96 ಕೋಟಿ ಆದಾಯ ಹೊಂದಿರುವ ರಾಜ್ಯದ ಶ್ರೀಮಂತ ದೇವಾಲಯ ಕುಕ್ಕೆ!
ವಾರ್ಷಿಕ 96 ಕೋಟಿ ಆದಾಯ ಹೊಂದಿರುವ ಕುಕ್ಕೆಯ ಸುಬ್ರಹ್ಮಣ್ಯ ದೇವಾಲಯ ರಾಜ್ಯದ ಶ್ರೀಮಂತ ಮುಜರಾಯಿ ದೇವಾಲಯ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.
ವಾರ್ಷಿಕ 96 ಕೋಟಿ ಆದಾಯ ಹೊಂದಿರುವ ಕುಕ್ಕೆಯ ಸುಬ್ರಹ್ಮಣ್ಯ ದೇವಾಲಯ ರಾಜ್ಯದ ಶ್ರೀಮಂತ ಮುಜರಾಯಿ ದೇವಾಲಯ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.
ಕಳೆದ ವರ್ಷದಲ್ಲಿ ದೇವಾಲಯದ ವಾರ್ಷಿಕ ಆದಾಯ 89 ಕೋಟಿಯಷ್ಟಿತ್ತು. ಭಕ್ತಾದಿಗಳು ನೆರವೇರಿಸುವ ವಿವಿಧ ಸೇವೆಗಳಿಂದ ಆದಾಯ ಹೆಚ್ಚು ಬರುತ್ತಿದ್ದು, ಕೇವಲ ವಿವಿಧ ಸೇವೆಗಳಿಂದಲೇ 40.5 ಕೋಟಿ ರೂಪಾಯಿ ಆದಾಯ ಬಂದಿದೆ ಎಂದು ದೇವಾಲಯದ ಅಧಿಕಾರಿ ರವೀಂದ್ರ ಹೇಳಿದ್ದಾರೆ.
ಇನ್ನು ಹುಡಿ ಆದಾಯದ ಎರಡನೇ ಮೂಲವಾಗಿದ್ದು, 20.5 ಕೋಟಿಯಷ್ಟು ಹಣ ಹುಂಡಿಯಿಂದ ಸಂಗ್ರಹವಾಗಿದೆ. ಇದರ ಹೊರತಾಗಿ 19.4 ಕೋಟಿ ರೂಪಾಯಿ ಬ್ಯಾಂಕ್ ಬಡ್ದಿಯಿಂದ ಬರುತ್ತಿದೆ, ಕೃಷಿಯಿಂದ 14.7 ಕೋಟಿ ಅದಾಯ, ಬಾಡಿಗೆಯಿಂದ 2.5 ಕೋಟಿ ಆದಾಯ, ಸಮಾರಂಭಗಳಿಗಾಗಿ ಭವನಗಳ ಬಾಡಿಗೆಯಿಂದ 2.8, ಅರ್ಪಣೆಯಿಂದ 2.1 ಕೋಟಿ ರೂಪಾಯಿ ಇತರ ಮೂಲಗಳಿಂದ 7.9 ಕೋಟಿ ರೂಪಾಯಿ ಆದಾಯ ಬರುತ್ತಿದೆ.
ನಿಷೇಧಗೊಂಡಿರುವ ನೋಟುಗಳನ್ನೂ ಸಹ ಹುಂಡಿಗೆ ಹಾಕಲಾಗುತ್ತಿದ್ದು, ಅಮೆರಿಕ ಡಾಲರ್ ರೂಪದಲ್ಲಿಯೂ ಹುಂಡಿಗೆ ಹಣ ಬರುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.