ರಾಜ್ಯ

ಗೌರಿ ಲಂಕೇಶ್ ಹತ್ಯೆ ಕೇಸು: ಆರೋಪಿ ನವೀನ್ ಗೆ ಸದ್ಯದಲ್ಲಿಯೇ ಮಂಪರು ಪರೀಕ್ಷೆ

Sumana Upadhyaya

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಬಂಧಿತನಾಗಿರುವ ಕೆ.ಟಿ.ನವೀನ್ ಕುಮಾರ್ ನನ್ನು ಸದ್ಯದಲ್ಲಿಯೇ ಮಂಪರು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಕೇಸಿನ ವಿಚಾರಣೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ಗುಜರಾತ್ ನ ವಿಧಿವಿಜ್ಞಾನ ಪ್ರಯೋಗಾಲಯ ಮಂಪರು ಪರೀಕ್ಷೆಗೆ ಒಳಪಡಿಸಲು ಅವಧಿ ನೀಡಿದೆ.

ನವೀನ್ ಗೆ ಮಂಪರು ಪರೀಕ್ಷೆಗೊಳಪಡಿಸಲು ಸಮಯ ಕೋರಿ ವಿಶೇಷ ತನಿಖಾ ತಂಡ ಗುಜರಾತ್ ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪತ್ರ ಬರೆದಿತ್ತು. ವಿಧಿವಿಜ್ಞಾನ ಪ್ರಯೋಗಾಲಯ ನಮ್ಮ ಪತ್ರಕ್ಕೆ ಪ್ರತಿಕ್ರಿಯೆ ನೀಡಿದ್ದು ಏಪ್ರಿಲ್ 15ರಿಂದ 30ರೊಳಗೆ ಯಾವಾಗಲಾದರೂ ಆರೋಪಿಯನ್ನು ಕರೆತರಬಹುದು ಎಂದು ಪ್ರತಿಕ್ರಿಯೆ ಸಿಕ್ಕಿದೆ. ನವೀನ್ ನನ್ನು ಸದ್ಯದಲ್ಲಿಯೇ ಗುಜರಾತ್ ಗೆ ಕರೆದೊಯ್ಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನವೀನ್ ಕುಮಾರ್ ತನಿಖೆಗೆ ಸಹಕರಿಸದಿರುವುದರಿಂದ ಮತ್ತು ತನಿಖಾ ತಂಡದ ಜೊತೆ ಕೆಲವು ರಹಸ್ಯಗಳನ್ನು ಮರೆಮಾಚಲು ಪ್ರಯತ್ನಿಸುತ್ತಿರುವುದರಿಂದ ವಿಶೇಷ ತನಿಖಾ ತಂಡ ಮಂಪರು ಪರೀಕ್ಷೆ ನಡೆಸಲು ನಿರ್ಧರಿಸಿದೆ. ಕಳೆದ ಮಾರ್ಚ್ 12ರಂದು ನಗರದ ಮೂರನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆರೋಪಿಯನ್ನು ಮಂಪರು ಪರೀಕ್ಷೆ ನಡೆಸಲು ಅನುಮತಿ ನೀಡಿತ್ತು.

SCROLL FOR NEXT