ಹುಬ್ಬಳ್ಳಿ: ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅವರ ಕಾರು ಅಪಘಾತ ನಡೆದಿರುವುದು ಆಕಸ್ಮಿಕ ಅದರ ಹಿಂದೆ ಯಾವುದೇ ಸಂಚು ನಡೆದಿಲ್ಲ ಎಂದು ತನಿಖಾ ತಂಡ ಸ್ಪಷ್ಟ ಪಡಿಸಿದೆ.
ಹಾವೇರಿಯ ರಾಣೆಬೆನ್ನೂರು ತಾಲೂಕಿನ ಹಲಗೇರಿ ಸಮೀಪ ಮಂಗಳವಾರ ರಾತ್ರಿ ಸುಮಾರು 11.30 ಕ್ಕೆ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭ ಟ್ರಕ್ ಒಂದು ವೇಗವಾಗಿ ನುಗ್ಗಿ ಬಂದು ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆಯಿತು. ನಮ್ಮ ಕಾರು ವೇಗವಾಗಿದ್ದರಿಂದ ಅದೃಷ್ಟವಶಾತ್ ಪಾರಾದೆ. ಇದೊಂದು ಉದ್ದೇಶಿತ ಅಪಘಾತ ಪ್ರಯತ್ನ ಎಂದು ಅನಂತ್ ಕುಮಾರ್ ಹೆಗಡೆ ಆರೋಪಿಸಿ ಅನಂತ ಕುಮಾರ್ ಅಪಘಾತದ ವೀಡಿಯೋ ಮತ್ತು ಫೋಟೋಗಳನ್ನು ಟ್ವೀಟರ್‌ನಲ್ಲಿ ಪೋಸ್ಟ್ ಮಾಡಿದ್ದರು.
ಅಪಘಾತವಾದ ಬಗೆ ನೋಡಿದರೆ ಆಕಸ್ಮಿಕ ಎಂದು ತೋರುತ್ತಿಲ್ಲ. ಕೊಲೆ ಉದ್ದೇಶದಿಂದಲೇ ಅಪಘಾತ ಎಸಗಲಾಗಿದೆ. ಕುಡಿದು ಅಪಘಾತ ಎಸಗಿದ್ದಾನೆ ಎನ್ನಲು ಟ್ರಕ್ ಚಾಲಕ ಮದ್ಯ ಸೇವಿಸಿರಲಿಲ್ಲ ಎಂದು ಅನಂತ ಕುಮಾರ್ ಹೆಗಡೆ ಹೇಳಿದ್ದರು.
ಈ ಸಂಬಂಧ ತನಿಖೆ ನಡೆಸಿದ ಪೊಲೀಸರು ಅದೊಂದು ಆಕಸ್ಮಿಕ ಅಪಘಾತ, ಬೇರೆ ಯಾವುದೇ ಉದ್ದೇಶ ಇರಲಿಲ್ಲ ಎಂದು ಹೇಳಿದ್ದಾರೆ. ಅಪಘಾತದಲ್ಲಿ ಭಾಗಿಯಾಗಿರುವ ಲಾರಿ ಬಿಜೆಪಿ ಮಾಲೀಕರದ್ದಾಗಿದೆ, ಕೆಎ18-8733 ಲಾರಿಯನ್ನು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ದ ಬಿಜೆಪಿ ಮುಖಂಡ ರಮೇಶ್ ಪಿಲ್ಲಾಗಲ ಅವರಿಗೆ ಸೇರಿದ್ದಾಗಿದ್ದು, ನಂತರ ಅದನ್ನು ಕೊಪ್ಪದ ಮತ್ತೊಬ್ಬ ಮುಖಂಡ ಬಿ.ಜಿ ನಾಗೇಶ್ ಎಂಬುವರಿಗೆ ಮಾರಾಟ ಮಾಡಲಾಗಿತ್ತು. ಮೂವರು ಲಾರೀ ಮಾಲಿಕರು ಬಿಜೆಪಿ ಮುಖಂಡರಾಗಿದ್ದಾರೆ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.
ಈ ಸಂಬಂಧ ಪೊಲೀಸರು ರಮೇಶ್ ಮತ್ತು ನಾಗೇಶ್ ಅವರ ಜೊತೆ ಮಾತನಾಡಿದ್ದು ಸಚಿವರನ್ನು ಕೊಲ್ಲುವ ಯಾವುದೇ ಉದ್ದೇಶ ಇರಲಿಲ್ಲ ಎಂದು ಹೇಳಿದ್ದಾರೆ, ಇನ್ನೂ ಲಾರಿ ಚಾಲಕ ನಾಸೀರ್ ನನ್ನು ಬಂಧಿಸಿರುವ ಪೊಲೀಸರು ಆಥನ ಹೇಳಿಕೆ ಕೂಡ ಪಡೆದಿದ್ದಾರೆ, ಸಚಿವರ ಪೈಲಟ್ ವಾಹನ ಬರುತ್ತಿದ್ದು ಕಾಣಿಸಲಿಲ್ಲ ಎಂದು ಹೇಳಿದ್ದಾನೆ.
ಇನ್ನೂ ಅನಂತ್ ಕುಮಾರ್ ಹೆಗಡೆ ಅವರ ಕಾರು ಅಪಘಾತವಾಗಿರುವ ಸ್ಥಳವನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಲಾಗಿದೆ ಎಂದು ಹೇಳಿದ್ದಾರೆ...
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics