಿದ್ದು ಸಾರ್ವಜನಿಕ ಬಳಕೆಗೆ ಸಿದ್ದವಾಗಿದೆ. ಆದರೂ ಕೂಡ ಇನ್ನು ಕೂಡ ಅದನ್ನು ತೆರೆದಿಲ್ಲ ಎನ್ನುತ್ತಾರೆ ಶೌಚಾಲಯ ಕಟ್ಟಡದ ಹತ್ತಿರವಿರುವ ಸಣ್ಣ ಟೀ ಅಂಗಡಿ ಮಾಲಿಕ.

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸಾರ್ವಜನಿಕ ಬಳಕೆಗೆ ಶೌಚಾಲಯವನ್ನು ಇನ್ನು ಕೂಡ ತೆರೆದಿಲ್ಲ ಎಂದು ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಹೇಳುತ್ತಾ ಆಡಿಯೊ ಮಾಡಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶೌಚಾಲಯವನ್ನು ಉದ್ಘಾಟನೆ ಮಾಡದೆ ಸಾರ್ವಜನಿಕ ಬಳಕೆಗೆ ಸಾಧ್ಯವಿಲ್ಲ ಎಂದು ಸಹಾಯಕ ಎಂಜಿನಿಯರ್ ರವಿ ಶಂಕರ್ ಹೇಳುವ ಆಡಿಯೊ ವೈರಲ್ ಆಗಿದೆ.

ಶಶಿಧರ್ ಶೆಟ್ಟಿ ಎನ್ನುವ ಕಾರ್ಯಕರ್ತರು ರವಿ ಶಂಕರ್ ಜೊತೆಗೆ ನಡೆಸಿದ ಸಂಭಾಷಣೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ ಲೋಡ್ ಮಾಡಿದ್ದು, ಶೌಚಾಲಯವನ್ನು ಬಳಸದಿದ್ದರೆ ಸಾರ್ವಜನಿಕರ ಹಣ ಪೋಲಾಗುತ್ತದೆ. ಶೌಚಾಲಯ ಕಟ್ಟಡವನ್ನು ಕೂಡ ಇಂದಿರಾ ಕ್ಯಾಂಟೀನ್ ರೀತಿಯಲ್ಲಿ ಉದ್ಘಾಟನೆ ಮಾಡುತ್ತಾರೆಯೇ ಎಂದು ಅವರು ಕೇಳಿದ್ದಾರೆ.

SCROLL FOR NEXT