ರಾಜ್ಯ

ಈ ಭಾನುವಾರ ಕಬ್ಬನ್ ಪಾರ್ಕ್ ನಲ್ಲಿ ನಿಮ್ಮ ನಾಯಿಗೆ ಲೈಸೆನ್ಸ್ ಪಡೆದುಕೊಳ್ಳಿ

Sumana Upadhyaya

ಬೆಂಗಳೂರು: ನೀವು ನಿಮ್ಮ ನಾಯಿಯನ್ನು ಪ್ರೀತಿಸುತ್ತಿದ್ದರೂ ಹಲವು ಕಾರಣಗಳಿಂದ ಅವುಗಳನ್ನು ಮನೆಯಲ್ಲಿ ಸಾಕಲು ಸಾಧ್ಯವಾಗದಿದ್ದರೂ ಕೂಡ ನಿಮ್ಮ ಪ್ರೀತಿಯ ನಾಯಿಗೆ ಲೈಸೆನ್ಸ್ ಮಾಡಿಸಿಕೊಳ್ಳುವ ಮೂಲಕ ಅದನ್ನು ಜತನದಿಂದ ಕಾಪಾಡಬಹುದು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಈಗಾಗಲೇ ನಾಯಿಗೆ ಪರವಾನಗಿ ಮಾಡಿಸಿಕೊಳ್ಳಬೇಕೆಂದು ಹೇಳಿದರೂ ಕೂಡ ಅದು ಬೆಂಗಳೂರು ನಗರದಲ್ಲಿ ಕಡ್ಡಾಯವಾಗಿರಲಿಲ್ಲ. ಅದಿನ್ನು ಸದ್ಯದಲ್ಲಿಯೇ ನಿಯಮವಾಗಿ ಜಾರಿಗೆ ಬರಲಿದೆ.

ಸ್ವಯಂ ಕಾರ್ಯಕರ್ತರ ಗುಂಪು ಕಬ್ಬನ್ ಪಾರ್ಕ್ ಕ್ಯಾನಿನ್ಸ್ (ಸಿಪಿಸಿ), ಬಿಬಿಎಂಪಿಯ ಜೊತೆ ಸೇರಿ ನಗರದ ನಾಯಿಗಳಿಗೆ ವಿಶೇಷ ಅಭಿಯಾನವೊಂದನ್ನು ಆಯೋಜಿಸಲಿದ್ದು ತಮ್ಮ ವಿಳಾಸ, ಸರ್ಕಾರಿ ಗುರುತು ಪತ್ರ ಮತ್ತು ನಾಯಿಗೆ ನೀಡಿದ ಚುಚ್ಚುಮದ್ದುಗಳ ದಾಖಲೆಗಳನ್ನು ಹೊಂದಿರಬೇಕು. ಪರವಾನಗಿ ಶುಲ್ಕ 110 ರೂಪಾಯಿ ಮತ್ತು ಒಂದು ಅರ್ಜಿಯನ್ನು ತುಂಬಬೇಕು. ಪರವಾನಗಿಯೊಂದಿಗೆ ನಾಯಿಯ ಆರೋಗ್ಯ ತಪಾಸಣೆ ಮತ್ತು ಚುಚ್ಚುಮದ್ದಿಗೆ ಸಬ್ಸಿಡಿ ಕೂಡ ದೊರೆಯಲಿದೆ.

ಕಬ್ಬನ್ ಪಾರ್ಕ್ ಕ್ಯಾನ್ಸ್ ಸ್ಥಾಪಕ ಪ್ರಿಯಾ ಚೆಟ್ಟಿ ರಾಜಗೋಪಾಲ್, ನಾಯಿಗೆ ಪರವಾನಗಿ ಮಾಡಿಸಿಕೊಳ್ಳುವುದು ಅತ್ಯಂತ ಜವಬ್ದಾರಿಯುತ ಕೆಲಸವಾಗಿದೆ. ದೆಹಲಿ, ಹೈದರಾಬಾದ್ ಮತ್ತು ಚೆನ್ನೈಯಂತೆ ಪ್ರಾಣಿದಯಾ ಮಂಡಳಿಯ ಅಧಿಸೂಚನೆ ಪ್ರಕಾರ ಪ್ರಾಣಿಗಳನ್ನು ಸಾಕಲು ಪರವಾನಗಿ ತೆಗೆದುಕೊಳ್ಳುವುದು ಮುಖ್ಯ ಎಂದರು.

ಇದೇ ಭಾನುವಾರ ಬೆಳಗ್ಗೆ 9ಗಂಟೆಯಿಂದ 11 ಗಂಟೆಯವರೆಗೆ ಕಬ್ಬನ್ ಪಾರ್ಕ್ ನಲ್ಲಿ ನಾಯಿಗಳಗೆ ಪರವಾನಗಿ ನೀಡಲಾಗುವುದು.

SCROLL FOR NEXT