ರಾಜ್ಯ

ಕುಷ್ಟಗಿಯ ಈ ತಾಂಡಾ ಮತದಾರರು ಮತದಾನ ಮಾಡಲು 8 ಕಿಮೀ ದೂರ ನಡೆಯಬೇಕು!

Nagaraja AB

ಕೊಪ್ಪಳ:  ಕುಷ್ಟಗಿ ತಾಲೂಕಿನ ತಾಂಡ ಪ್ರದೇಶದ ಸುಮಾರು 200 ನಿವಾಸಿಗರು ಮತದಾನ ಮಾಡಲು 8 ಕಿ ಲೋ ಮೀಟರ್ ದೂರ ನಡಿಯಬೇಕಾಗಿದೆ.

ಕುಷ್ಟಗಿ ತಾಲೂಕಿನ ತಾವರಗೆರೆ ಪಟ್ಟಣ  ವ್ಯಾಪ್ತಿಯಲ್ಲಿ  ಗಡ್ಡೇರಹಟ್ಟಿ, ಅಲೇರ ಹಟ್ಟಿ, ಮತ್ತು ಕೃಷ್ಣಗಿರಿ ತಾಂಡಗಳಿವೆ.  ಈ ಪೈಕಿ ಗಡ್ಡರಹಟ್ಟಿಯಲ್ಲಿ ಸುಮಾರು 300 ಮತದಾರರಿದ್ದಾರೆ. ಇದು ತಾವರಗೆರೆಯಿಂದ 8 ಕಿಲೋ ಮೀಟರ್ ದೂರದಲ್ಲಿದ್ದು, ಇಲ್ಲಿಗೆ ಪ್ರತ್ಯೇಕವಾದ ಮತಗಟ್ಟೆ ಒದಗಿಸುತ್ತಿಲ್ಲ.

ಸರಿಯಾದ ರಸ್ತೆಯಿಲ್ಲದೆ ತಾವರಗೆರೆಗೆ ಹೋಗಲು ಮತದಾರರು ಹಿಂದೇಟು ಹಾಕುತ್ತಿದ್ದಾರೆ ಎಂದು ಗಡ್ಡೇರಹಟ್ಟಿ ಗ್ರಾಮಸ್ಥ ಶ್ಯಾಮಣ್ಣ ಗಡ್ಡೆ ಹೇಳುತ್ತಾರೆ.

ತಾವರಗೆರೆ ಕಂದಾಯ ವಲಯದಲ್ಲಿ ಅನೇಕ ತಾಂಡಾಗಳಿವೆ. ಯಾವುದರಲ್ಲಿಯೂ ಮತಗಟ್ಟೆಗಳಿಲ್ಲ. ಮತಕ್ಕಾಗಿ ಕಿಲೋಮೀಟರ್ ಗಟ್ಟಲೇ ಇಲ್ಲಿನ ಜನರನ್ನು ಒತ್ತಾಯಿಸಿ ಕರೆದೊಯ್ಯಲಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ತಾವರೆಗೆರೆ ಕಂದಾಯ ವ್ಯಾಪ್ತಿಯಲ್ಲಿ  ಸುಮಾರು 11 ಗ್ರಾಮಗಳ ನಿವಾಸಿಗಳು ಮತದಾನ ಮಾಡಲು ದೂರ ನಡೆಯಬೇಕಿದೆ.ಉದಾಹರಣೆಗೆ 400 ಮತದಾರರಿರುವ  ಚಿಕ್ಕಮೂರ್ತಿನಲ್  ಮತ್ತು ಹಡಗಲಿ ಗ್ರಾಮಗಳು  ಮಿನಿಡಲ್ ಮತಗಟ್ಟೆಯಿಂದ  4 ಕಿ. ಮೀ. ದೂರದಲ್ಲಿದೆ.

 ಆದರೆ, ಈ ತಾಂಡಾಗಳು  ಮತಗಟ್ಟೆ  ಹೊಂದುವಷ್ಟು ಕನಿಷ್ಠ 350 ಮತದಾರರನ್ನು ಹೊಂದಿಲ್ಲ ಎಂದು ಚುನಾವಣಾ ಅಧಿಕಾರಿಗಳು ಹೇಳುತ್ತಾರೆ.

ಹೆಚ್ಚಿನ ಸಂಖ್ಯೆಯ ಮತಗಟ್ಟೆ ಒದಗಿಸುವಂತೆ ನಿವಾಸಿಗಳು ಮನವಿ ಮಾಡಿರುವುದಾಗಿ ಕುಷ್ಟಗಿ ಶಿರಸೇದಾರ್ ಹೇಳಿದ್ದಾರೆ.

ಮಿನಿಡಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದಾಪುರ ಗ್ರಾಮದ ನಿವಾಸಿಗಳು ಕಳೆದ ಬಾರಿಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮತದಾನ ಬಹಿಷ್ಕರಿಸಿದ್ದರು. ಈ ಬಾರಿ ಮತಗಟ್ಟೆ ಒದಗಿಸಲಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

SCROLL FOR NEXT