ರಾಜ್ಯ

ಬಂದ್ ಗಳಿಂದ, ಸಹಜ ಜನಜೀವನದ ಮೇಲೆ ಪರಿಣಾಮವಿಲ್ಲ: ಹೈಕೋರ್ಟ್ ಗೆ ಸರ್ಕಾರದ ವಿವರಣೆ

Shilpa D
ಬೆಂಗಳೂರು: ರಾಜ್ಯದಲ್ಲಿ ನಡೆಯುವ ಬಂದ್ ಗಳಿಂದಾಗಿ ದೈನಂದಿನ ಜೀವನದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಗೆ  ರಾಜ್ಯ ಸರ್ಕಾರ ಮಾಹಿತಿ ನೀಡಿದೆ.
ಕನ್ನಡ ಪರ ಸಂಘಟನೆಗಳು ಪದೇ ಪದೆ ಬಂದ್‌ ಗೆ ಕರೆ ನೀಡುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಹಾಗೂ ನ್ಯಾ. ಬಿ.ಎಂ.ಶ್ಯಾಮ್‌ ಸುಂದರ್‌ ಅವರಿದ್ದ ವಿಭಾಗೀಯ ಪೀಠ  ರಾಜ್ಯ  ಸರ್ಕಾರ  ಸೂಕ್ತ ವಿವರಣೆ ನೀಡುವಂತೆ ಸೂಚಿಸಿ ವಿಚಾರಣೆಯನ್ನು ಏಪ್ರಿಲ್ 26ಕ್ಕೆ ಮುಂದೂಡಲಾಗಿದೆ.
ಬಂದ್ ಗಳಿಗೆ ಕರೆ ನೀಡುವ ವೇಳೆ ಸರ್ಕಾರ ಸಾರ್ವಜನಿಕ ಸಾರಿಗೆ ಸೇವೆಯನ್ನು ತಡೆಹಿಡಿಯಬಾರದು ಎಂದು ಹೇಳಲಾಗಿದೆ,
ಕಳೆದ ಫೆಬ್ರವರಿ ತಿಂಗಳಲ್ಲಿ ಮಹಾದಾಯಿ ವಿವಾದ ಸಂಬಂಧ ಬಂದ್ ಆಚರಣೆ ವೇಳೆ ಬಿಎಂಟಿಸಿ ಬಸ್ಲ ಸೇವೆಯನ್ನು ಹಿಂತೆಗೆದುಕೊಳ್ಳಲಾಗಿತ್ತು ಎಂಬ  ಅರ್ಜಿದಾರರ ಸಲಹೆ ನ್ಯಾಯಾಲಯದ ಗಮನ ಸೆಳೆದಿತ್ತು,
ಬಂದ್‌ ಮಾಡುವುದು ಅಸಂವಿಧಾನಿಕ ಎಂದು ಸುಪ್ರೀಂಕೋರ್ಟ್‌ ಈಗಾಗಲೇ ಆದೇಶ ನೀಡಿದೆ ಆದರೂ ಮತ್ತೆ ಬಂದ್‌ ಆಚರಣೆಗೆ ತಡೆ ಆದೇಶ ನೀಡುವ ಅಗತ್ಯವಿದೆಯೇ ಎಂದು ಹೈಕೋರ್ಟ್ ಪ್ರಶ್ನಿಸಿತ್ತು. 
SCROLL FOR NEXT