ರಾಜ್ಯ

ಬೆಂಗಳೂರು: ಯುವತಿಗೆ ಲೈಂಗಿಕ ಕಿರುಕುಳ, ಪ್ರಶ್ನಿಸಿದ ಯುವಕನ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

Raghavendra Adiga
ಬೆಂಗಳೂರು: ಲೈಂಗಿಕ ಕುರುಕುಳಕ್ಕೊಳಗಾಗಿದ್ದ ಯುವತಿಯನ್ನು ರಕ್ಷಿಸಲು ಹೋದ ಖಾಸಗಿ ಸಂಸ್ಥೆ ಉದ್ಯೋಗಿಯೊಬ್ಬರಿಗೆ ನಾಲವರು ಯುವಕರು ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ಬೆಂಗಳೂರು ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ನಡೆದಿದೆ.
ಶುಕ್ರವಾರ ಮಧ್ಯಾಹ್ನ ನಡೆದ ಈ ಘಟನೆ ಸಂಬಂಧ ಕಾಸಗಿ ಸಂಸ್ಥೆ ಉದ್ಯೋಗಿ ಅರ್ಜುನ್ ನಂದಕುಮಾರ್ ತಮಗಾದ ಕಹಿ ಅನುಭವವನ್ನು ಫೇಸ್ ಬುಕ್ ಮೂಲಕ ಹಂಚಿಕೊಂಡಿದ್ದಾರೆ, ಬೆಂಗಳೂರು ಪೋಲೀಸರನ್ನು ಟೀಕಿಸಿರುವ ಅರ್ಜುನ್  ಬೆಂಗಳೂರು ಪೊಲೀಸರು ಯೂಸ್​ಲೆಸ್…! ಎಂದಿದ್ದಾರೆ ಹಾಗೆಯೇ ತಮ್ಮ ಪೋಸ್ಟ್ ನ್ನು  ಬೆಂಗಳೂರು ಪೊಲೀಸರ ಫೇಸ್​ಬುಕ್ ಪೇಜ್​ಗೆ ಟ್ಯಾಗ್ ಮಾಡಲಾಗಿದೆ.
ವಿಶೇಷವೆಂದರೆ ಈ ಘಟನೆ ಸಂಬಂಧ ಇದುವರೆಗೆ ಯಾವ ದೂರು ದಾಖಲಾಗಿಲ್ಲ! 
ಶುಕ್ರವಾರದ ಮಧ್ಯಾಹ್ನ ನಂದಕುಮಾರ್ ಹಾಗೂ ಯುವತಿ ಸೇರಿ ಇತರೆ ಮೂವರು ಮಧ್ಯಾಹ್ನದ ಊಟ ಪೂರೈಸಿ ಕಛೇರಿಗೆ ಮರಳುವಾಗ ಈ ಘಟನೆ ನಡೆದಿದೆ. ಬಾರ್ ನಲ್ಲಿ ಕುಡಿದು ಬಂದಿದ್ದ ಪಾನಮತ್ತರಾದ ನಾಲ್ವರು ಯುವಕರು ಯುವತಿಯನ್ನು ಗಮನಿಸಿದ್ದಾರೆ. ಮತ್ತು ಆಕೆ ಬಳಿ ಸಾರಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಆಗ ಆಕೆ ನಾಲ್ವರಲ್ಲಿ ಓರ್ವನ ಕೆನ್ನೆಗೆ ಬಲವಾಗಿ ಹೊಡೆದಿದ್ದಾಳೆ.
ಈ ಸಮಯದಲ್ಲಿ ನಂದಕುಮಾರ್ ಆ ಗುಂಪಿನತ್ತ ತೆರಳಿ ಯುವತಿಯನ್ನು ಬಿಡುವಂತೆ ಮನವಿ ಮಾಡಿದ್ದಾರೆ. ಆಗ ಪುಂಡರ ಗುಂಪು ಇವರತ್ತ ತಿರುಗಿ ಬೈಯ್ಯಲಾರಂಭಿಸಿದ್ದಲ್ಲದೆ ಹಿಗ್ಗಾ ಮುಗ್ಗಾ ಥಳಿಸಿದೆ. ನಂದಕುಮಾರ್ ಅವರ ಟಿ ಶಾರ್ಟ್ ಹರಿದಿದ್ದಾರೆ ಆದರೆ ಅಷ್ಟರಲ್ಲಿ ಅವರ ಸಹೋದ್ಯೋಗಿ ಒಬ್ಬರು ಪೋಲೀಸ್ ಗೆ ಕರೆ ಮಾಡುವುದನ್ನು ಕಂಡ ದುಷ್ಕರ್ಮಿಗಳು ಪರಾರಿಯಾಗಿದ್ದರು. 
ಆದರೆ ಇತ್ತ ಪೋಲೀಸರು ಮಾತ್ರ ತಾವು ಸ್ಥಳಕ್ಕೆ ಆಗಮಿಸುವವರೆಗೆ ಆ ಪಾನಮತ್ತ ಯುವಕರನ್ನು ಹಿಡಿದಿಟ್ಟುಕೊಳ್ಳಿ ಎಂದು ಅವರಿಗೆ ಸೂಚಿಸಿದ್ದರು! ನಂದಕುಮಾರ್ ಆರೋಪಿಸಿದ್ದಾರೆ.
"ನಮಗೆ ಇದುವರೆಗೆ ಪ್ರಕರಣ ಸಂಬಂಧ ಯಾವ ದೂರು ಸ್ವೀಕರಿಸಿಲ್ಲ. ನಾವು ಇಂತಹಾ ಘಟನೆಗೆ ಅವಕಾಶ ನೀಡುವುದಿಲ್ಲ . ನಾನು ಈ ಘಟನೆ ವಿವರ ತಿಳಿದುಕೊಳ್ಳುವಂತೆ ಡಿಸಿಪಿಗೆ ಸೂಚಿಸಿದ್ದೇನೆ.ಸಂತ್ರಸ್ತ ಯುವತಿಯಾಗಲಿ, ನಂದಕುಮಾರ್ ಅವರಾಗಲಿ ಪೋಲೀಸರನ್ನು ಸಂಪರ್ಕಿಸದ ಕಾರಣ ನಾವು ಕ್ರಮ ಜರುಗಿಸಲು ವಿಳಂಬವಾಗಿದೆ" ಹೆಚ್ಚುವರಿ ಪೊಲೀಸ್ ಆಯುಕ್ತ (ಪೂರ್ವ) ಸೀಮಂತ್ ಕುಮಾರ್ ಸಿಂಗ್ ಎಕ್ಸ್ ಪ್ರೆಸ್ ಗೆ ಹೇಳಿದ್ದಾರೆ.
ಘಟನೆ ಕುರಿತಂತೆ ಯಾರೊಬ್ಬರೂ ಪೋಲೀಸ್ ಠಾಣೆ ಅಥವಾ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿಲ್ಲ. ಹಾಗಾಗಿ ಯಾವುದೇ ಪ್ರಕರಣ ದಾಖಲಾಗಿಲ್ಲ" ನಂದಕುಮಾರ್ ಈ ಸಂಬಂಧ ಯಾವುದೇ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾದರೆ ದುಷ್ಕರ್ಮಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ" . ಜೀವನ್ ಬಿಮಾ ನಗರ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
SCROLL FOR NEXT