ಮಡಿಕೇರಿ: ಕೋಮು ರಾಜಕೀಯ ನಿಲ್ಲಿಸಿ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಭಾನುವಾರ ಹೇಳಿದ್ದಾರೆ.
ಮಡಿಕೇರಿ ನಗರದ ಪತ್ರಿಕಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಜಸ್ಟ್ ಆಸ್ಕಿಂಗ್ ಅಭಿಯಾನ ಪ್ರಯುಕ್ತ ನಡೆದ ಸಂವಾದ ಕಾರ್ಯಕ್ರದಲ್ಲಿ ಮಾತನಾಡಿರುವ ಅವರು, ನಾನು ಅರ್ಥಪೂರ್ಣ ಜೀವನವನ್ನು ನಡೆಸುತ್ತಿದ್ದೇನೆಂದು ಎನಿಸುತ್ತಿದೆ. ಮತದಾರರನ್ನು ಸೆಳೆಯುವ ಸಲವಾಗಿ ರಾಜಕೀಯ ನಾಯಕನಾಗಿ ನಾನು ಇಲ್ಲಿಗೆ ಬಂದಿಲ್ಲ. ಒಬ್ಬ ಸಾಮಾಜಿಕ ಹೋರಾಟಗಾರನಾಗಿ ಪ್ರಸ್ತುತ ನಿರ್ಮಾಣವಾಗಿರುವ ವ್ಯವಸ್ಥೆಯನ್ನು ಬದಲಿಸುವಂದೆ ಜಾಗೃತಿ ಮೂಡಿಸುವ ಸಲುವಾಗಿ ಸಾರ್ವಜನಿಕರೊಂದಿಗೆ ಮಾತನಾಡಲು ಬಂದಿದ್ದೇನೆಂದು ಹೇಳಿದ್ದಾರೆ.
ಗೌರಿ ಲಂಕೇಶ್ ಅವರ ಸಾವನ್ನು ಮೋದಿ ಅನುಯಾಯಿಗಳು ಹೇಗೆ ಸಂಭ್ರಮಿಸಿದರು ಎಂಬುದನ್ನು ನೋಡಿ ನನಗೆ ಬೇಸರವಾಯಿತು. ಹೀಗಾಗಿ ನಾನು ಹೋರಾಟಗಾರನಾಗಿ ಮುಂದಕ್ಕೆ ಬಂದೆ. ಇಂತಹ ಸಂಭ್ರಮಗಳಿಗೆ ಹೇಗೆ ಅವಕಾಶಗಳನ್ನು ಮಾಡಿಕೊಡಲಾಯಿತು ಎಂದು ಪ್ರಶ್ನಿಸಿ ಟ್ವಿಟರ್ ಮೂಲಕ ನನ್ನ ಹೋರಾಟವನ್ನು ಆರಂಭಿಸಿದ್ದೆ ಎಂದು ತಿಳಿಸಿದ್ದಾರೆ.
ರಾಜಕೀಯಕ್ಕೆ ಬರುವ ಸಲುವಾಗಿ ಜನರ ಗಮನ ಸೆಳೆಯರು ಸಾರ್ವಜನಿಕರ ಮುಂದೆ ನಾನು ಬರುತ್ತಿಲ್ಲ. ಆದರೆ, ಪ್ರಜಾಪ್ರಭುತ್ವದಲ್ಲಿ ಪಾಲ್ಗೊಳ್ಳುವಂತೆ ಜನರನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿದ್ದೇನೆ. ಕುವೆಂಪು, ಲಂಕೇಶ್, ತೇಜಸ್ವಿ ಮತ್ತು ಸಿದ್ದಲಿಂಗಯ್ಯ ಅವರೂ ಕೂಡ ಇದೇ ರೀತಿ ಹೋರಾಟ ಮಾಡಿದ್ದರು. ಅವರ ಹೆಜ್ಜೆಯಂತೆ ನಾನು ನಡೆಯುತ್ತಿದ್ದೇನಷ್ಟೇ ಎಂದಿದ್ದಾರೆ.
ಹಿಂದುಗಳು, ಕಮ್ಯುನಿಸ್ಟ್ ಗಳ ವಿರುದ್ಧವಿಲ್ಲ. ನಾನು ಪ್ರಜಾಪ್ರಭುತ್ವತವಾದೆ. ಜಾತಿ ಹಾಗೂ ಕೋಮು ರಾಜಕೀಯದಿಂದ ಭಾರತವನ್ನು ವಿಭಜನೆ ಮಾಡಲಾಗುತ್ತಿದೆ. ಇದು ಕೂಡಲೇ ನಿಲ್ಲಬೇಕು. ಧರ್ಮದ ಆಧಾರದ ಮೇಲೆ ಜನರು ಶಾಂತಿಯನ್ನು ಹುಡುಕಬೇಕು. ದ್ವೇಷದ ಹೋರಾಟದಿಂದಲ್ಲ ಎಂದು ತಿಳಿಸಿದ್ದಾರೆ.
ವಾಜಪೇಯಿ ನೇತೃತ್ವದ ಬಿಜೆಪಿ ವಿರುದ್ಧ ನಾನಿಲ್ಲ. ಆದರೆ, ಇಂದು ಬಿಜೆಪಿ ಧರ್ಮವನ್ನು ರಾಜಕೀಯಕ್ಕೆ ತರುತ್ತಿದೆ. ಇಂತಹ ವರ್ತನೆಯನ್ನು ಪ್ರಶ್ನಿಸಲು ನನಗೆ ಅವಕಾಶ ಕೊಡಿ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos