ರಾಜ್ಯ

ಕರ್ನಾಟಕ: ಹುಬ್ಬಳ್ಳಿಯ ಅಂಬೇಡ್ಕರ್ ಪ್ರತಿಮೆಯನ್ನು ಹಾಲಿನಿಂದ ಸ್ವಚ್ಛಗೊಳಿಸಿದ ದಲಿತರು

Manjula VN
ಹುಬ್ಬಳ್ಳಿ: ಅಂಬೇಡ್ಕರ್ ಪ್ರತಿಮೆಯೊಂದನ್ನು ದಲಿತ ನಾಯಕರು ಹಾಲಿನಿಂದ ಸ್ವಚ್ಛಗೊಳಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. 
ಮನುವಾದಿಗಳಿಂದ ಅಂಬೇಡ್ಕರ್ ಪ್ರತಿಮೆ ಅಪವಿತ್ರಗೊಂಡಿದೆ ಎಂದು ಹೇಳಿರುವ ದಲಿತ ನಾಯಕರು, ಪ್ರತಿಮೆಯನ್ನು ಹಾಲಿನಿಂದ ಸ್ವಚ್ಛಗೊಳಿಸಿದ್ದಾರೆ. 
ಅಂಬೇಡ್ಕರ್ ಅವರ ಸಿದ್ಧಾಂತಗಳ ವಿರುದ್ಧವಿರುವ ಬಿಜೆಪಿ ನಾಯಕರು ಹಾಗೂ ಬಲ ಪಂಥೀಯ ಕಾರ್ಯಕರ್ತರು, ಅಂಬೇಡ್ಕರ್ ಅವರ 127ನೇ ಹುಟ್ಟುಹಬ್ಬದ ದಿನದಂದು ಹೂಗುಚ್ಛಗಳನ್ನು ಸಲ್ಲಿಸಿದ್ದರು. ಬಿಜೆಪಿ ಹಾಗೂ ಬಲಪಂಥೀಯ ಕಾರ್ಯಕರ್ತರು ಪ್ರಚಾರದ ಉದ್ದೇಶದಿಂದ ಹೀಗೆ ಮಾಡಿದ್ದಾರೆ. ಆದರೆ, ಅವರು ಅಂಬೇಡ್ಕರ್ ಅವರನ್ನು ದ್ವೇಷಿಸುತ್ತಾರೆ ಎಂದು ದಲಿತ ಸಮುದಾಯದ ನಾಯಕ ವಿಜಯ್ ಗುಂಟ್ರಲ್ ಅವರು ಹೇಳಿದ್ದಾರೆ. 
ಬಿಜೆಪಿ ನಾಯಕರು ಹಾಗೂ ಮನುವಾದಿಗಳು ಸ್ಪರ್ಶದಿಂದಾಗಿ ಅಂಬೇಡ್ಕರ್ ಅವರ ಪ್ರತಿಮೆ ಅಪವಿತ್ರಗೊಂಡಿದೆ. ಹೀಗಾಗಿ ಪ್ರತಿಮೆಯನ್ನು ಹಾಲಿನಿಂದ ಸ್ವಚ್ಛಗೊಳಿಸಲಾಗಿದೆ ಎಂದಿದ್ದಾರೆ. 
ಬಿಜೆಪಿ ನಾಯಕರು ಸಂವಿಧಾನವನ್ನು ಬದಲಿಸುವುದಾಗಿ ಹೇಳಿದ್ದಾರೆ. ಎಸ್'ಸಿ/ಎಸ್'ಟಿ ಕಾಯ್ದೆ ಮೂಲಕ ದಲಿತರ ದನಿಯನ್ನು ಮೊಟಕುಗೊಳಿಸಲು ಯತ್ನಿಸುತ್ತಿದ್ದಾರೆ. ಮೋದಿಯವರು ಪ್ರಧಾನಮಂತ್ರಿಗಳಾದ ಬಳಿಕ ದಲಿತರ ಮೇಲಿನ ದೌರ್ಜನ್ಯ ಹೆಚ್ಚಾರಿದೆ. ಇದನ್ನು ಸಹಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. 
ಮನುವಾದಿಗಳು ಹಾಗೂ ದಲಿತ ವಿರೋಧಿಗಳು ಆತ್ಮಸಾಕ್ಷಿಯನ್ನು ಶುದ್ಧೀಕರಿಸಬೇಕೆಂದು ನಾವು ಎಚ್ಚರಿಸುತ್ತಿದ್ದೇವೆಂದಿದ್ದಾರೆ. 
SCROLL FOR NEXT