ಕೊಪ್ಪಳ: ನಾಗರಿಕರಲ್ಲಿ ಅದರಲ್ಲೂ ವಿಶೇಷವಾಗಿ ಯುವಜನತೆಯಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸಲು ಕೊಪ್ಪಳ ಜಿಲ್ಲೆಯ ಅಧಿಕಾರಿಗಳು ಇನ್ಸ್ಟಾಗ್ರಾಮ್ ನಂತೆ ವೋಟ್ ಗ್ರಾಮ್ ಎಂಬ ವೆಬ್ ಸೈಟ್ ನ್ನು ಕೊಪ್ಪಳ ವೈದ್ಯಕೀಯ ಕಾಲೇಜಿನಲ್ಲಿ ಆರಂಭಿಸಿದ್ದಾರೆ.
ಮತದಾನ ಮಾಡಬೇಕೆಂದು ಸಂದೇಶ ಸಾರುವ ಸೆಲ್ಫಿಯನ್ನು ಚುನಾವಣೆಯ ರಾಯಭಾರಿ ರಾಹುಲ್ ದ್ರಾವಿಡ್ ಫೋಟೋದೊಂದಿಗೆ ವೆಬ್ ಸೈಟ್ ನ ಫ್ರೇಮ್ ಒಳಗೆ ಅಪ್ ಲೋಡ್ ಮಾಡಬೇಕು. ಈ ಫೋಟೋ ಬೇರೆ ಸಾಮಾಜಿಕ ಮಾಧ್ಯಮಗಳಲ್ಲಿ ಕೂಡ ಶೇರ್ ಆಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಅಕೌಂಟ್ ಹೊಂದಿರುವವರ ಫೋಟೋದೊಂದಿಗೆ ಶೇರ್ ಆಗುತ್ತದೆ.
ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೆಂಕಟ್ ರಾಜ್ ವೋಟ್ ಗ್ರಾಮ್ ವೆಬ್ ಸೈಟ್ ನ್ನು ಆರಂಭಿಸಿದ್ದಾರೆ. ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ವೆಬ್ ಸೈಟ್ ಗೆ ಫೋಟೋಗೆ ಫೋಸ್ ಕೊಟ್ಟರು.